ICC-t20i-rankings | ಬಾಬರ್ ಅವರನ್ನ ಹಿಂದಿಕ್ಕಿದ ಸೂರ್ಯ
ಐಸಿಸಿ ಟಿ 20 ರ್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಮಿಂಚು ಹರಿಸಿದ್ದಾರೆ.
ಪಾಕಿಸ್ತಾನ್ ಕ್ಯಾಪ್ಟನ್ ಬಾಬರ್ ಆಜಾಂ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ್ದಾರೆ.
ಆಸ್ಟ್ರೇಲಿಯಾದ ವಿರುದ್ಧ ಸ್ವದೇಶದಲ್ಲಿ ನಡೆಯುತ್ತಿರುವ ಟಿ 20 ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಅದ್ಭುತ ಇನ್ನಿಂಗ್ಸ್ ಆಡಿದರು.
ಮೊಹಾಲಿ ವೇದಿಕೆಯಾಗಿ ನಡೆದ ಪಂದ್ಯದಲ್ಲಿ 25 ಎಸೆತಗಳನ್ನು ಎದುರಿಸಿದ ಸೂರ್ಯ, ಎರಡು ಫೋರ್, ನಾಲ್ಕು ಸಿಕ್ಸರ್ ಗಳ ಸಹಾಯದಿಂದ 46 ರನ್ ಗಳಿಸಿದರು.
ಈ ಹಿನ್ನೆಲೆಯಲ್ಲಿ 780 ಪಾಯಿಂಟ್ ಗಳೊಂದಿಗೆ ಟಿ 20 ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.
ಇದು ಹೀಗಿದ್ದರೇ ಪಾಕಿಸ್ತಾನ್ ಓಪನರ್ ಮೊಹ್ಮದ್ ರಿಜ್ವಾನ್ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಇನ್ನು ಎಡಿಯನ್ ಮಾರ್ಕ್ರಾಂ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ವಿರಾಟ್ ಕೊಹ್ಲಿ 16 ನೇ ಸ್ಥಾನದಲ್ಲಿದ್ದಾರೆ.
ಐಸಿಸಿ ಟಿ 20 ಬ್ಯಾಟಿಂಗ್ ರ್ಯಾಂಕಿಂಗ್ಸ್ ಟಾಪ್ 5 ಬ್ಯಾಟರ್ಸ್
ಮೊಹ್ಮದ್ ರಿಜ್ವಾನ್ ( ಪಾಕಿಸ್ತಾನ್ )
ಎಡಿಯನ್ ಮಾರ್ಕ್ರಾಂ (ದಕ್ಷಿಣ ಆಫ್ರಿಕಾ)
ಸೂರ್ಯ ಕುಮಾರ್ ಯಾದವ್ ( ಇಂಡಿಯಾ )
ಬಾಬರ್ ಅಜಂ ( ಪಾಕಿಸ್ತಾನ್ )
ಡೇವಿಡ್ ಮಲನ್ ( ಇಂಗ್ಲೆಂಡ್ )