Hijab Controvercy : ಹಿಜಾಬ್ ಗೆ ಹೆಲ್ಮೆಟ್ ಕಡ್ಡಾಯದ ಉದಾಹರಣೆ ನೀಡಿದ ಜಮೀರ್
ಹಾವೇರಿ : ಹಿಜಾಬ್ ಗೆ ಹೆಲ್ಮೆಟ್ ಕಡ್ಡಾಯದ ಉದಾಹರಣೆ ನೀಡಿರುವ ಜಮೀರ್ ಅವರು ಮುಂಚೆ ಹಾಫ್ ಹೆಲ್ಮೇಟ್ ಇತ್ತು. ಈಗ ಫುಲ್ ಹೆಲ್ಮೇಟ್ ಕಡ್ಡಾಯ ಮಾಡಿದ್ದಾರೆ. ಆಕ್ಸಿಡೆಂಟ್ ಆಗಬಾರ್ದು ಅಂತಾ ಸೇಫ್ಟಿಗಾಗಿ ಇದನ್ನ ಮಾಡಿದ್ದಾರೆ. ಹಾಗೆ ಸೇಫ್ಟಿ ಇರ್ಲಿ ಅಂತಾ ಹಿಜಾಬ್ ಮಾಡಿದ್ದಾರೆ. ಹಿಜಾಬ್ ವಿವಾದವನ್ನ ಎಲ್ಲರೂ ಮಾಡಿಲ್ಲ.
ಆರು ಜನ ಮಕ್ಕಳು ಮಾತ್ರ ಮಾಡಿರೋದು. ಎಲ್ಲರಿಗಿಂತ ನಮಗೆ ನೋವು ತಂದಿರೋದು ಮಕ್ಕಳಿಗೆ ಜಾತಿ ಅಂತಾನೆ ಗೊತ್ತಿಲ್ಲ. ಮಕ್ಕಳಿಗೆ ಕೇಸರಿ ಶಾಲು ಹಾಕಿ ರಾಜಕೀಯ ಲಾಭಕ್ಕೋಸ್ಕರ ಬಿಜೆಪಿಯವರು ನೂರಕ್ಕೆ ನೂರು ಇದನ್ನೆ ಮಾಡಿದ್ದಾರೆ. ಈಗ ಎಲೆಕ್ಷನ್ ಹತ್ತಿರ ಬರ್ತಿದೆ. ಹಿಂದೂ ಮುಸ್ಲಿಂ ವಿಚಾರ ಬಳಸಿಕೊಳ್ಳೋದು. ಅವರಿಗೆ ಹೇಳಿಕೊಳ್ಳಲು ಅಭಿವೃದ್ಧಿ ಕೆಲಸಗಳಿಲ್ಲ. ರಾಜ್ಯದ ಜನರು ದಡ್ಡರಲ್ಲ. 2023ರ ಚುನಾವಣೆಯಲ್ಲಿ ರಾಜ್ಯದ ಜನರು ತಕ್ಕ ಪಾಠ ಕಲಿಸ್ತಾರೆ ಎಂದಿದ್ದಾರೆ.. ಅಲ್ಲದೇ ಬಿಜೆಪಿಯವರಿಗೆ ಏನು ಟಾಂಗ್ ಕೊಡೋಕೆ ಆಗುತ್ತೆ. ನಾವು ಟಾಂಗ್ ಕೊಟ್ರೆ ಒಂದಕ್ಕೆ ಇನ್ನೊಂದು ಸೇರಿಸಿ ಹೇಳ್ತಾರೆ. ಅವರಿಗೆ ಬೇರೆ ವಿಷಯಗಳಿಲ್ಲ.
ಜಮೀರ್ ಏನಾದ್ರೂ ಹೇಳಿದ್ರೆ ಅದಕ್ಕೊಂದು ಸೇರಿಸಿ ಮಾತಾಡ್ತಾರೆ. ಅದಕ್ಕೆ ಸುಮ್ಮನೆ ಇರೋದು ವಾಸಿ ಎಂದಿದ್ದಾರೆ… ಇನ್ನೂ ಈ ದರ್ಗಾದ ಇತಿಹಾಸದಲ್ಲಿ ಹಿಂದೂ ಮುಸ್ಲಿಂ ಎಂಬ ಜಾತಿ ಬೇಧವಿಲ್ಲ. ನಾನು ಏನೋ ಒಂದು ಕೇಳ್ಕೊಂಡಿದ್ದೇನೆ. ಮಾಜಿ ಶಾಸಕ ಖಾದ್ರಿ ಅಣ್ಣಂಗೆ ಒಳ್ಳೆಯದಾಗಲಿ. ನಾಲ್ಕು ಬಾರಿ ಸೋತಿದ್ದಾರೆ. ರಾಜಕೀಯದಲ್ಲಿ ಒಳ್ಳೆಯದಾಗಲಿ. ಖಾದ್ರಿ ಮಹಲ್‌ನಲ್ಲಿ ನಮಾಜ್ ಮಾಡಿದ್ದೇನೆ ಎಂದಿದ್ದಾರೆ.