ಇವರು ಟೀಂ ಇಂಡಿಯಾಗೆ ಎಂಟ್ರಿ ಕೊಡೋದು ಕಷ್ಟ

1 min read
Hardik saaksha tv

ಟೀಮ್ ಇಂಡಿಯಾ ಕಂಬ್ಯಾಕ್ ಸದ್ಯಕ್ಕೆ ಅಸಾಧ್ಯ- ಟೆಸ್ಟ್ ಆಟ ಮುಗಿಸಿದ್ರಾ ಪಾಂಡ್ಯಾ, ಭುವಿ..?

ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ದೊಡ್ಡ ಸವಾಲಿನ ಕೆಲಸ. ಒಮ್ಮೆ ಸ್ಥಾನ ಪಡೆದುಕೊಂಡರೆ ನಿರಂತರವಾಗಿ ಉತ್ತಮ ಪ್ರದರ್ಶನವನ್ನು ನೀಡಲೇಬೇಕು. ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದರೆ ತಂಡದಿಂದ ಹೊರಬೀಳುವುದು ಖಚಿತ. ಇನ್ನೊಬ್ಬ ಆಟಗಾರ ಆ ಸ್ಥಾನವನ್ನು ಪಡೆಯಲು ಕಾಯುತ್ತಾ ಇರುತ್ತಾನೆ. ಆದರೆ ಈ ಮಧ್ಯೆ ಟೀಮ್ ಇಂಡಿಯಾದ 4 ಪ್ರಮುಖ ಕ್ರಿಕೆಟಿಗೆ ಟೆಸ್ಟ್ ಜೀವನ ಮುಗಿದಂತೆ ಕಾಣುತ್ತಿದೆ. ಅದ್ಭುತ ಕಂ ಬ್ಯಾಕ್ ಹೊರತಾಗಿ ಇವರನ್ನು ಟೆಸ್ಟ್ ಜೆರ್ಸಿಯಲ್ಲಿ ಮತ್ತೆ ಕಾಣುವುದು ಅಸಾಧ್ಯ.

ಹಾರ್ದಿಕ್ ಪಾಂಡ್ಯಾ:
ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯಾ ಮೇಲೆ ನಿರೀಕ್ಷೆ ಇತ್ತು. ಆದರೆ ಪಾಂಡ್ಯಾ ಠುಸ್ ಪಟಾಕಿ ಆಗಿದ್ದಾರೆ. ಬ್ಯಾಟಿಂಗ್ ಮಾಡಲಿಲ್ಲ, ಬೌಲಿಂಗ್ ಕೂಡ ಮಾಡಲಿಲ್ಲ. ಆದರೆ ತಂಡದೊಳಗೆ ಆಡುವ ಆಟಗಾರನಾಗಿದ್ದರು. ಟಿ20 ವಿಶ್ವಕಪ್ ಬಳಿಕ ಟಿ20 ತಂಡದಿಂದಲೂ ಪಾಂಡ್ಯ ಹೊರಬಿದ್ದಿದ್ದಾರೆ. ಇನ್ನು ಪಾಂಡ್ಯಾ ಟೆಸ್ಟ್ ಜೀವನವಂತೂ ಮುಗಿದೇ ಹೋದ ಹಾಗಿದೆ. ಟೀಮ್ ಇಂಡಿಯಾಕ್ಕೆ ಮೀಡಿಯಂ ಪೇಸ್ ಆಲ್‌ರೌಂಡರ್ ಅಗತ್ಯ ಇತ್ತು. ಆದರೆ ಈಗ ಪಾಂಡ್ಯಾ ಬೌಲಿಂಗ್ ಮಾಡುತ್ತಿಲ್ಲ. ಹೀಗಾಗಿ ಈ ಸ್ಥಾನ ಸದ್ಯ ಶಾರ್ದೂಲ್ ಠಾಕೂರ್ ಪಾಲಾಗಿದೆ. ಪಾಂಡ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ 11 ಪಂದ್ಯಗಳನ್ನು ಆಡಿದ್ದಾರೆ. 31 ರ ಸರಾಸರಿಯಲ್ಲಿ 532 ರನ್ ಗಳಿಸಿದ್ದಾರೆ. 17 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಆದರೆ ಪಾಂಡ್ಯಾ ಕಂ ಬ್ಯಾಕ್ ಸದ್ಯದ ಮಟ್ಟಿಗೆ ಅಸಾಧ್ಯ.

Hardik saaksha tv

ಭುವನೇಶ್ವರ್ ಕುಮಾರ್:
ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ವಿಂಗ್ ಬೌಲಿಂಗ್‌ಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಭುವನೇಶ್ವರ್ ಟೀಮ್ ಇಂಡಿಯಾದ ಸ್ವಿಂಗ್ ಕಿಂಗ್ ಆಗಿದ್ದರು. ಆದರೆ ಈಗ ಭುವಿ ಕಂಪ್ಲೀಟ್ ಆಗಿ ಫೇಲ್ ಆಗಿದ್ದಾರೆ. ಚೆಂಡು ಸವಿಂಗ್ ಆಗ್ತಿಲ್ಲ, ವಿಕೆಟ್ ಕೂಡ ಬೀಳ್ತಿಲ್ಲ. ಮುಂದಿನ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಭುವಿ ಸ್ಥಾನ ಪಡೆಯುವುದು ಡೌಟ್. ಇದರ ಜೊತೆ ಗಾಯ ಕೂಡ ಭುವಿಯನ್ನು ಕಾಡುತ್ತಿದೆ. ಟೀಮ್ ಇಂಡಿಯಾದಲ್ಲಿ ಭುವಿ ಜಾಗವನ್ನು ಮೊಹಮ್ಮದ್ ಸಿರಾಜ್ ತುಂಬಿದ್ದಾರೆ. ಹೀಗಾಗಿ ಭುವಿ ಮುಂದೆ ಟೆಸ್ಟ್ ಆಡೋದೇ ಡೌಟ್.

ಶಿಖರ್ ಧವನ್ :
ಟೀಮ್ ಇಂಡಿಯಾ ಅನ್ ಲಕ್ಕಿ ಪ್ಲೇಯರ್ ಅಂದರೆ ಶಿಖರ್ ಧವನ್. ಅದ್ಭುತ ಫಾರ್ಮ್ನಲ್ಲಿದ್ದರೂ ತಂಡದಲ್ಲಿ ಸ್ಥಾನವಿಲ್ಲ. ಟೆಸ್ಟ್ ಕ್ರಿಕೆಟ್ ನಲ್ಲೂ ಶಿಖರ್ 34 ಪಂದ್ಯಗಳಲ್ಲಿ 41ರ ಸರಾಸರಿಯಲ್ಲಿ 2300ಕ್ಕೂ ರನ್ ಗಳಿಸಿದ್ದಾರೆ. ಅದರಲ್ಲಿ 7 ಶತಕ ಬಾರಿಸಿದ್ದರೂ ಆಯ್ಕೆಗಾರರು ಧವನ್ ರನ್ನು ಸರಿಯಾಗಿ ಮೌಲ್ಯಮಾಪನ ಮಾಡಿಲ್ಲ. ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಟೆಸ್ಟ್ ಆರಂಭಿಕರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿದ ನಂತರ ಶಿಖರ್ ಧವನ್ ಟೆಸ್ಟ್ ತಂಡಕ್ಕೆ ಮರಳುವುದು ಅಸಂಭವ ಎನ್ನಲಾಗಿದೆ. ಧವನ್ 2018 ರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿಲ್ಲ.

ಕುಲದೀಪ್ ಯಾದವ್ :
ಕುಲದೀಪ್ ಯಾದವ್ ಅವರನ್ನು ಟೀಂ ಇಂಡಿಯಾದ ಎಲ್ಲಾ ಫಾರ್ಮಟ್‌ಗಳಿಂದ ಕೈಬಿಡಲಾಗಿದೆ. ಕುಲದೀಪ್ ಯಾದವ್ ನಿರಂತರವಾಗಿ ಫ್ಲಾಪ್ ಆಗಿದ್ದಾರೆ. ಐಪಿಎಲ್‌ನಲ್ಲೂ ಕಳಪೆ ಫಾರ್ಮ್ನಿಂದಾಗಿ, ಕೆಕೆಆರ್ ಅವರಿಗೆ ಒಂದು ಪಂದ್ಯದಲ್ಲೂ ಆಡುವ ಅವಕಾಶ ನೀಡಿರಲಿಲ್ಲ. ಆಯ್ಕೆದಾರರು ಕುಲದೀಪ್ ಯಾದವ್ ಬದಲಿಗೆ ಅಕ್ಷರ್ ಪಟೇಲ್, ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಬೌಲರ್‌ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಹೀಗಾಗಿ ಕುಲ್‌ದೀಪ್ ಕ್ರಿಕೆಟ್ ಭವಿಷ್ಯ ಮುಗಿದಂತೆಯೇ..

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd