ಬೆಂಗಳೂರು: ಕಾನೂನು ಎಷ್ಟೇ ಕಠಿಣವಾಗಿದ್ದರೂ ಕಾಮುಕರ ಅಟ್ಟಹಾಸ ತಗ್ಗಿಸಲು ಆಗುತ್ತಿಲ್ಲ. ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಇಂತಹ ಘಟನೆ ಬೆಳಕಿಗೆ ಬಂದಿದೆ.
ವಿಜಯನಗರದ ನಮ್ಮೂಟ ಹೋಟೆಲ್ ಗೆ ಬಂದಿದ್ದ ಯುವತಿಯರ ಮೈ ಮುಟ್ಟಿ ಮೂವರು ಕಾಮುಕರು ಹಿಂಸೆ ನೀಡಿದ್ದಾರೆ. ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮೂವರು ಕಾಮುಕರು ಹೋಟೆಲ್ಗೆ ಬರುವ ಯುವತಿಯರು, ಮಹಿಳೆಯರನ್ನು ಟಾರ್ಗೆಟ್ ಮಾಡಿ ಮೈ ಮುಟ್ಟಿ ವಿಕೃತಿ ಮೆರೆಯುತ್ತಿದ್ದರು ಎನ್ನಲಾಗಿದೆ. ಈ ಕುರಿತು ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅವರು ಬೇಕಂತಲೇ ಪ್ಲಾನ್ ಮಾಡಿ ಈ ರೀತಿ ಕೃತ್ಯ ಎಸಗುತ್ತಿದ್ದರು ಎನ್ನಲಾಗಿದೆ. ಒಬ್ಬ ಟಚ್ ಮಾಡುವ ಉದ್ಧೇಶದಿಂದ ಹೋದರೆ, ಮತ್ತಿಬ್ಬರು ವಾಚ್ ಮಾಡುತ್ತಾರೆ. ಏನಾದರೂ ಗಲಾಟೆಯಾದರೆ ತಪ್ಪಿಲ್ಲ ಎಂಬಂತೆ ಪರಾರಿಯಾಗುತ್ತಾರೆ.
ವಿಜಯನಗರದ ನಮ್ಮೂಟ ಹೋಟೆಲ್ ಬಳಿ ಯುವತಿಯನ್ನು ಕಾಮುಕ ಟಚ್ ಮಾಡಿ ಅಟ್ಟಹಾಸ ಮೆರೆದಿದ್ದಾನೆ. ಈ ವೇಳೆ ಗಲಾಟೆ ನಡೆದಿದ್ದು ಸಂಪೂರ್ಣ ದೃಶ್ಯ ಸೆರೆಯಾಗಿದೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.