ಟಿ-20 ವಿಶ್ವಕಪ್ – ಆರೋನ್ ಫಿಂಚ್ ಸಾರಥ್ಯದ ಆಸ್ಟ್ರೇಲಿಯಾ ತಂಡ ಪ್ರಕಟ…!
ಟಿ- ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಯುಎಇ ನಲ್ಲಿ ನಡೆಯಲಿರುವ ಪ್ರತಿಷ್ಠಿತ ಐಸಿಸಿ ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ತಂಡವನ್ನು ಆರೋನ್ ಫಿಂಚ್ ಅವರು ಮುನ್ನೆಡೆಸಲಿದ್ದಾರೆ.
ತಂಡದಲ್ಲಿ ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ ಅವರು ಹೊಸ ಮುಖ. ಇನ್ನುಳಿದಂತೆ ಸ್ಟೀವ್ ಸ್ಮಿತ್, ಪ್ಯಾಟ್ ಕಮಿನ್ಸ್, ಡೇವಿಡ್ ವಾರ್ನರ್ ತಂಡದ ಅನುಭವಿ ಆಟಗಾರರಾಗಿದ್ದಾರೆ. ಟಿ- 20 ವಿಶ್ವಕಪ್ ಟೂರ್ನಿ ಅಕ್ಟೋಬರ್ 17ರಿಂದ ಆರಂಭವಾಗಲಿದೆ. ಐಪಿಎಲ್ ಮುಗಿದ ತಕ್ಷಣವೇ ಪ್ರತಿಷ್ಠಿತ ಐಸಿಸಿ ಟೂರ್ನಿಯು ಭಾರತದ ಆಯೋಜಕತ್ವದಲ್ಲಿ ಯುಎಇ ನಲ್ಲಿ ನಡೆಯಲಿದೆ.
ಟಿ- 20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ತಂಡ
ಆರೋನ್ ಫಿಂಚ್ (ನಾಯಕ), ಆಶ್ಟನ್ ಆಗರ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಝಲ್ ವುಡ್, ಜೋಶ್ ಇಂಗ್ಲಿಸ್, ಮಿಟ್ಚೆಲ್ ಮಾರ್ಶ್, ಗ್ಲೇನ್ ಮ್ಯಾಕ್ಸ್ ವೆಲ್, ಕಾನೆ ರಿಚರ್ಡಸನ್, ಸ್ಟೀವ್ ಸ್ಮಿತ್, ಮಿಟ್ಚಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಮಿಟ್ಚೆಲ್ ಸ್ವಿಪ್ಸನ್, ಮ್ಯಾಥ್ಯೂ ವಾಡೆ, ಡೇವಿಡ್ ವಾರ್ನರ್, ಆಡಮ್ ಝಂಪಾ.