ಪತ್ನಿ, ಅತ್ತೆಯ ಹತ್ಯೆ ಮಾಡಿ ಮಕ್ಕಳ ಎದುರಲ್ಲೇ ಮೃತದೇಹವನ್ನು ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿ..!
ತ್ರಿಪುರ: ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಅತ್ತೆಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಸಾಲದ್ದಕ್ಕೆ ಮಕ್ಕಳ ಎದುರಲ್ಲೇ ಮೃತದೇಹಗಳನ್ನು ಕತ್ತರಿಸಿ ವಿಕೃತಿ ಮೆರಿದ್ದಾನೆ.. ಬಳಿಕ ಆತ ವಿಷ ಸೇವಿಸಿ ಸ್ವಯಂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ತ್ರಿಪುರಾದ ತ್ರಿಪುರಾದ ಧಲೈ ಜಿಲ್ಲೆಯಲ್ಲಿ ಇಂತಹದೊಂದು ಘಟನೆ ನಡೆದಿದೆ.
ಇಬ್ಬರು ಮಹಿಳೆಯರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಹಾಗೂ ಮಕ್ಕಳು ಆಘಾತಗೊಂಡು ಅಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದಾಗ ಮೃತದೇಹಗಳು ರಕ್ತದ ಮೊಡವಿನಲ್ಲಿರುವುದನ್ನ ಗಮನಿಸಿದ್ದಾರೆ. ಹತ್ಯೆಗೈದಿದ್ದ ಆರೋಪಿ ವಿಷ ಸೇವಿಸಿ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಇನ್ನೊಂದು ಕೊಠಡಿಯಲ್ಲಿ ಬಿದ್ದಿರುವುದು ಕಂಡು ಬಂದಿದ್ದು, ಆತನನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಬಳಿಕ ಆತನ ದೇಹದಲ್ಲಿ ವಿಷಾಂಶ ಪತ್ತೆಯಾಗಿದೆ. ಅತ ಅಪಾಯದಿಂದ ಪಾರಾಗಿದ್ದಾನೆ. ಸಂಪೂರ್ಣ ಗುಣಮುಖನಾದ ನಂತರ ವಿಚಾರಣೆ ಒಳಪಡಿಸಲಾಗುತ್ತೆ. ಇನ್ನೂ ಇಂತಹ ಭೀಭತ್ಸ ಕೃತ್ಯದ ಹಿಂದಿರುವ ಅಸಲಿ ಕಾರಣವೇನು.. ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಆತನನ್ನ ವಿಚಾರಣೆ ನಡೆಸಿದ ಬಳಿಕವಷ್ಟೇ ಗೊತ್ತಾಗಬೇಕಿದೆ.
ಮೂಲಗಳ ಪ್ರಕಾರ ಆರೋಪಿಯ ಪತ್ನಿ ಇಬ್ಬರು ಮಕ್ಕಳೊಂದಿಗೆ ಕಳೆದ ನಾಲ್ಕು ತಿಂಗಳಿಂದ ತವರು ಮನೆಯಲ್ಲಿ ವಾಸಿಸುತ್ತಿದ್ದರು. ಆರೋಪಿ ಹಾಗೂ ಆತನ ಪತ್ನಿ ವಿಚ್ಛೇದನ ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ ಇದ್ದರು. ವೈವಾಹಿಕ ಜೀವನದ ಮನಸ್ತಾಪವೇ ಈ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಗೂಗಲ್ ಮ್ಯಾಪ್ ನಂಬಿ ಹೋಗಿದ್ದವ ಪ್ರಾಣ ಕಳೆದುಕೊಂಡ..!
ಥೂ ಇವೆನೆಂತ ನೀಚ ಸಹೋದರ… ಕುಡಿದ ಮತ್ತಿನಲ್ಲಿ ವಿವಾಹಿತ ಸಹೋದರಿಯನ್ನೇ ರೇಪ್ ಮಾಡಿ, ವಿಡಿಯೋ ಮಾಡಿಸಿದ
ಥೂ ಎಂಥ ಮಗ ಇವನು: ಬುದ್ಧಿವಾದ ಹೇಳಿದ ತಂದೆಯ ಬರ್ಬರ ಕೊಲೆ
ಅಕ್ರಮ ಸಂಬಂಧ : ಮದುವೆಯಾಗು ಎಂದಾಕೆಯನ್ನ ಬರ್ಬರವಾಗಿ ಕೊಂದ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel