horror film
ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ ಸೆಟ್ಟೇರಿದೆ. ಚಿತ್ರದ ಇನ್ನೋಂದು ವಿಶೇಷತೆ ಅಂದ್ರೆ ಈ ಸಿನಿಮಾದಲ್ಲಿ ಮೂವರು ನಾಯಕಿಯರಿದ್ದಾರೆ. ಮೂವರು ನಾಯಕಿಯರು ಒಟ್ಟಿಗೆ ಎಂಟ್ರಿ ಕೊಡುತ್ತಿರುವ ಈ ಸಿನಿಮಾದ ಒಂದು ಪಕ್ಕಾ ಹಾರರ್ ಥ್ರಿಲ್ಲರ್ ಕಥೆಯಾಗಿದೆ. ಅಂದ್ಹಾಗೆ ಸಿನಿಮಾದಲ್ಲಿ ಪ್ರಿಯಾಮಣಿ, ಪ್ರಿಯಾಂಕಾ, ಛಾಯಾ ಸಿಂಗ್ ನಾಯಕಿಯರಾಗಿ ಮಿಂಚಲಿದ್ದಾರೆ.
ಈ ಮೂವರು ನಟಿಯರು ಒಂದಾಗುತ್ತಿರುವ ಚಿತ್ರಕ್ಕೆ ಕಾಲಿವುಡ್ ನಿರ್ದೇಶಕ ಗೌತಮ್ ವಿ.ಪಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇನ್ನೂ ಕುತೂಹಲ ಮೂಡಿಸಿರುವ ಈ ಚಿತ್ರದ ಟೈಟಲ್ ಇನ್ನೂ ರಿವೀಲ್ ಆಗಿಲ್ಲ.
ಚಿತ್ರದಲ್ಲಿ ಈ ಮೂವರು ನಟಿಯರು ಬೇರೆ ಬೇರೆ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಚಿತ್ರೀಕರಣ ಬೆಂಗಳೂರು ಮತ್ತು ಕೊಡಗಿನಲ್ಲಿ ನಡೆಸಲು ಸಿನಿಮಾತಂಡ ಪ್ಲಾನ್ ಮಾಡಿದೆ. ಚಿತ್ರದಲ್ಲಿ ಶಿವಾಜಿ ಸೂರತ್ಕಲ್ ಖ್ಯಾತಿಯ ನಟ ವಿನಯ್ ಗೌಡ ಸಹ ನಟಿಸುತ್ತಿದ್ದಾರೆ. ಈ ಸಿನಿಮಾ ಪ್ರಸ್ತುತ ಕಾಲಘಟ್ಟದ ಜೊತೆಗೆ 1960ರ ದಶಕದ ಕಥೆಯನ್ನೂ ಒಳಗೊಂಡಿದೆ. ಹಾಗಾಗಿ ಪಾತ್ರಗಳು ಎರಡು ಶೇಡ್ ಗಳಲ್ಲಿ ಮೂಡಿಬರಲಿದೆ. ಅಂದಹಾಗೆ ಈ ಹೊಸ ಸಿನಿಮಾ ನವೆಂಬರ್ 17ರಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ನವೆಂಬರ್ 11ರಂದು ಸಿನಿಮಾ ಟೈಟಲ್ ರಿವೀಲ್ ಆಗಲಿದೆ.
ಡ್ರಗ್ಸ್ ಪ್ರಕರಣ: ಬಂಧಿತ ಆಡಂ ಪಾಷಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು
horror film
ಪವರ್ ಫುಲ್ ಹನುಮನ ದರ್ಶನ ಪಡೆದ ಪವರ್ ಸ್ಟಾರ್ ದಂಪತಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel