Hijab controvercy : ಹಿಜಾಬ್ – ಕೇಸರಿ ಶಾಲು ವಿವಾದ : ಹೈ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ಆರಂಭ
ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ – ಕೇಸರಿ ಶಾಲು ಸಂಘರ್ಷದ ವಿಚಾರಣೆಯ ಮತ್ತೊಮ್ಮೆ ಹೈ ಕೋರ್ಟ್ ನಲ್ಲಿ ಇಂದು ಮುಂದುವರೆದಿದೆ. ತ್ರಿಸದಸ್ಯ ಪೀಠವು ಅರ್ಜಿ ವಿಚಾರಣೆ ಕೈಗೆತ್ತುಕೊಂಡಿದೆ… ನಿನ್ನೆ ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಸುಧೀರ್ಘ ವಾದ ಮಂಡಿಸಿದ್ದರು.. ವಾದ ಆಲಿಸಿದ್ದ ತ್ರಿಸದಸ್ಯ ಪೀಠವು ಇಂದಿಗೆ ವಿಚಾರಣೆ ಮುಂದೂಡಿತ್ತು… ಇಂದು ಸರ್ಕಾರದ ಪರ ಹಾಗೂ ಮಧ್ಯಾಂತರ ಅರ್ಜಿದಾರರ ಪರ ವಕೀಲರು ವಾದ ಮಂಡನೆ ಮಾಡಲಿದ್ದಾರೆ… ಸದ್ಯಕ್ಕೆ ಹೈ ಕೋರ್ಟ್ ಮಧ್ಯಂತರ ತೀರ್ಪಿನಂತೆ ಯಾವ ವಿದ್ಯಾರ್ಥಿಗಳು ಸಹ ಧಾರ್ಮಿಕ ಗುರುತುಗಳನ್ನ ಧರಿಸಿ ಶಾಲೆಗಳ ಬಳಿ ತೆರಳುವಂತಿಲ್ಲಾ… ಆದ್ರೂ ಎಷ್ಟೋ ಕಡೆಗಳಲ್ಲಿ ವಿದ್ಯಾರ್ಥಿಗಳು ಹಿಜಬ್ ಧರಿಸಿಯೇ ಶಾಲೆಗಳ ಬಳಿಗೆ ತೆರಳಿರುವುದು ಕಂಡುಬಂದಿದೆ.. ಅಲ್ಲದೇ ಹಲವೆಡೆ ಪರೀಕ್ಷೆ , ವಿದ್ಯಾಭ್ಯಾಸಕ್ಕಿಂತ ಹಿಜಬ್ ಮುಖ್ಯ ಎಂದು ವಿದ್ಯಾರ್ಥಿನಿಯರು ಪರೀಕ್ಷೆಗೂ ಹಾಜರಾಗದೇ ಇರುವುದು ಬೆಳಕಿಗೆ ಬಂದಿದೆ…