ಬೆಂಗಳೂರು: ಹಲವೆಡೆ ಭಿಕ್ಷಾಟನೆ ಉದ್ಯೋಗವಾದಂತಾಗಿದೆ. ಇದನ್ನು ಹಲವರು ಖಂಡಿಸಿದರೆ, ಹಲವರು ಸುಮ್ಮನಿರುತ್ತಾರೆ. ಇನ್ನೂ ಹಲವರು ಭಿಕ್ಷೆ ನೀಡಿ ಮುಂದೆ ಸಾಗುತ್ತರೆ. ಹೀಗೆ ನಮ್ಮ ಮೆಟ್ರೋದಲ್ಲಿ ಭಿಕ್ಷೆ ಬೇಡಿದ್ದ ಯುವಕನಿಗೆ ದಂಡ ವಿಧಿಸಲಾಗಿದೆ.
ಕೊಪ್ಪಳ ಮೂಲದ 20 ವರ್ಷದ ಮಲ್ಲಿಕಾರ್ಜುನ ಎಂಬ ವ್ಯಕ್ತಿ ಕಿವುಡ ಹಾಗೂ ಮುಖ ಎಂದು ಹೇಳಿಕೊಂಡು ಮೆಟ್ರೋದಲ್ಲಿ ಚೀಟಿ ನೀಡಿ ಭಿಕ್ಷೆ ಬೇಡಿದ್ದಾನೆ. ಪ್ರಯಾಣಿಕರೊಬ್ಬರು ಈ ಕುರಿತು ಮಾಹಿತಿ ನೀಡಿದ್ದಾರೆ. ಕೂಡಲೇ ಆತನನ್ನು ತಡೆದು ವಿಚಾರಿಸಿದ ಅಧಿಕಾರಿಗಳು ಆತನ ಆರೋಗ್ಯ ಪರಿಶೀಲನೆ ನಡೆಸಿದಾಗ ಆತ ಮುಖ ಹಾಗೂ ಕಿವುಡು ಎನ್ನುವುದು ಗೊತ್ತಾಗಿದೆ. ಆದರೆ, ಮೆಟ್ರೋದಲ್ಲಿ ಭಿಕ್ಷೆ ಬೇಡಿದ್ದಕ್ಕೆ 500 ರೂ. ದಂಡ ವಿಧಿಸಿದ್ದಾರೆ.