ಹಿಜಾಬ್ ವಿವಾದ | ತನಿಕೆ ಬಳಿಕ ಎಲ್ಲವೂ ಬಯಲಾಗಲಿದೆ : ಬಿಸಿ ನಾಗೇಶ್ Saaksha Tv
ಹಾಸನ: ಹಿಜಾಬ್ ವಿವಾದದ ಹಿಂದೆ ಕೆಲ ಮುಸ್ಲಿಂ ಸಂಘಟನೆಗಳ ಕೈವಾಡವಿದೆ. ತನಿಖೆ ಬಳಿಕ ಎಲ್ಲವೂ ಬಯಲಾಗಲಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದರು.
ಹಾಸನದ ಅರಸೀಕೆರೆಯ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸರಕಾರ ಈಗಾಗಲೇ ತನಿಖೆ ನಡೆಸುತ್ತಿದೆ. ಎಲ್ಲವೂ ಬಯಲಿಗೆ ಬರಲಿದೆ. ಇಷ್ಟು ದಿನ ಸಮವಸ್ತ್ರದಲ್ಲೇ ಬರುತ್ತಿದ್ದಂತಹ ಹೆಣ್ಣುಮಕ್ಕಳು ಇದ್ದಕ್ಕಿದ್ದಂತೆ ನಮಗೆ ಧರ್ಮ, ಅದರ ಆಚರಣೆಯೇ ಮುಖ್ಯ ಅಂತಾ ಹೇಳಿದ ಕಾರಣ ಏನು ಎಂದು ಪ್ರಶ್ನಿಸಿದರು.
ಯಾವ್ಯಾವ ಹೆಣ್ಣುಮಕ್ಕಳು, ಯಾವ್ಯಾವ ಟ್ವೀಟ್‌ಗಳನ್ನು ರೀಟ್ವೀಟ್ ಮಾಡಿದ್ದಾರೆ ಅದೆಲ್ಲವೂ ಹೊರಗೆ ಬರುತ್ತೆ.ಹಿಜಾಬ್ ಹಾಕಬೇಕು, ಹಾಕಬಾರದು ಎಂದು ನಾವು ಹೇಳುತ್ತೀಲ್ಲ ಶಾಲಾ-ಕಾಲೇಜುಗಳಿಗೆ ಮಕ್ಕಳು ಸಮವಸ್ತ್ರದಲ್ಲಿ ಬರಬೇಕು ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಸಮವಸ್ತ್ರಕ್ಕಿಂತ ನಮಗೆ ಧರ್ಮವೇ ಮುಖ್ಯ, ಅದರ ಆಚರಣೆಯೇ ಮುಖ್ಯ ಅಂಥಾ ವಿವಾದ ಶುರು ಮಾಡಿದರು ಎಂದು ತಿಳಿಸಿದರು
ಶಾಲೆಗಳಿಗೆ ಹಿಜಾಬ್, ಕೇಸರಿ ಶಾಲು ಹಾಕಿಕೊಂಡು ಬರಬಾರದು ಎಂದು ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಸ್ಪಷ್ಟವಾಗಿ ಹೇಳಿದ್ದಾರೆ. ಅದಕ್ಕೆ ಕರ್ನಾಟಕ ಸರ್ಕಾರ ಬದ್ಧವಾಗಿರುತ್ತೆ. ಹೈಕೋರ್ಟ್ ಆದೇಶದ ಪ್ರಕಾರ ಫೆ. 14 ರಿಂದ 9-10ನೇ ತರಗತಿಗಳು ಆರಂಭವಾಗುತ್ತವೆ ಎಂದು ಸಚಿವ ನಾಗೇಶ್ ಹೇಳಿದರು.