Imran Khan
ಅಮೆರಿಕದಲ್ಲಿ ಟ್ರಂಪ್ ಅವರ ವಿರುದ್ಧ ಭರ್ಜರಿಯಾಗಿ ಜಯಭೇರಿ ಬಾರಿಸಿ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್ ಅವರಿಗೆ ಇಡೀ ವಿಶ್ಯಾದ್ಯಂತದಿಂದ ಶುಭಾಷಯಗಳ ಮಹಾಪೂರವೇ ಹರಿದುಬರ್ತಾಯಿದೆ. ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಅಂತೆಯೇ ರಾಜಕೀಯ ಗಣ್ಯರು ಹಾಗೂ ವಿವಿಧ ದೇಶಗಳ ಪ್ರಧಾನ ಮಂತ್ರಿಗಳು ಬಿಡೆನ್ ಅವರಿಗೆ ಅಭಿನಂದನೆ ಸಲ್ಲಿಸ್ತಿದ್ದಾರೆ. ಅದ್ರಲ್ಲಿ ಒಬ್ರು ಪಾಕ್ ಪ್ರಧಾನಿ ಇಮ್ರಾನ್ ಖಾನ್. ಪ್ರಧಾನಿ ಇಮ್ರಾನ್ ಖಾನ್ ಅವರು ಜೋ ಬಿಡೆನ್ ಅವರ ಗೆಲುವಿಗೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. ಆದ್ರೆ ಅವರ ಟ್ವೀಟ್ ನಲ್ಲಿ ಇದೀಗ ಭಾರೀ ಎಎಡವಟ್ಟೊಂದು ಆಗಿದ್ದು, ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ.
ಹೌದು.. ಇಮ್ರಾನ್ ಖಾನ್ ಅವರು ಉರ್ದುವಿನಲ್ಲಿ ಟ್ವೀಟ್ ಮಾಡಿದ್ದಾರೆ. ಆದ್ರೆ ಅವರ ಟ್ವೀಟ್ ಅನ್ನ ಗೂಗಲ್ ನಲ್ಲಿ ಟ್ರ್ಯನ್ಸಲೇಟ್ ಮಾಡಿ ಓದಿದಾಗ, ತಲೆ ತಿರುಗಿಬರುತ್ತೆ. ಯಾಕಂದ್ರೆ ಗೂಗಲ್ ಟ್ರ್ಯಾನ್ಸಲೇಶನ್ ಎಡವಟ್ಟಿನಿಂದಾಗಿ ಜೋ ಬಿಡೆನ್ ಮಾಡಿರುವ ಟ್ವೀಟ್ ಬೇರೆಯೇ ಅರ್ಥ ಬರುವ ಹಾಗೆ ಬಿಂಬಿತವಾಗ್ತಿದೆ.
ಅಷ್ಟಕ್ಕೂ ಇಮ್ರಾನ್ ಖಾನ್ ಅವರ ಟ್ವೀಟ್ ಟ್ರ್ಯಾನ್ಸಲೇಟ್ ಮಾಡಿದಾಗ ಏನ್ ಬರುತ್ತಿದೆ ಗೊತ್ತಾ..!
ಇಮ್ರಾನ್ ಖಾನ್ ಟ್ವೀಟ್ : ‘ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರಿಗೆ ಅಭಿನಂದನೆಗಳು. ರಾಷ್ಟ್ರೀಯ ಸಂಪತ್ತನ್ನು ಲೂಟಿ ಮಾಡುವವರ ಹಾಗೂ ತೆರಿಗೆ ವಂಚನೆ ಮಾಡುವವರ ವಿರುದ್ಧ ಸಮರ ಸಾರಲು ನಾವು ನಿಮ್ಮ ಜತೆ ಕೈಜೋಡಿಸುತ್ತೇವೆ. ಈ ಸೇವೆಗಾಗಿ ನಾವು ಎದುರುನೋಡುತ್ತಿದ್ದೇವೆ’ ಎಂದಿದ್ದಾರೆ.
ಟ್ರ್ಯಾನ್ಸಲೇಟ್ : ಇಮ್ರಾನ್ ಖಾನ್ ಅವರ ಟ್ವೀಟ್ ಟ್ರಾನ್ಸ್‌ಲೇಷನ್ ಮೂಲಕ ತುರ್ಜುಮೆ ಮಾಡಿದಾಗ, ‘ನೂತನ ನಾಯಕರಿಗೆ ಅಭಿನಂದನೆಗಳು, ‘ಕದ್ದ ರಾಷ್ಟ್ರೀಯ ಸಂಪತ್ತನ್ನು ಮುಚ್ಚಿಹಾಕುವ ಮತ್ತು ಅಕ್ರಮ ತೆರಿಗೆ ಧಾಮಗಳ ಭ್ರಷ್ಟ ನಾಯಕರಿಗೆ ಅಭಿನಂದನೆ. ಇವರ ಜತೆ ಕೆಲಸ ಮಾಡಲು ನಾನು ಎದುರು ನೋಡುತ್ತೇನೆ’ ಎಂದು ಅನುವಾದಗೊಂಡಿದೆ.
ಬಿಎಸ್ ವೈ ಕೋಟೆಯಲ್ಲಿ ಸಿದ್ದರಾಮಯ್ಯಗೆ ಭಾರಿ ಕ್ರೇಜ್
ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಇಮ್ರಾನ್ ಖಾನ್ ಮತ್ತೊಮ್ಮೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಇತ್ತ ಇಮ್ರಾನ್ ಖಾನ್ ಅವರ ಟ್ವಿಟ್ ಅನ್ನ ಜೋ ಬಿಡೆನ್ ನೋಡುದ್ರೆ ಏನ್ ಕಥೆ ಎಂದೆಲ್ಲಾ ಹಾಸ್ಯಾಸ್ಪದವಾಗಿ ಚರ್ಚೆಗೆ ಗುರಿಯಾಗಿದೆ.
Imran Khan
ಪ್ಲೇ ಆಫ್ ನಿಂದ ಹೊರಬಿದ್ದ ಆರ್‌ಸಿಬಿ ಬಗ್ಗೆ ಸಿಂಪಲ್ ಸುನಿ ಭಾವನಾತ್ಮಕ ಟ್ವೀಟ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel