ADVERTISEMENT
Wednesday, August 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಮ್ಮ ಮೀನ್ಸಾರು ಮಾಡಿ ಕಾಯ್ತಾ ಇದ್ರು: ಅಣ್ಣ-ತಮ್ಮ ಊಟಕ್ಕೆ ಬರ್ತಿದ್ದಾಗ ನಡುರಸ್ತೇಲಿ ಹೆಣವಾದ್ರು..!

Kariyappa N by Kariyappa N
January 16, 2021
in Newsbeat, Samagra karnataka, Uncategorized, ರಾಜ್ಯ
Share on FacebookShare on TwitterShare on WhatsappShare on Telegram

ಕಲಬುರ್ಗಿ: ಆ ಊರಿನ ಗ್ರಾಮಸ್ಥರು ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿದ್ದರು. ಸಂಕ್ರಾಂತಿ ಮಾರನೆ ದಿನ ಕರಿ ಹಿನ್ನೆಲೆಯಲ್ಲಿ ಮೀನು-ಮಾಂಸದ ಅಡುಗೆ ಘಮ ಊರ ತುಂಬೆಲ್ಲಾ ಹರಡಿತ್ತು. ಆದ್ರೆ, ಕರಿ ದಿನ ಆಗಬಾರದ ಅನಾಹುತ ಆಗೇ ಹೋಗಿದೆ. ನಡು ರಸ್ತೇಲಿ ಅಣ್ಣ-ತಮ್ಮ ನೋಡ ನೋಡುತ್ತಿದ್ದಂತೆ ಬೀದಿ ಹೆಣವಾಗಿದ್ದಾರೆ. ಅದೂ ಕೂಡ ಸಿನಿಮಾ ಸ್ಟೈಲಲ್ಲಿ.
ಈ ಭೀಕರ ಜೋಡಿ ಕೊಲೆ ನಡೆದಿರುವುದು ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ತಡಕಲ್ ಗ್ರಾಮದಲ್ಲಿ. ಗ್ರಾಮದ ನಿಲೇಶ್(39) ಮತ್ತು ರಾಜು(31) ಕೊಲೆಯಾದ ಅಣ್ಣ-ತಮ್ಮ.
ಕೂಲಿನಾಲಿ ಮಾಡಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದರು. ಅಣ್ಣ ನಿಲೇಶ್‍ಗೆ ಮದುವೆಯಾಗಿ ಮೂರು ಮಕ್ಕಳಿವೆ. ಮದುವೆ ನಂತರ ಪತ್ನಿ-ಮಕ್ಕಳ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದ. ತಮ್ಮ ರಾಜುಗೆ ಮದುವೆಯಾಗಿಲ್ಲ. ತಾಯಿ ಜತೆ ಗ್ರಾಮದ ಹೊರವಲಯದ ಮನೆಯಲ್ಲಿ ವಾಸವಿದ್ದ.
ಶುಕ್ರವಾರ ಸಂಕ್ರಾಂತಿ ಹಬ್ಬದ ಕರಿ ದಿನ. ಹೀಗಾಗಿ ರಾಜು ಬೆಳಿಗ್ಗೆಯೇ ಮೀನು ತಂದು ಸಾರು ಮಾಡಲು ಅಮ್ಮನಿಗೆ ಕೊಟ್ಟಿದ್ದ. ಮೀನ್ಸಾರು ಊಟಕ್ಕೆ ಅಣ್ಣ ನಿಲೇಶ್‍ನನ್ನು ಕರ್ಕೊಂಡು ಬರ್ತೀನಿ ಅಂತ ತಮ್ಮ ರಾಜು ಮನೆಯಿಂದ ಊರೊಳಗೆ ಹೋಗಿದ್ದ. ಅಮ್ಮನೂ ಇನ್ನೇನು ಮಕ್ಕಳು ಬಂದೇ ಬಿಟ್ರು ಅಂತ ಮೀನು ಸಾರು ಮಾಡಿ ಮಕ್ಕಳಿಗಾಗಿ ಕಾಯ್ತಾ ಇದ್ರು.


ಆದ್ರೆ, ಅಣ್ಣ ನಿಲೇಶ್‍ನ ಮನೆಗೆ ಹೋದ ತಮ್ಮ ರಾಜು, ಅಣ್ಣನೊಂದಿಗೆ ಊರ ಹೊರಗಿನ ಮನೆ ಕಡೆ ಹೆಜ್ಜೆ ಹಾಕಿದ್ರು ಅಷ್ಟೇ. ಅಷ್ಟರಲ್ಲೇ ಎಲ್ಲಿದ್ದನೋ ಚಂದ್ರಪ್ಪ ಎಂಬಾತ ಇಬ್ಬರ ಜತೆ ಜಗಳ ತೆಗೆದು ತಲ್ವಾರ್‍ನಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಸಂಕ್ರಾಂತಿ ಸಂಭ್ರಮದಲ್ಲಿದ್ದ ಕಲಬುರ್ಗಿಯ ತಡಕಲ್ ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಬೆಚ್ಚಿ ಬೀಳಿಸುವಂತೆ ಮಾಡಿದೆ.

Related posts

saakshatv.com/darshan-puttannaiah-inaugurates-tara-english-language-lab-mandya

ಜಕ್ಕನಹಳ್ಳಿಯಲ್ಲಿ ‘ತಾರಾ ಇಂಗ್ಲಿಷ್ ಭಾಷಾ ಪ್ರಯೋಗಾಲಯ’ ಉದ್ಘಾಟನೆ

August 26, 2026
ತಾರಾ ಇಂಗ್ಲಿಷ್ ಭಾಷಾ ಪ್ರಯೋಗಾಲಯ’ ಉದ್ಘಾಟನಾ ಸಮಾರಂಭ

ತಾರಾ ಇಂಗ್ಲಿಷ್ ಭಾಷಾ ಪ್ರಯೋಗಾಲಯ’ ಉದ್ಘಾಟನಾ ಸಮಾರಂಭ

August 25, 2026

ಅಕ್ರಮ ಸಂಬಂಧ ಕೊಲೆಗೆ ಶಂಕೆ..!
ಕೊಲೆಯಾದ ನಿಲೇಶ್ ಹಾಗೂ ಕೊಲೆ ಮಾಡಿದ ಚಂದ್ರಪ್ಪ ಒಂದೇ ಊರಿನವರು. ಚಂದ್ರಪ್ಪನ ಸಹೋದರಿ ಜತೆ ನಿಲೇಶ್ ಅಕ್ರಮ ಸಂಬಂಧ ಹೊಂದಿದ್ದನಂತೆ. ಆಕೆಯನ್ನು ನಡುನೀರಲ್ಲಿ ಕೈಬಿಟ್ಟು ಬೇರೊಬ್ಬರನ್ನು ಮದುವೆಯಾಗಿದ್ದ. ಈ ಘಟನೆ ಬಳಿಕ ಚಂದ್ರಪ್ಪನ ಸಹೋದರಿಗೂ ಮದುವೆಯಾಗಿ ಕೆಲ ವರ್ಷಗಳು ಆಗಿದ್ದವು.
ಆದರೆ, ತನ್ನ ತಂಗಿ ಬಾಳು ಹಾಳು ಮಾಡಿದ ಎಂಬ ಸಿಟ್ಟು ಚಂದ್ರಪ್ಪನ್ನು ಕಾಡುತ್ತಲೇ ಇತ್ತು. ಈ ವಿಚಾರವಾಗಿ ಆಗಾಗ ನಿಲೇಶ್ ಹಾಗೂ ಚಂದ್ರಪ್ಪ ಜಗಳವಾಡುತ್ತಿದ್ದರು. ಇಬ್ಬರ ಜಗಳ ಈಗ ಜೋಡಿ ಕೊಲೆಯಲ್ಲಿ ಅಂತ್ಯವಾಗಿದೆ.
ಮಹಗಾಂವ್ ಪೆÇಲೀಸ್ ಠಾಣೆಯಲ್ಲಿ ಜೋಡಿ ಕೊಲೆ ಪ್ರಕರಣ ದಾಖಲಾಗಿದೆ. ಘಟನೆ ನಂತರ ಆರೋಪಿ ಚಂದ್ರಪ್ಪ ತಲೆ ಮರೆಸಿಕೊಂಡಿದ್ದಾನೆ. ಆದರೆ ತಂದೆಯನ್ನು ಕಳೆದುಕೊಂಡ ಮೂರು ಮಕ್ಕಳು ಅನಾಥವಾಗಿವೆ. ಈ ಘಟನೆ ತಡಕಲ್ ಗ್ರಾಮಸ್ಥರಿಗೆ ಸಂಕ್ರಾಂತಿ ಹಬ್ಬದ ಸಂಭ್ರಮ ಬದಲು ಕರಾಳ ದಿನವಾಗಿ ಪರಿಣಮಿಸಿದೆ.

Tags: brothers murder in villageIllicit relationshipkalaburgiwitnesses the murder
ShareTweetSendShare
Join us on:

Related Posts

saakshatv.com/darshan-puttannaiah-inaugurates-tara-english-language-lab-mandya

ಜಕ್ಕನಹಳ್ಳಿಯಲ್ಲಿ ‘ತಾರಾ ಇಂಗ್ಲಿಷ್ ಭಾಷಾ ಪ್ರಯೋಗಾಲಯ’ ಉದ್ಘಾಟನೆ

by admin
August 26, 2026
0

AI ತಂತ್ರಜ್ಞಾನದೊಂದಿಗೆ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಹೊಸ ಸ್ಪರ್ಶ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಾರ್ಗದರ್ಶನ ಪುಟ್ಟಣ್ಣಯ್ಯ ಫೌಂಡೇಶನ್‌, ಲರ್ನಿಂಗ್‌ ಮ್ಯಾಟರ್ಸ್‌ ಮತ್ತು ರೋಟರಿ ಕ್ಲಬ್ ಆಫ್...

ತಾರಾ ಇಂಗ್ಲಿಷ್ ಭಾಷಾ ಪ್ರಯೋಗಾಲಯ’ ಉದ್ಘಾಟನಾ ಸಮಾರಂಭ

ತಾರಾ ಇಂಗ್ಲಿಷ್ ಭಾಷಾ ಪ್ರಯೋಗಾಲಯ’ ಉದ್ಘಾಟನಾ ಸಮಾರಂಭ

by admin
August 25, 2026
0

ಮಂಡ್ಯ: ಎಲೆಕೆರೆಯ ಪಿ.ಎಂ. ಶ್ರೀ ಆದರ್ಶ ವಿದ್ಯಾಲಯದಲ್ಲಿ ಪುಟ್ಟಣ್ಣಯ್ಯ ಫೌಂಡೇಶನ್‌, ಲರ್ನಿಂಗ್‌ ಮ್ಯಾಟರ್ಸ್‌ ಮತ್ತು ರೋಟರಿ ಕ್ಲಬ್ ಆಫ್ ಬೆಂಗಳೂರು ಜಂಕ್ಷನ್ ಸಹಯೋಗದೊಂದಿಗೆ 'ತಾರಾ ಇಂಗ್ಲಿಷ್ ಭಾಷಾ...

saakshatv.com/jio-world-convention-centre-launches-conference-ambassador-program-mumbai

ಮುಂಬೈಗೆ ಜಾಗತಿಕ ಸಮ್ಮೇಳನಗಳನ್ನು ತರಲು ‘ಕಾನ್ಫರೆನ್ಸ್ ಅಂಬಾಸಿಡರ್’ ಕಾರ್ಯಕ್ರಮ

by admin
August 25, 2026
0

ಮುಂಬೈ, : ಮುಂಬೈಯನ್ನು ಜಾಗತಿಕ ಮಟ್ಟದ ಸಮ್ಮೇಳನಗಳು ಹಾಗೂ ಬಿಸಿನೆಸ್‌ ಈವೆಂಟ್‌ಗಳ ಪ್ರಮುಖ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ (JWCC) ‘ಕಾನ್ಫರೆನ್ಸ್ ಅಂಬಾಸಿಡರ್...

saakshatv.com/dun-and-bradstreet-city-vitality-index-report-emerging-cities-growth

ಮೆಟ್ರೋ ನಗರಗಳನ್ನು ಹಿಂದಿಕ್ಕಿ ಬೆಳೆಯುತ್ತಿವೆ ಸಣ್ಣ ನಗರಗಳು: ‘ಡನ್ & ಬ್ರಾಡ್‌ಸ್ಟ್ರೀಟ್’ ವರದಿಯಲ್ಲಿ ಅಚ್ಚರಿಯ ಮಾಹಿತಿ!

by admin
August 25, 2026
0

ಬೆಂಗಳೂರು: ಭಾರತದ ಆರ್ಥಿಕ ಬೆಳವಣಿಗೆ ಎಂದರೆ ಕೇವಲ ಮುಂಬೈ, ದೆಹಲಿ, ಬೆಂಗಳೂರಿನಂತಹ ದೊಡ್ಡ ಮೆಟ್ರೋ ನಗರಗಳು ಮಾತ್ರ ಅಂತ ನೀವು ಅಂದುಕೊಂಡಿದ್ದರೆ, ಆ ಲೆಕ್ಕಾಚಾರವನ್ನು ಬದಲಿಸಿಕೊಳ್ಳುವ ಸಮಯ...

ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಮೆರಿಕನ್ ಎಕ್ಸ್‌ಪ್ರೆಸ್ ಮತ್ತು ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಸಹಭಾಗಿತ್ವ

ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಮೆರಿಕನ್ ಎಕ್ಸ್‌ಪ್ರೆಸ್ ಮತ್ತು ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಸಹಭಾಗಿತ್ವ

by admin
August 25, 2026
0

 ಅಮೆರಿಕನ್ ಎಕ್ಸ್‌ಪ್ರೆಸ್ ಬ್ಯಾಂಕಿಂಗ್ ಕಾರ್ಪ್ ಮತ್ತು ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್  ( ಎನ್‌ಎಂಎಸಿಸಿ) ಕಲೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಹಭಾಗಿತ್ವವನ್ನು ಘೋಷಿಸಿವೆ. ಇದು ಅರ್ಹ ಅಮೆರಿಕನ್ ಎಕ್ಸ್‌ಪ್ರೆಸ್ ಇಂಡಿಯಾ ಕಾರ್ಡ್ ಸದಸ್ಯರಿಗೆ ಎನ್‌ಎಂಎಸಿಸಿಯಲ್ಲಿ ಕಲೆ, ಮನರಂಜನೆ ಮತ್ತು ಆತಿಥ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ವಿಶೇಷ ಸಾಂಸ್ಕೃತಿಕ ಅನುಭವವನ್ನು ನೀಡಲಿದೆ.  ಅಮೆರಿಕನ್ ಎಕ್ಸ್‌ಪ್ರೆಸ್ 'ಆದ್ಯತೆಯ ಪೇಮೆಂಟ್ ಪಾಲುದಾರರಾಗಿ'  ಅರ್ಹ ಕಾರ್ಡ್ ಸದಸ್ಯರಿಗೆ ಎನ್‌ಎಂಎಸಿಸಿಯಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಲಿದೆ. ಈ ಪಾಲುದಾರಿಕೆಯು ಭಾರತೀಯ ಮತ್ತು ಅಂತರರಾಷ್ಟ್ರೀಯ ಕಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಎನ್‌ಎಂಎಸಿಸಿಯ ಬದ್ಧತೆಯನ್ನು ಎತ್ತಿಹಿಡಿಯಲಿದೆ. ಮುಂಗಡ ಟಿಕೆಟ್ ಮಾರಾಟ (ಪ್ರಿ-ಸೇಲ್), ಆಯ್ದ ಪ್ರದರ್ಶನಗಳಿಗೆ ಉಚಿತ ಪ್ರವೇಶ, ವಿಶೇಷ ಡೈನಿಂಗ್ ಸೌಲಭ್ಯಗಳು ಮತ್ತು ಪ್ರೀಮಿಯಂ ಸೇವೆಗಳು ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ.  ಅಮೆರಿಕನ್ ಎಕ್ಸ್‌ಪ್ರೆಸ್ ಇಂಡಿಯಾದ ಸಿಇಒ ಮತ್ತು ಕಂಟ್ರಿ ಮ್ಯಾನೇಜರ್ ಸಂಜಯ್ ಖನ್ನಾ ಮಾತನಾಡಿ: “ಭಾರತವು ಕಲೆ ಮತ್ತು ಸಂಸ್ಕೃತಿಯ ಅಸಾಧಾರಣ ಪರಂಪರೆಯನ್ನು ಹೊಂದಿದೆ. ಎನ್‌ಎಂಎಸಿಸಿ ಈ ಪರಂಪರೆಯನ್ನು ಆಚರಿಸುವ ಮತ್ತು ಜಾಗತಿಕ ಮಟ್ಟದ ಅದ್ಭುತ ಅನುಭವಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಅಸಾಧಾರಣ ವೇದಿಕೆಯನ್ನು ಸೃಷ್ಟಿಸಿದೆ. ನಮ್ಮ ಕಾರ್ಡ್ ಸದಸ್ಯರಿಗೆ ಅತ್ಯಮೂಲ್ಯ ಮತ್ತು ವಿಶಿಷ್ಟ ಅನುಭವಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದರು.  ಜಿಯೋ ವರ್ಲ್ಡ್ ಸೆಂಟರ್‌ನ ಸಿಇಒ ದೇವೇಂದ್ರ ಬರ್ಮಾ ತಿಳಿಸುತ್ತಾ: “ ಎನ್‌ಎಂಎಸಿಸಿಯಲ್ಲಿ  ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ಪರಿಚಯಿಸುವುದು ಮತ್ತು ಜಗತ್ತಿನ ಶ್ರೇಷ್ಠತೆಯನ್ನು ಭಾರತಕ್ಕೆ ತರುವುದು ನಮ್ಮ ದೃಷ್ಟಿಯಾಗಿದೆ. ಸಂಸ್ಕೃತಿಯ ಮೂಲಕ ಜನರನ್ನು ಬೆಸೆಯುವ ನಮ್ಮ ನಂಬಿಕೆಯೇ ಈ ಸಹಯೋಗಕ್ಕೆ ಮೂಲ ಕಾರಣವಾಗಿದೆ” ಎಂದರು.  ಅಮೆರಿಕನ್ ಎಕ್ಸ್‌ಪ್ರೆಸ್ ಬಗ್ಗೆ: 1850 ರಲ್ಲಿ ಸ್ಥಾಪನೆಯಾಗಿರುವ ಅಮೆರಿಕನ್ ಎಕ್ಸ್‌ಪ್ರೆಸ್  ಜಾಗತಿಕ ಪಾವತಿಗಳು ಮತ್ತು ಪ್ರೀಮಿಯಂ ಲೈಫ್‌ಸ್ಟೈಲ್ ಬ್ರ್ಯಾಂಡ್ ಆಗಿದೆ. ಇದು ಗ್ರಾಹಕರ ಜೀವನವನ್ನು ಸಮೃದ್ಧಗೊಳಿಸಲು ಮತ್ತು ವ್ಯಾಪಾರವನ್ನು ಯಶಸ್ವಿಗೊಳಿಸಲು ವಿಶ್ವಾಸಾರ್ಹ ಸೇವೆಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗೆ :americanexpress.com, americanexpress.com/en-us/newsroom/, and  ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್  ಬಗ್ಗೆ: ಇದು ಮುಂಬಯಿನ ಬಾಂದ್ರಾ ಕುರ್ಲಾ ಸಂಕೀರ್ಣದ ಹೃದಯಭಾಗದಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿರುವ, ಕಲಾ ಕ್ಷೇತ್ರದಲ್ಲೊಂದು ಅತ್ಯಂತ ವಿಶಿಷ್ಟವಾದ ಕೇಂದ್ರವಾಗಿದೆ.

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram