Bangalore | ಅತ್ತಿಗೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೈದುನರು
ಬೆಂಗಳೂರು : ಪತಿಯೇ ತನ್ನ ಪತ್ನಿಯ ಮೇಲೆ ಅತ್ಯಾಚಾರ ನಡೆಸಲು ತಮ್ಮಂದಿರಿಗೆ ಸಾಥ್ ಕೊಟ್ಟ ದುರಂತ ಘಟನೆ ಬೆಂಗಳೂರಿನ ಗೋವಿಂದ ಪುರದಲ್ಲಿ ನಡೆದಿದೆ.
ಅಬ್ದುಲ್ ನಬಿ ಎಂಬಾತ ತನ್ನ ಪತ್ನಿ ಮೇಲೆ ಅತ್ಯಾಚಾರ ಮಾಡಿ ಎಂದು ತನ್ನ ತಮ್ಮಂದಿರುಗಳಿಗೆ ಹೇಳಿದ್ದ ಎಂಬ ಆರೋಪ ಕೇಳಿಬಂದಿದೆ.
ಅಬ್ದುಲ್ ನಬಿ ತನ್ನ ಪತ್ನಿಯ ಬಳಿ ಹಣಕ್ಕಾಗಿ ಪೀಡಿಸಿದ್ದನಂತೆ. ತವರಿನಿಂದ ಹಣ ತರಲು ನಿರಾಕರಿಸಿದ್ದಾಕ್ಕಾಗಿ ಪತ್ನಿಯನ್ನು ಮನೆಯಿಂದ ಆಚೆ ಹಾಕಿದ್ದನಂತೆ. ಹೀಗಾಗಿ ಮಹಿಳೆ ತವರಿನಲ್ಲಿದ್ದರು.
ಈ ಮಧ್ಯೆ ಅಬ್ದುಲ್ ನಬಿ ಬೇರೊಂದು ಮದುವೆ ಯಾಗಿದ್ದಾನೆ. ತನಗೆ ಡೈವರ್ಸ್ ನೀಡದೇ ಬೇರೆ ಮದುವೆಯಾದದ್ದನ್ನು ಮಹಿಳೆ ಪತಿಯನ್ನು ಪ್ರಶ್ನಿಸಲು ಹೋಗಿದ್ದಾರೆ.
ಈ ವೇಳೆ ಆಕೆಯ ಮೇಲೆ ಅಬ್ದುಲ್ ನಬಿ ಮಾರಣಾಂತಿಕವಾಗಿ ಹಲ್ಲೆಗೈದಿದ್ದಾನೆ. ಅಲ್ಲದೇ ಪತ್ನಿಯ ಮೇಲೆ ಅತ್ಯಾಚಾರ ನಡೆಸುವಂತೆ ತನ್ನ ತಮ್ಮಂದಿರಿಗೆ ಸೂಚಿಸಿದ್ದನಂತೆ.
ಸದ್ಯ ನೊಂದ ಸಂತ್ರಸ್ಥೆಯಿಂದ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.