ಖಾಲಿ ಹೊಟ್ಟೆಯಲ್ಲಿ ಬೆಂಡೆಕಾಯಿ ನೀರು ಕುಡಿಯುವುದರ ಆರೋಗ್ಯ ಪ್ರಯೋಜನಗಳು

1 min read
Saakshatv healthtips Okra water

ಖಾಲಿ ಹೊಟ್ಟೆಯಲ್ಲಿ ಬೆಂಡೆಕಾಯಿ ನೀರು ಕುಡಿಯುವುದರ ಆರೋಗ್ಯ ಪ್ರಯೋಜನಗಳು Saakshatv healthtips Okra water

ನಾವು ಪ್ರತೀ ದಿನ ಬಳಸುವ ತರಕಾರಿಗಳಲ್ಲಿ ಬೆಂಡೆಕಾಯಿಯೂ ಒಂದು. ಬೆಂಡೆಕಾಯಿ ಎಲ್ಲಾ ಋತುವಿನಲ್ಲಿ ಸುಲಭವಾಗಿ ದೊರೆಯುತ್ತದೆ. ಬೆಂಡೆಕಾಯಿಯು ಅನೇಕ ಆರೋಗ್ಯಕರ ಅಂಶಗಳನ್ನು ಹೊಂದಿದೆ. ಖಾಲಿ ಹೊಟ್ಟೆಯಲ್ಲಿ ಬೆಂಡೆಕಾಯಿ ನೀರನ್ನು ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂದು ತಿಳಿಯೋಣ. Saakshatv healthtips Okra water
Saakshatv healthtips Okra water

ಬೆಂಡೆಕಾಯಿ ನೀರು ತಯಾರಿಸುವ ವಿಧಾನ

ಎರಡು ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಅದರ ತುದಿಗಳನ್ನು ಕತ್ತರಿಸಿ. ಬಳಿಕ ಒಂದು ಗ್ಲಾಸ್ ನೀರಿನಲ್ಲಿ ಬೆಂಡೆಕಾಯಿಗಳನ್ನು ಹಾಕಿ ರಾತ್ರಿಯಿಡೀ ಮುಚ್ಚಿಡಿ. ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಈ ಬೆಂಡೆಕಾಯಿ ನೀರನ್ನು ಕುಡಿಯಬೇಕು.

ಆರೋಗ್ಯ ಪ್ರಯೋಜನಗಳು

ರಾತ್ರಿ ನೆನೆಸಿಟ್ಟ ಬೆಂಡೆಕಾಯಿ ನೀರನ್ನು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಕರುಳು ಮತ್ತು ಜೀರ್ಣಾಶಯ ಸ್ವಚ್ಛವಾಗುತ್ತದೆ. ಅಲ್ಸರ್ ಸಮಸ್ಯೆಗೆ ಖಾಲಿ ಹೊಟ್ಟೆಗೆ ಬೆಂಡೆಕಾಯಿ ನೀರು ಸೇವನೆ ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲ ಇದು ಗ್ಯಾಸ್, ಅಸಿಡಿಟಿ ಹಾಗೂ ಮಲಬದ್ಧತೆ ಸಮಸ್ಯೆಯನ್ನು ಸಹ ದೂರ ಮಾಡುತ್ತದೆ.

ಬೆಂಡೆಕಾಯಿ ನೀರಿನಲ್ಲಿ ಫೈಬರ್, ವಿಟಮಿನ್ ಇ , ಮ್ಯಾಗ್ನಿಶಿಯಂ ಮತ್ತು ಫಾಸ್ಪರಸ್ ಹೇರಳವಾಗಿ ದೊರೆಯುತ್ತದೆ. ಇವು ದೇಹಕ್ಕೆ ಒಳ್ಳೆಯ ಪೋಷಕಾಂಶಗಳನ್ನು ನೀಡುತ್ತದೆ. ಜೊತೆಗೆ ರಕ್ತ ಸಂಚಾರ ಹೆಚ್ಚಾಗುತ್ತದೆ. ಅಧಿಕ ರಕ್ತದೊತ್ತಡ ಸಹ ಕಡಿಮೆ ಆಗುತ್ತದೆ. ರಕ್ತದಲ್ಲಿರುವ ಸಕ್ಕರೆಯ ಅಂಶವು ಹತೋಟಿಗೆ ತರುವ ಮೂಲಕ ಮಧುಮೇಹ ಕಾಯಿಲೆ ಸಹ ನಿಯಂತ್ರಣಕ್ಕೆ ತರುತ್ತದೆ.
Saakshatv healthtips Okra water
ಬೆಂಡೆಕಾಯಿ ನೀರು ಮೂಳೆಗಳು ಗಟ್ಟಿಯಾಗಲು ನೆರವಾಗುತ್ತದೆ. ಸ್ತ್ರೀಯರಿಗೆ ಋತು ಸ್ರಾವ ಸಮಯದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ಕಡಿಮೆ ಆಗುತ್ತದೆ. ಅಧಿಕ ಉಷ್ಣ ಶರೀರ ಪ್ರಕೃತಿಯವರು ಬೆಂಡೆಕಾಯಿ ನೀರು ಕುಡಿಯುವುದರಿಂದ ಶರೀರವು ತಂಪಾಗಿ ಇರುತ್ತದೆ.
ಬೆಂಡೆಕಾಯಿ ನೀರು ದೇಹದಲ್ಲಿನ ಅಧಿಕ ಕೊಬ್ಬನ್ನು ಕಡಿಮೆ ಮಾಡಿ ದೇಹದ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ ಚರ್ಮ ಕಾಂತಿಯುತವಾಗಲು ಮತ್ತು ಕೂದಲು ಧೃಢವಾಗಿ ಬೆಳೆಯಲು ಕೂಡಾ ಬೆಂಡೆಕಾಯಿ ನೀರು ಸಹಕಾರಿಯಾಗಿದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬೆಂಡೆಕಾಯಿ ನೀರು ಕಣ್ಣಿನ ಸಮಸ್ಯೆಯನ್ನು ಸಹ ನಿವಾರಣೆ ಮಾಡುತ್ತದೆ.

ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ.

ಆರೋಗ್ಯ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ saakshatv healthtips ಎಂದು ಸರ್ಚ್ ಮಾಡಿ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd