ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಬೆನ್ನುಹತ್ತಿರುವ ಸಿಸಿಬಿ ಪೊಲೀಸರಿಗೆ ಇಂದು ಯುವಕನೊಬ್ಬನ ದಿಡೀರ್ ಎಂಟ್ರಿ ಶಾಕ್ ಕೊಟ್ಟಿದೆ.
ನಾನು ಡ್ರಗ್ಸ್ ದಂಧೆ ಪ್ರಕರಣ 13ನೇ ಆರೋಪಿ, ನನ್ನನ್ನೂ ಬಂಧಿಸಿ ಎಂದು ಅನಿರುದ್ಧ ಎಂಬ ಯುವಕ ಸಿಸಿಬಿ ಕಚೇರಿಗೆ ಬಂದಿರುವುದು ಪೊಲೀಸರಿಗೆ ಅಚ್ಚರಿ ಮೂಡಿಸಿದೆ.
ಬೈಕ್‍ನಲ್ಲಿ ಸಿಸಿಬಿ ಕಚೇರಿಗೆ ಎಂಟ್ರಿ ಕೊಟ್ಟ ಅನಿರುದ್ಧ್, ನೇರವಾಗಿ ಸಿಸಿಬಿ ಕಚೇರಿಯ ಸಿಬ್ಬಂದಿ ಬಳಿ ಹೋಗಿ ನನ್ನನ್ನು ಅರೆಸ್ಟ್ ಮಾಡಿ. ಈಗಾಗಲೇ ಬಂಧಿಸಿರುವ 12 ಆರೋಪಿಗಳ ಜತೆ ನಾನು ಸೇರಿದ್ದೇನೆ. ರಾಗಿಣಿ ಜೊತೆ ಇದ್ದದ್ದು ನಾನೇ ಇದ್ದದ್ದು, ಹೀಗಾಗಿ ನಾನು 13ನೇ ಆರೋಪಿಯಾಗಿದ್ದು ನನ್ನನ್ನು ಬಂಧಿಸಿ ಎಂದಿದ್ದಾನೆ.
ಆತನ ಹೆಸರು, ಎಲ್ಲಿಂದ ಬಂದಿದ್ದೀಯ ಎಂಬ ಮಾಹಿತಿ ಪಡೆದ ಸಿಸಿಬಿ ಸಿಬ್ಬಂದಿ, ಅನಿರುದ್ಧ್‍ನನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ.
ಪ್ರಾಥಮಿಕ ಮಹಿತಿ ಪ್ರಕಾರ ಅನಿರುದ್ಧ್, ಜಯನಗರದ ಆರ್‍ಟಿಒ ಕಚೇರಿಯ ಎಸ್‍ಡಿಎ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ. ರಾಗಿಣಿ ಆಪ್ತ ರವಿಶಂಕರ್ ಸ್ನೇಹಿತ ಇರಬಹುದು ಎನ್ನಲಾಗಿದ್ದು, ಡ್ರಗ್ಸ್ ನಶೆಯಲ್ಲಿಯೇ ಸಿಸಿಬಿ ಕಚೇರಿಗೆ ಬಂದಿದ್ದಾನೆ ಎನ್ನಲಾಗಿದೆ.
ಹೀಗಾಗಿ ಈತನಿಗೂ, ರಾಗಿಣಿ ಸೇರಿದಂತೆ ಇತರೆ 12 ಆರೋಪಿಗಳಿಗೂ ಇರುವ ನಂಟೇನು, ಅನಿರುದ್ಧ್ ದಿಡೀರ್ ಬಂದು ನಾನು ಆರೋಪಿ ಎಂದು ಹೇಳಲು ಕಾರಣ ಏನು, ಆತ ಮಾನಸಿಕವಾಗಿ ತೊಂದರೆಯಲ್ಲಿದ್ದಾನಾ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸಿಸಿಬಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
Astrology : ಕುಕ್ಕೆ ಸುಬ್ರಹ್ಮಣ್ಯದಲ್ಲಿದೆ ಒಂದು ಅಪರೂಪದ ಗುಹೆ! ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ
ಕುಕ್ಕೆ ಸುಬ್ರಹ್ಮಣ್ಯದಲ್ಲಿದೆ ಒಂದು ಅಪರೂಪದ ಗುಹೆ! ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ : ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಿಂದ ಕುಮಾರದಾರಾ ನದಿಗೆ ತೆರಳುವ ಮಾರ್ಗ ಮಧ್ಯೆ...