Cooking : ವಿವಿಧ ಬಗೆಯ 4 ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ
ಗಸಗಸೆ ಪಾಯಸ
ಬೇಕಾಗುವ ಸಾಮಗ್ರಿಗಳು
ಗಸಗಸೆ – 3 ಚಮಚ
ಬಾದಾಮಿ, ಗೋಡಂಬಿ – ಸ್ವಲ್ಪ
ಒಣಕೊಬ್ಬರಿ – 1/2 ಕಪ್
ಹಾಲು – ಸ್ವಲ್ಪ
ಬೆಲ್ಲ – 3/4 ಕಪ್
ನೀರು 1.5 ಕಪ್
ಏಲಕ್ಕಿ ಪುಡಿ – ಚಿಟಿಕೆಯಷ್ಟು
ತುಪ್ಪ – 2 ಚಮಚ
ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ – ಸ್ವಲ್ಪ
ಮೊದಲಿಗೆ ಗಸಗಸೆ, ಬಾದಾಮಿ, ಗೋಡಂಬಿಗಳನ್ನು ಡ್ರೈ ರೋಸ್ಟ್ ಮಾಡಿಕೊಳ್ಳಿ. ನಂತರ ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ಗ್ರೈಂಡ್ ಮಾಡಿ. ಅದಕ್ಕೆ ಕೊಬ್ಬರಿ ಸೇರಿಸಿ ಅಗತ್ಯವಿರುವಷ್ಟು ಹಾಲು ಸೇರಿಸಿ ಚೆನ್ನಾಗಿ ರುಬ್ಬಿ.
ಈಗ ಒಂದು ಪಾತ್ರೆಯಲ್ಲಿ ಬೆಲ್ಲ ಹಾಕಿ ನೀರು ಸೇರಿಸಿ ಕುದಿಸಿ. ಬೆಲ್ಲ ಕರಗಿದ ನಂತರ ರುಬ್ಬಿಟ್ಟುಕೊಂಡ ಮಿಶ್ರಣವನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ಏಲಕ್ಕಿ ಪುಡಿ ಉದುರಿಸಿ. ಕೊನೆಯಲ್ಲಿ ತುಪ್ಪ, ಹುರಿದಿಟ್ಟುಕೊಂಡ ದ್ರಾಕ್ಷಿ ಗೋಡಂಬಿ ಸೇರಿಸಿದರೆ ರುಚಿಯಾದ ಗಸಗಸೆ ಪಾಯಸ ಸವಿಯಲು ಸಿದ್ಧವಾಗಿದೆ.
ಕ್ಯಾರೋಟ್ ಜ್ಯೂಸ್..!!
ಬೇಕಾಗಿರುವ ಸಾಮಗ್ರಿಗಳು :
ಕ್ಯಾರೆಟ್ – 4-5
ಶುಂಠಿ – 1 ಇಂಚು
ನಿಂಬೆ ಹಣ್ಣು – 1
ಪೆಪ್ಪರ್ ಪೌಡರ್ ಸ್ವಲ್ಪ,
ಪುದೀನ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ :
ಮೊದಲು ಕ್ಯಾರೆಟ್ ಗಳನ್ನು ಚೆನ್ನಾಗಿ ತೊಳೆದುಕೊಂಡು, ಅದರ ಸಿಪ್ಪೆಯನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಅದನ್ನು ಜ್ಯೂಸರ್ ನಲ್ಲಿ ಹಾಕಿ, ನೀರು, ಶುಂಠಿ, ನಿಂಬೆ ಹಣ್ಣಿನ ರಸ ಮತ್ತು ಪುದೀನಾ ಸೇರಿಸಿ ಚೆನ್ನಾಗಿ ರುಬ್ಬಿ.
cooking recipies – carrot juice , fitness , health
ನಂತರ ಒಂದು ಪಾತ್ರೆಗೆ ರುಬ್ಬಿದ ಮಿಶ್ರಣವನ್ನು ಸೋಸಿ. ಇದಕ್ಕೆ ಪೆಪ್ಪರ್ ಪೌಡರ್, ಉಪ್ಪು ಅನ್ನು ಹಾಕಿ ಚೆನ್ನಾಗಿ ಕಲಸಿ. ಈಗ ಕುಡಿಯಲು ಆರೋಗ್ಯಕರವಾದ ಕ್ಯಾರೆಟ್ ಜ್ಯೂಸ್ ರೆಡಿ.
ಅವಲಕ್ಕಿ ಪಾಯಸ….!!!
ಅವಲಕ್ಕಿ – 200 ಗ್ರಾಂ
ಬೆಲ್ಲ – 1/4 ಕೆಜಿ
ಹಾಲು – 1/2 ಲೀಟರ್
ಏಲಕ್ಕಿ – 4
ಒಣ ದ್ರಾಕ್ಷಿ/ ಗೋಡಂಬಿ – ಸ್ವಲ್ಪ
ತೆಂಗಿನಕಾಯಿಯ ಹಾಲು – 1/2 ಕಪ್
ತುಪ್ಪ
ಮಾಡುವ ವಿಧಾನ :
ಮೊದಲಿಗೆ ಬಾಣಲೆಯನ್ನು ಬಿಸಿ ಮಾಡಿ ಸ್ವಲ್ಪ ತುಪ್ಪ ಹಾಕಿ, ಒಣದಾಕ್ಷಿ, ಗೋಡಂಬಿಯನ್ನು ಹುರಿದು ಪಕ್ಕದಲ್ಲಿಟ್ಟುಕೊಳ್ಳಿ.
ನಂತರ ಬಾಣಲೆಗೆ ಅವಲಕ್ಕಿಯನ್ನು ಸೇರಿಸಿ ಕಂದುಬಣ್ಣಕ್ಕೆ ಬರುವವರೆಗೂ ಹುರಿದುಕೊಳ್ಳಿ.
cooking : payasa , kheer recipies , saakshatv
ನಂತರ ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಕಾಯಿಸಿ. ಅದಕ್ಕೆ ಬೆಲ್ಲವನ್ನು ಸೇರಿಸಿ ಕುದಿಸಿ. ಹಾಲು ಕುದಿಯಲು ಪ್ರಾರಂಭಿಸಿದಾಗ ಹುರಿದಿಟ್ಟುಕೊಂಡ ಅವಲಕ್ಕಿಯನ್ನು ಸೇರಿಸಿ, ತಳಹಿಡಿಯದಂತೆ ಕೈಯಾಡಿಸುತ್ತಾ ಇರಿ. ಅವಲಕ್ಕಿ ಚೆನ್ನಾಗಿ ಬೆಂದ ನಂತರ ತೆಂಗಿನಕಾಯಿಯ ಹಾಲನ್ನು ಸೇರಿಸಿ. ಐದು ನಿಮಿಷ ಕುದಿಸಿ ಒಲೆಯಿಂದ ಕೆಳಗಿಳಿಸಿ.
ಈಗ ಹುರಿದಿಟ್ಟುಕೊಂಡ ಒಣ ದ್ರಾಕ್ಷಿ ಗೋಡಂಬಿ ಸೇರಿಸಿ. ನಂತರ ಪುಡಿಮಾಡಿದ ಏಲಕ್ಕಿಯನ್ನು ಹಾಕಿ ಕಲಸಿ. ರುಚಿಯಾದ ಅವಲಕ್ಕಿ ಪಾಯಸ ಸವಿಯಲು ಸಿದ್ದ.
ಉಳಿದ ಅನ್ನದಲ್ಲಿ ಈ ರೀತಿ ಸೂಪರ್ ಟೇಸ್ಟಿಯಾಗಿ ಕಟ್ಲೆಟ್ ಮಾಡಿ ನೋಡಿ…!!!
1 ½ ಕಪ್ ಉಳಿದ ಅನ್ನ
½ ಕಪ್ ಸಿಪ್ಪೆ ಸುಲಿದ ಮತ್ತು ಕತ್ತರಿಸಿದ ಆಲೂಗಡ್ಡೆ
¼ ಕಪ್ ಕತ್ತರಿಸಿದ ಕ್ಯಾಪ್ಸಿಕಂ
¼ ಕಪ್ ತುರಿದ ಕ್ಯಾರೆಟ್
¼ ಕಪ್ ಸ್ವೀಟ್ ಕಾರ್ನ್
1-2 ಟೀಸ್ಪೂನ್ ಶುಂಠಿ-ಹಸಿರು ಮೆಣಸಿನಕಾಯಿ ಪೇಸ್ಟ್
¼ ಟೀಸ್ಪೂನ್ ಆಮ್ಚೂರ್ ಪೌಡರ್ / ಡ್ರೈ ಮಾವಿನ ಪುಡಿ
1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
½ ಟೀಸ್ಪೂನ್ ಅರಿಶಿನ ಪುಡಿ
1 ಟೀಸ್ಪೂನ್ ಗರಂ ಮಸಾಲ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
1 ಟೀಸ್ಪೂನ್ ಸಕ್ಕರೆ (optional)
2-3 ಟೀಸ್ಪೂನ್ ಕಾರ್ನ್ ಫ್ಲೋರ್
ಹುರಿಯಲು ಎಣ್ಣೆ
ಮಾಡುವ ವಿಧಾನ
ಮೊದಲಿಗೆ ಮಿಕ್ಸಿಂಗ್ ಬೌಲ್ ತೆಗೆದುಕೊಳ್ಳಿ.
ಅದರಲ್ಲಿ ಅನ್ನ, ಆಲೂಗಡ್ಡೆ, ತುರಿದ ಕ್ಯಾರೆಟ್, ಶುಂಠಿ-ಹಸಿರು ಮೆಣಸಿನಕಾಯಿ ಪೇಸ್ಟ್, ಕತ್ತರಿಸಿದ ಕ್ಯಾಪ್ಸಿಕಂ ಮತ್ತು ಸ್ವೀಟ್ ಕಾರ್ನ್ ಸೇರಿಸಿ.
ಈಗ ಆಮ್ಚೂರ್ ಪೌಡರ್, ಕೆಂಪು ಮೆಣಸಿನ ಪುಡಿ, ಗರಂ ಮಸಾಲ, ಅರಿಶಿನ ಪುಡಿ, ಉಪ್ಪು, ಸಕ್ಕರೆ ಸೇರಿಸಿ ಚೆನ್ನಾಗಿ ಬೆರೆಸಿ.
ಕಾರ್ನ್ ಫ್ಲೋರ್ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ತೇವವಾಗಿದ್ದರೆ ಸ್ವಲ್ಪ ಕಾರ್ನ್ ಫ್ಲೋರ್ ಸೇರಿಸಿ. ಚೆನ್ನಾಗಿ ನಾದಿ.
ಈಗ ಸಣ್ಣ ನಿಂಬೆ ಗಾತ್ರದ ಚೆಂಡನ್ನು ಮಾಡಿ, ಅದನ್ನು ಚಪ್ಪಟೆ ಮಾಡಿ
ನಂತರ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಸಾಕಷ್ಟು ಬಿಸಿಯಾದ ನಂತರ, 2-3 ಕಟ್ಲೆಟ್‌ಗಳನ್ನು ಬಿಸಿ ಎಣ್ಣೆಯಲ್ಲಿ ಬಿಡಿ ಮತ್ತು ಎರಡೂ ಬದಿ ಗೋಲ್ಡನ್ ಬ್ರೌನ್ ಆಗುವವರೆಗೆ ಅದನ್ನು ಮಧ್ಯಮ ಉರಿಯಲ್ಲಿ ಹುರಿದು ತೆಗೆಯಿರಿ.
ಬಿಸಿ ಚಟ್ನಿ ಅಥವಾ ಕೆಚಪ್ ನೊಂದಿಗೆ ಉಳಿದ ಅನ್ನದಿಂದ ತಯಾರಿಸಿದ ಕಟ್ಲೆಟ್‌ಗಳನ್ನು ಸವಿಯಿರಿ.