ಪತಿ ಹೃದಯಾಘಾತಕ್ಕೆ ಬಲಿಯಾಗಿದ್ದಕ್ಕೆ ಮನನೊಂದ ಪತ್ನಿ 7ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ದಂಪತಿ ದೆಹಲಿಯ ಮೃಗಾಲಯಕ್ಕೆ ತೆರಳಿದ್ದರು ಈ ಸಂದರ್ಭದಲ್ಲಿ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅದೇ ನೋವಿನಲ್ಲಿ ಮನೆಗೆ ಬಂದಿದ್ದ ಪತ್ನಿ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ. 25 ವರ್ಷದ ಅಭಿಷೇಕ್ ಅಹ್ಲುವಾಲಿಯಾ ಮಾರಣಾಂತಿಕ ಹೃದಯಾಘಾತದಿಂದ ಬಳಲುತ್ತಿದ್ದರು. ಆದರೆ, ಪತಿ ಕಳೆದುಕೊಂಡ ಆಘಾತ ಸಹಿಸಲಾರದೆ ಪತ್ನಿ ಅಂಜಲಿ ಏಳನೇ ಮಹಡಿಯ ಬಾಲ್ಕನಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.