ಮರಭೂಮಿ ನಾಡು ದುಬೈನಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಒಮಾನ್ ನಲ್ಲಿ ಇಲ್ಲಿಯವರೆಗೆ 18 ಜನ ಬಲಿಯಾಗಿದ್ದಾರೆ.
ದುಬೈನಲ್ಲಿ ಮಳೆಯಿಂದಾಗಿ ಅತ್ಯಂತ ಜನನಿಬೀಡ ವಿಮಾನ ನಿಲ್ದಾಣ ಜಲಾವೃತವಾಗಿದೆ. ಹೀಗಾಗಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೇ, ಯುಎಇಯ ಪ್ರಮುಖ ಹೆದ್ದಾರಿಗಳು ಕೂಡ ಜಲಾವೃತಗೊಂಡಿವೆ.
ಭಾರೀ ಮಳೆಯಿಂದಾಗಿ ಜನರು ತಮ್ಮ ಮನೆಯಲ್ಲಿಯೇ ಉಳಿಯುವಂತೆ ಸ್ಥಳೀಯ ಸರ್ಕಾರ ತಿಳಿಸಿದೆ. ಶಾಲೆಗಳನ್ನು ಆನ್ ಲೈನ್ ನಲ್ಲಿ ನಡೆಸಬೇಕು. ಸರ್ಕಾರಿ ನೌಕರರಿಗೂ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಹೆದ್ದಾರಿಗಳು ಮತ್ತು ರಸ್ತೆಗಳಿಂದ ನೀರನ್ನು ತೆಗೆದುಹಾಕಲು ಆಡಳಿತವು ಬೃಹತ್ ಪಂಪ್ ಬಳಕೆ ಮಾಡಿ ಹರಸಾಹಸ ಪಡುತ್ತಿದೆ.
ದುಬೈ, ಅಬುಧಾಬಿ, ಶಾರ್ಜಾ ಮತ್ತು ಇತರ ಕೆಲವು ಎಮಿರೇಟ್‌ಗಳ ನಿವಾಸಿಗಳಿಗೆ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಮತ್ತು ಆಲಿಕಲ್ಲು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಅರೇಬಿಯಾದಲ್ಲಿ ಕೂಡ ಭಾರೀ ಮಳೆಯಾಗಿದೆ. ಒಮಾನ್ ನಲ್ಲಿ ಶಾಲಾ ವಾಹನ ಕೊಚ್ಚಿ ಹೋಗಿದೆ. ವೈತ್, ಸೌದಿ ಅರೇಬಿಯಾ ಮತ್ತು ಒಮಾನ್ ನಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.