Heavy rain | ಯಾದಗಿರಿಯಲ್ಲಿ ಭಾರಿ ಮಳೆ – ಯೆಲ್ಲೋ ಅಲರ್ಟ್ ಘೋಷಣೆ
ಯಾದಗಿರಿ : ಗಿರಿನಾಡ ಜಿಲ್ಲೆಯಲ್ಲಿ ಬಿಟ್ಟು ಬೀಡದೆ ವರುಣನ ಸಿಂಚನವಾಗುತ್ತಿದ್ದು, ಜನ ಜೀವನ ಅಸ್ಥವ್ಯಸ್ಥಗೊಂಡಿದೆ.
ಭಾರಿ ಮಳೆಯಿಂದಾಗಿ ಮನೆಗಳಿಗೆ ಬಡಾವಣೆಗಳಿಗೆ ಮಳೆನೀರು ನುಗ್ಗಿದೆ.
ಯಾದಗಿರಿ ನಗರದ ಬಾಲಾಜಿ ರಸ್ತೆಯ ದಿನಸಿ ಅಂಗಡಿಗೆ ನೀರು ನುಗ್ಗಿರುವುದರಿಂದ ಆಹಾರ ಸಾಮಾಗ್ರಿಗಳು ನೀರುಪಾಲಾಗಿವೆ.

ಸದ್ಯ ಜಿಲ್ಲೆಯಲ್ಲಿ ಮೋಡ ಕವಿದ ವಾತಾವಾರಣ ನಿರ್ಮಾಣವಾಗಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕಳೆದ ಎರಡು ಮೂರು ದಿನಗಳಿಂದ ಮಳೆ ಸುರಿಯುತ್ತಿದೆ.
ಹೀಗಾಗಿ ನದಿ ತೀರಕ್ಕೆ ತೆರಳದಂತೆ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಲಾಗಿದೆ.