ಕಾಂಗ್ರೆಸ್ ಬಿಟ್ಟು ಹೋದರೆ ಯಾರೂ ನಾಯಕರಲ್ಲ : ಯು.ಟಿ.ಖಾದರ್
ಚಾಮರಾಜನಗರ : ಕಾಂಗ್ರೆಸ್ ಎಲ್ಲರಿಗೂ ಕೊಡೆ ಇದ್ದಂರೆ. ಕಾಂಗ್ರೆಸ್ ಬ್ಯಾನರ್ ನಲ್ಲಿದ್ದರಷ್ಟೆ ಎಲರಲೂ ನಾಯಕರು. ಪಕ್ಷ ಬಿಟ್ಟು ಹೋದರೇ ಯಾರೂ ನಾಯಕರಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ ನಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದ್ಯಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಬ್ಯಾನರ್ ನಲ್ಲಿದ್ದರಷ್ಟೇ ಎಲ್ಲರೂ ನಾಯಕರು.
ಕಾಂಗ್ರೆಸ್ ಬಿಟ್ಟು ಹೋದರೆ ಯಾರೂ ನಾಯಕರಲ್ಲ. ಕಾಂಗ್ರೆಸ್ ಪಾರ್ಟಿಯೇ ನಾಯಕ. ಕಾಂಗ್ರೆಸ್ ಎಲ್ಲರಿಗೂ ಕೊಡೆ ಇದ್ದಂತೆ.
ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಹೈಕಮಾಂಡ್ ಹೇಳಿದಂತೆ ನಾಯಕರು ನಡೆದುಕೊಳ್ಳುತ್ತಾರೆ ಅಂತಾ ಹೇಳಿದ್ರು.
ಇದೇ ವೇಳೆ ಅಲ್ಪಸಂಖ್ಯಾತ ಕಾಂಗ್ರೆಸ್ ನಾಯಕರಲ್ಲಿ ಭಿನ್ನಾಭಿಪ್ರಾಯ ವಿಚಾರವಾಗಿ ಮಾತನಾಡಿ, ಎಲ್ಲಾ ಅಲ್ಪಸಂಖ್ಯಾತ ಮುಖಂಡರು ಒಗ್ಗಟ್ಟಾಗಿದ್ದೇವೆ.
ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅಹಿಂದ ನಾಯಕರಾಗಲು, ಅಲ್ಪಸಂಖ್ಯಾತ ನಾಯಕರಾಗಲು ಯಾರೂ ಯತ್ನಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
