ಭೋಪಾಲ್: ಜ್ಞಾನವ್ಯಾಪಿ ಮಾದರಿಯಂತೆಯೇ ಇದೆ ಎನ್ನಲಾಗಿರುವ ಮತ್ತೊಂದು ಐತಿಹಾಸಿಕ ಸ್ಥಳದ ಪುರಾತತ್ವ ಸಮೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್ ಆದೇಶ ನೀಡಿದೆ.
ಧರ್ ನಲ್ಲಿನ ವಿವಾದಾತ್ಮಕ ಭೋಜಶಾಲಾ ಕಮಲ್ ಮೌಲಾ ಮಸೀದಿಯಲ್ಲಿ ಎಎಸ್ ಐ ಸರ್ವೇಗೆ ಹೈಕೋರ್ಟ್ ಅನುಮತಿ ನೀಡಿದೆ. ವಾಗ್ದಾವಿ ನೆಲೆಸಿರುವ ಮಂದಿರವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ. ಹೀಗಾಗಿ ಎಸ್ ಐ ಸಮೀಕ್ಷೆ ನಡೆಸುವಂತೆ ಕೋರಿ ನ್ಯಾಯವಾದಿ ವಿಷ್ಣುಶಂಕರ್ ಜೈನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆ ನಡೆಸಿದ ಕೋರ್ಟ್
ಸಮೀಕ್ಷೆಗೆ ಐವರು ತಜ್ಞರ ಸಮಿತಿ ರಚಿಸಿದೆ. ಮುಂದಿನ ಆರು ವಾರಗಳಲ್ಲಿ ಸಮೀಕ್ಷಾ ವರದಿ ಸಲ್ಲಿಸಲು ಕೂಡ ಕೋರ್ಟ್ ಸೂಚಿಸಿದೆ.
ಮಂದಿರ-ಮಸೀದಿ ವಿವಾದ ಕಾರಣ ಈ ಹಿಂದೆ ಹಲವು ಬಾರಿ ಧರ್‌ನಲ್ಲಿ ಉದ್ವಿಗ್ನ ಪರಿಸ್ಥಿತಿಗಳು ನಿರ್ಮಾಣವಾಗಿದ್ದವು. ಬಸಂತ್ ಪಂಚಮಿ ದಿನವಾದ ಶುಕ್ರವಾರ ಮುಸ್ಲಿಂರು ಆಗಮಿಸಿದ್ದರು. ವಾಗ್ದೇವಿ ಪೂಜೆಗಾಗಿ ಹಿಂದೂಗಳು ಆಗಮಿಸಿದ್ದರು.