ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಧ್ಯೆದ ಪಂದ್ಯದಲ್ಲಿ ಆತಿಥೇಯ ತಂಡ ಭರ್ಜರಿ ಜಯ ಸಾಧಿಸಿದೆ.
ಹರಿಣಗಳು ಕೇವಲ 83 ರನ್ಗಳಿಗೆ ಆಲೌಟ್ ಆಗುವ ಮೂಲಕ ಬರೋಬ್ಬರಿ 243 ರನ್ಗಳಿಂದ ಸೋಲು ಕಂಡಿದೆ. ಕೋಲ್ಕತ್ತಾ: ವಿರಾಟ್ ಕೊಹ್ಲಿ (Virat Kohli), ಶ್ರೇಯಸ್ ಅಯ್ಯರ್ ಶತಕದ ಜೊತೆಯಾಟ ಹಾಗೂ ರವೀಂದ್ರ ಜಡೇಜಾ (Ravindra Jadeja) ಸ್ಪಿನ್ ಜಾದುವಿನಿಂದಾಗಿ ಭಾರತ 243 ರನ್ಗಳ ಭರ್ಜರಿ ಜಯ ಕಂಡಿದೆ.
ಈ ಗೆಲುವಿನ ಮೂಲಕ ಭಾರತ ತಂಡ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಕೇವಲ 83 ರನ್ ಗಳಿಗೆ ಆಲೌಟ್ ಆಗಿರುವ ಹರಿಣ ಪಡೆ ವಿಶ್ವಕಪ್ (ICC Cricket World Cup) ಇತಿಹಾಸದಲ್ಲಿಯೇ ಕೆಟ್ಟ ದಾಖಲೆ ಬರೆದಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 326 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಆಫ್ರಿಕಾ ತಂಡ, ಕೇವಲ 83 ರನ್ ಗಳಿಗೆ ಆಲೌಟ್ ಆಗಿದೆ.
ಜಡೇಜಾ 9 ಓವರ್ನಲ್ಲಿ 33 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದು ಮಿಂಚಿದರು. ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಕಿತ್ತರೆ, ಸಿರಾಜ್ 1 ವಿಕೆಟ್ ಪಡೆದರು. ದಕ್ಷಿಣ ಆಫ್ರಿಕಾ ತಂಡ ಬೃಹತ್ ಮೊತ್ತದ ಗುರಿ ಬೆನ್ನಟ್ಟಿ ಆರಂಭದಿಂದಲೂ ಎಡವಿತು. ಎಲ್ಲಿಯೂ ಭಾರತೀಯರ ದಾಳಿಗೆ ಪ್ರತಿರೋಧ ಒಡ್ಡುವ ಪ್ರಯತ್ನ ಅವರಿಂದ ಸಾಧ್ಯವಾಗಲಿಲ್ಲ. 6 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿದ್ದ ಹರಿಣರ ಪಡೆ 63 ರನ್ ಗಳಿಸುವಷ್ಟರಲ್ಲಿಯೇ ಪ್ರಮುಖ 6 ವಿಕೆಟ್ ಕಳೆದುಕೊಂಡಿತ್ತು. ಕ್ವಿಂಟನ್ ಡಿಕಾಕ್ (Quinton de Kock) 5 ರನ್, ತೆಂಬಾ ಬವುಮಾ (Temba Bavuma) 11 ರನ್, ರಾಸಿ ವಾನ್ ಡೇರ್ ಡುಸ್ಸೆನ್ 13 ರನ್, ಏಡನ್ ಮಾರ್ಕ್ರಮ್ 9 ರನ್, ಹೆನ್ರಿಚ್ ಕ್ಲಾಸೆನ್ 1 ರನ್. ಡೇವಿಡ್ ಮಿಲ್ಲರ್ 11 ರನ್, ಮಾರ್ಕೋ ಜಾನ್ಸೆನ್ 14 ರನ್, ಕೇಶವ್ ಮಹರಾಜ್ 7 ರನ್, ಕಾಗಿಸೊ ರಬಾಡ 6 ರನ್, ತಬ್ರಿಝಿ ಶಂಸಿ 4 ರನ್ ಗಳಿಸಿದ್ರೆ ಕ್ರೀಸ್ನಲ್ಲಿ ಉಳಿದರೆ, ಲುಂಗಿ ಎನ್ಗಿಡಿ ಶೂನ್ಯಕ್ಕೆ ಔಟ್ ಆದರು.
ಭಾರತದ ಪರ ಕೊಹ್ಲಿ ಶತಕ ಹಾಗೂ ಶ್ರೇಯಸ್ ಅಯ್ಯರ್ ಭರ್ಜರಿ ಅರ್ಧಶತಕದ ನೆರವಿನೊಂದಿಗೆ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತ್ತು. ಆರಂಭಿಕರಾಗಿದ್ದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಜೋಡಿ ಮೊದಲ ವಿಕೆಟ್ಗೆ 5.5 ಓವರ್ಗಳಲ್ಲೇ 62 ರನ್ ಬಾರಿಸುವ ಮೂಲಕ ಸ್ಫೋಟಕ ಆರಂಭ ನೀಡಿತ್ತು. ಹಿಟ್ಮ್ಯಾನ್ 40 ರನ್ (24 ಎಸೆತ, 6 ಬೌಂಡರಿ, 2 ಸಿಕ್ಸರ್) ಬಾರಿಸಿ ಔಟಾದರು. ಇದರ ಬೆನ್ನಲ್ಲಿಯೇ ಗಿಲ್ 23 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಆಗ ಮೂರನೇ ವಿಕೆಟ್ ಗೆ ಜೊತೆಯಾದ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಹರಿಣರ ಮೇಲೆ ದಾಳಿ ಮುಂದುವರೆಸಿದರು. ಶ್ರೇಯಸ್ ಅರ್ಧಶತಕ ಗಳಿಸಿ ಪೆವಿಯನ್ಗೆ ಮರಳಿದರು. ಅಯ್ಯರ್ ಮತ್ತು ಕೊಹ್ಲಿ ಜೋಡಿ 3ನೇ ವಿಕೆಟ್ಗೆ 158 ಎಸೆತಗಳಲ್ಲಿ 138 ರನ್ ಗಳಿಸಿತ್ತು. ರವೀಂದ್ರ ಜಡೇಜಾ ಹಾಗೂ ಕೊಹ್ಲಿಯ 41 ರನ್ಗಳ ಜೊತೆಯಾಟವೂ ತಂಡದ ಮೊತ್ತ 300ರ ಗಡಿದಾಟಲು ನೆರವಾಯಿತು.
ಭಾರತದ ಪರ ಶ್ರೇಯಸ್ ಅಯ್ಯರ್ 77 ರನ್ (87 ಎಸೆತ, 7 ಬೌಂಡರಿ, 2 ಸಿಕ್ಸರ್), ಕೆ.ಎಲ್ ರಾಹುಲ್ 8 ರನ್, ಸೂರ್ಯಕುಮಾರ್ ಯಾದವ್ 22 ರನ್, ರವೀಂದ್ರ ಜಡೇಜಾ 29 ರನ್ ಗಳಿಸಿದರು.