ಇಸ್ರೇಲ್(Israel) ಹಾಗೂ ಹಮಾಸ್(Hamas) ಮಧ್ಯೆ ನಡೆಯುತ್ತಿರುವ ಯುದ್ಧ ಭಯಾನಕತೆ ಪಡೆದಿದೆ. ಇಸ್ರೇಲ್ ನಲ್ಲಿ ಪ್ರತಿಯೊಬ್ಬರ ಮನೆಗಳಿಗೂ ನುಗ್ಗಿ ಮಕ್ಕಳು, ಗರ್ಭಿಣಿಯರು, ಹಿರಿಯರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಹಮಾಸ್ ಉಗ್ರರ ಬಾಡಿ ಕ್ಯಾಮರಾದಿಂದ ಸೆರೆಹಿಡಿಯಲಾಗಿದೆ ಎನ್ನಲಾಗಿದ್ದರೂ ಯಾವಾಗ ಚಿತ್ರೀಕರಿಸಲಾಗಿದೆ ಎನ್ನುವ ಮಾಹಿತಿ ಸಿಕ್ಕಿಲ್ಲ.
ಶಸ್ತ್ರಾಸ್ತ್ರ ಸಜ್ಜಿತ ಹಮಾಸ್ ಉಗ್ರರು ಬೈಕ್ನಲ್ಲಿ ಬಂದು ಗಾಜಾ ಹಾಗೂ ದಕ್ಷಿಣ ಇಸ್ರೇಲ್ನ್ನು ಪ್ರತ್ಯೇಕಿಸುವ ಇಸ್ರೇಲ್ ಗಡಿ ದಾಟುತ್ತಿರುವುದನ್ನು ಕಾಣಬಹುದು. ಆನಂತರ ಹತ್ತಾರು ಮನೆಗಳಿರುವ ಪ್ರದೇಶಕ್ಕೆ ನುಗ್ಗುತ್ತಾರೆ. ಮನೆಯ ಒಳಗೆ ಪ್ರವೇಶಿಸಿ ಜನರನ್ನು ಕೊಲ್ಲಲು ಹುಡುಕಾಟ ಆರಂಭಿಸುತ್ತಾರೆ. ಅದೃಷ್ಟವಶಾತ್ ಎಲ್ಲರೂ ಮುಂಚಿತವಾಗಿಯೇ ಆ ಸ್ಥಳವನ್ನು ತೊರೆದು ಬೇರೆಡೆಗೆ ಹೋಗಿರುವುದು ಸ್ಪಷ್ಟವಾಗುತ್ತದೆ.