Hit or Flop | ಹುಟ್ಟು ಹಬ್ಬದ ಶುಭಾಶಯಗಳು ಸಿನಿಮಾ ಹೇಗಿದೆ..?

1 min read
huttuhabbada shubhashayagalu saaksha tv

ಹುಟ್ಟು ಹಬ್ಬದ ಶುಭಾಶಯಗಳು ಸಿನಿಮಾ ಹೇಗಿದೆ..? huttuhabbada shubhashayagalu saaksha tv

ಚಿತ್ರ: ಹುಟ್ಟು ಹಬ್ಬದ ಶುಭಾಶಯಗಳು
ನಿರ್ಮಾಣ: ಡಾ. ಟಿ ಆರ್​​ ಚಂದ್ರುಶೇಖರ್​​
ನಿರ್ದೇಶನ: ನಾಗರಾಜ್​​ ಬೇತೂರು
ಪಾತ್ರವರ್ಗ: ದಿಗಂತ್​​, ಕವಿತಾ ಗೌಡ, ಚೇತನ್ ಗಂಧರ್ವ, ಮಡೇನೂರು ಮನು

ದೂದ್ ಪೇಡ ದಿಗಂತ್ ಅಭಿನಯದ ಹುಟ್ಟುಹಬ್ಬದ ಶುಭಾಶಯಗಳು ಸಿನಿಮಾ ಟೈಟಲ್ ನಿಂದಲೇ ಸೌಂಡ್ ಮಾಡಿತ್ತು. ಟೈಟಲ್ ಕೇಳಿದ ತಕ್ಷಣ ಇದೇನಿದು, ಇದು ಟೈಟಲ್ಲಾ ಅಂತೆಲ್ಲಾ ಹೇಳಿದೋರು ಉಂಟು.  ಹಾಗೇ ಟೈಟಲ್ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಚಿತ್ರತಂಡ ಪೋಸ್ಟರ್, ಟೀಸರ್ ಬಿಡುಗಡೆ ಮಾಡಿ  ಇದೊಂದು ಸಸ್ಪೆನ್ಸ್​​​-ಥ್ರಿಲ್ಲರ್​​ ಸ್ಟೋರಿ ಅನ್ನೋದನ್ನ ಹೇಳಿತ್ತು. ಇದೀಗ ಹೊಸ ವರ್ಷದ ಅಂಗವಾಗಿ ಸಿನಿಮಾ ಥಿಯೇಟರ್ ಅಂಗಳಕ್ಕೆ ಬಂದಿದ್ದು, ಚಿತ್ರ ಹೇಗಿದೆ..? ವಿಭಿನ್ನವಾಗಿ ಟೈಟಲ್ ಇಟ್ಟು, ಸಿನಿಮಾವನ್ನು ಡಿಪರೆಂಟ್ ಆಗಿ ತೆಗೆದಿದ್ದಾರಾ..? ಜನರಿಗೆ ಸಿನಿಮಾ ಇಷ್ಟವಾಯ್ತಾ ಅನ್ನೋದನ್ನ  ಈ ವರದಿಯಲ್ಲಿ ನೋಡೋಣ.

ಚಿತ್ರದ ಕಥೆ ಬಗ್ಗೆ ಹೇಳೋದಾದ್ರೆ ಇದೊಂದು ಮರ್ಡರ್ ಮಿಸ್ಟರಿ ಸ್ಟೋರಿ.

ಬರ್ತ್ ಡೇ ಪಾರ್ಟಿಯಲ್ಲಿ ನಡೆಯುವ ಕೊಲೆಯ ಸುತ್ತ ಸಿನಿಮಾದ ಕಥೆ ಸುತ್ತುತ್ತದೆ. ಈ ಮರ್ಡರ್ ಮಿಸ್ಟರಿಯನ್ನ ಹೀರೋ ದಿಗಂತ್ ಹೇಗೆ ಚೇಸ್ ಮಾಡ್ತಾರೆ..?  ಈ ವೇಳೆ ದಿಗಂತ್ ಗೆ ಎದುರಾಗುವ ಸಮಸ್ಯೆಗಳೇನು..? ಅಸಲಿಗೆ ಕೊಲೆಯಾದವ ಯಾರು..? ಕೊಲೆ ಮಾಡಿದ್ದು ಯಾರು..ಯಾಕೆ..? ಅನ್ನೋದನ್ನ ನಿರ್ದೇಶಕ ನಾಗರಾಜ್​​ ಬೇತೂರು ಸಿನಿಮಾದಲ್ಲಿ ತೋರಿಸಿದ್ದಾರೆ.

ಇನ್ನು ಸಿನಿಮಾ ಹೇಗಿದೆ ಅಂದ್ರೆ..

ಕಥೆ ಹೊಸದಲ್ಲದೇ ಇದ್ದರೂ, ಸಿನಿಮಾವನ್ನು ನಿರ್ದೇಶಕ ಕಟ್ಟಿಕೊಟ್ಟ ರೀತಿ ಚೆನ್ನಾಗಿದೆ. ಅಲ್ಲಿಲ್ಲ ಎಳೆದಂತೆ ಅನಿಸುತ್ತದೆ. ಮರ್ಡರ್ ಮಿಸ್ಟರಿ ಜೊತೆಗೆ ಲವ್, ಸಸ್ಪೆನ್ಸ್, ಸ್ವಲ್ಪ ಸ್ವಲ್ಪ ಕಾಮಿಡಿ, ಹಾಡುಗಳ ಮೂಲಕ ಸಿನಿಮಾವನ್ನ ಕಚ್ಚುಕಟ್ಟಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಆದರೂ ಕೆಲವು ಕಡೆಗಳಲ್ಲಿ ಎಡವಿದ್ದಾರೆ.

ಮುಖ್ಯವಾಗಿ ಅಲ್ಲಲ್ಲಿ ಬರುವ ಕಾಮಿಡಿ ಸೀನ್ ಗಳು ಪ್ರೇಕ್ಷಕರನ್ನು ನಕ್ಕು ನಗಿಸುತ್ತದೆ.  ಯೋಗರಾಜ್ ಭಟ್ ಅವರ ಸಾಹಿತ್ಯದ ಹಾಡುಗಳು ಒಳ್ಳೆ ಮಜಾ ಕೊಡುತ್ತದೆ.  ಮೂಡಿಬರೋ ಪ್ರತಿಯೊಂದು ಸಾಂಗ್​ಗಳು ಒಂದಕ್ಕಿಂತ ಒಂದು ಅದ್ಭುತವಾಗಿದೆ.

ಸಿನಿಮಾದ ಮುಖ್ಯ ಆಕರ್ಷಣೆ ಅಂದ್ರೆ ದಿಗಂತ್ ಮಾಸ್ ಲುಕ್. ಇದೇ ಮೊದಲ ಬಾರಿಗೆ ದಿಗಂತ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.  ಅವರ ಡೈಲಾಗ್ ಡಿಲಿವರಿ, ಆಟ್ಟಿಡ್ಯೂಡ್ ರಗಡ್ ಲುಕ್ ಎಲ್ಲವೂ ನೊಡುಗರಿಗೆ ಇಷ್ಟವಾಗುತ್ತದೆ.

huttuhabbada shubhashayagalu saaksha tv

ಇನ್ನು ದಿಗಂತ್​ಗೆ ಜೋಡಿಯಾಗಿ ಕವಿತಾ ಗೌಡ ನಟಿಸಿದ್ದು, ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ಉಳಿದಂತೆ ಪ್ರಮುಖ ಪಾತ್ರದಲ್ಲಿ ಚೇತನ್ ಗಂಧರ್ವ, ಮನು, ಸೂರಜ್, ಸೂರ್ಯ, ವಾಣಿಶ್ರೀ ಸೇರಿದಂತೆ ಅನೇಕ ಕಲಾವಿದರು ಕಾಣಿಸಿಕೊಂಡಿದ್ದಾರೆ.

ಶ್ರೀಧರ್ ವಿ ಸಂಭ್ರಮ್ ಮ್ಯೂಸಿಕ್​ ಕಂಪೋಸ್​ ಚೆನ್ನಾಗಿದೆ. ​ಶ್ರೀಕಾಂತ್ ಶ್ರಾಫ್ ಎಡಿಟಿಂಗ್, ಅಭಿಲಾಶ್ ಕಲತಿ ಕ್ಯಾಮೆರಾ ವರ್ಕ್ ಮೆಚ್ಚಿಕೊಳ್ಳುವಂತಿದೆ.

ಒಟ್ಟಾರೆಯಾಗಿ ಮರ್ಡರ್ ಮಿಸ್ಟರಿಯನ್ನ ತಲೆಗೆ ಬಿಟ್ಟುಕೊಂಡು ಅಲ್ಲಲ್ಲಿ ಬರುವ ಲವ್, ಕಾಮಿಡಿ ಸೀನ್ ಗಳನ್ನ ಎಂಜಾಯ್ ಮಾಡುತ್ತಾ ಕೊನೆಯಲ್ಲಿ ಸಿಗುವ ಟ್ವಿಸ್ಟ್ ಗೆ ಕಾಯುತ್ತಾ ಸಿನಿಮಾವನ್ನು ಯಾವುದೇ ಚಿಂತೆ ಇಲ್ಲದೇ ನೋಡಬಹುದು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd