ಕರ್ನಾಟಕ ಪೋಲೀಸ್ ಅಂದ್ರೆ ಹೆಮ್ಮೆ | ಕೆಲ ಪೋಲೀಸರು ಮಾಡಿದ ಕೆಲಸದಿಂದ ಅಸಹ್ಯ ಅನ್ನಿಸುತ್ತಿದೆ : ಆರಗ ಜ್ಞಾನೇಂದ್ರ
ಕಲಬುರಗಿ: ನಮ್ಮ ಕರ್ನಾಟಕ ಪೋಲೀಸ್ ಅಂದ್ರೆ ಎಲ್ಲರೂ ಹೆಮ್ಮೆಪಡುತಿದ್ದರು. ಇವತ್ತು ಕೆಲ ಪೋಲೀಸರು ಮಾಡಿದ ಕೆಲಸದಿಂದ ಅಸಹ್ಯ ಅನ್ನಿಸುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಸಮಾಧಾನ ವ್ಯಕ್ತಪಡಿಸಿರು.
ಪೋಲೀಸ್ ಪಥಸಂಚಲನ ವೇಳೆ ಮಾತನಾಡಿದ ಅವರು ಡಿವೈಎಸ್ಪಿ ಒಬ್ಬರನ್ನ ಅರೆಸ್ಟ್ ಮಾಡಿ ಲಾಕಪ್ಪಲ್ಲಿ ಇಟ್ಟಿದ್ದಾರೆ. ಕೆಲಸಕ್ಕೆ ಸೇರುವ ಮುನ್ನ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದ್ದೇನು? ಆದರೆ ಹಣದ ಆಸೆಗಾಗಿ ಕೆಲ ಅಧಿಕಾರಿಗಳು ಈಗ ಮಾಡಿದ್ದೇನು? ಅಕ್ರಮ ನೇಮಕಾತಿಯಲ್ಲಿ ಈವರೆಗೆ 48 ಜನರನ್ನ ಬಂಧಿಸಿದ್ದೇವೆ ಎಂದು ತಿಳಿಸಿದರು.
PSI ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪೋಲೀಸರೂ ಅಧಿಕಾರಿಗಳೂ ಸಹ ಸೇರಿದ್ದಾರೆ. ಪ್ರಕರಣ ಬೆಳಕಿಗೆ ಬಂದ ನಂತರ ತಪ್ಪು ಮಾಡಿದ ಯಾರನ್ನೂ ಬಿಟ್ಟಿಲ್ಲ. ಸಿಐಡಿ ತಂಡ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.