ADVERTISEMENT
Sunday, August 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

IND v AUS: ಭಾರತಕ್ಕೆ ಗೆಲುವಿನ ʼಸೂರ್ಯʼಶಿಕಾರಿ: ಆಸೀಸ್‌ ವಿರುದ್ಧ ರೋಚಕ ಜಯ

ಮೊದಲ ಟಿ20ಯಲ್ಲಿ 2 ವಿಕೆಟ್‌ಗಳ ರೋಚಕ ಗೆಲುವು

C Dinesh by C Dinesh
November 24, 2023
in Sports, ಕ್ರಿಕೆಟ್
Surya and Kishan

Surya and Kishan

Share on FacebookShare on TwitterShare on WhatsappShare on Telegram

ಕೊನೆ ಕ್ಷಣದ ನಾಟಕೀಯ ಕುಸಿತದ ನಡುವೆಯೂ ಸೂರ್ಯಕುಮಾರ್‌ ಯಾದವ್‌(80) ಹಾಗೂ ಇಶಾನ್‌ ಕಿಶನ್‌(58) ಅವರುಗಳ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ವಿಶಾಖಪಟ್ಟಣಂನ ಡಾ.ವೈ.ಎಸ್‌.ರಾಜಶೇಖರ ರೆಡ್ಡಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಗುರುವಾರ ಸಂಜೆ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 208/3 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು. ಜೋಶ್‌ ಇಂಗ್ಲಿಸ್‌(110) ಹಾಗೂ ಸ್ವೀವ್‌ ಸ್ಮಿತ್‌(52) ತಂಡಕ್ಕೆ ಆಸರೆಯಾದರು. ಈ ಟಾರ್ಗೆಟ್‌ ಚೇಸ್‌ ಮಾಡಿದ ಭಾರತ 19.5 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 209 ರನ್‌ಗಳಿಸುವ ಮೂಲಕ ಗೆಲುವಿನ ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.

Josh Inglis

ಇಂಗ್ಲಿಸ್‌ ಸ್ಪೋಟಕ ಶತಕ:
ಟಾಸ್‌ ಸೋತರು ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ 31 ರನ್‌ಗಳಿಗೆ ಆರಂಭಿಕ ಬ್ಯಾಟರ್‌ ಮ್ಯಾಥ್ಯೂ ಶಾರ್ಟ್‌(13) ವಿಕೆಟ್‌ ಕಳೆದುಕೊಂಡಿತು. ಆದರೆ 2ನೇ ವಿಕೆಟ್‌ಗೆ ಜೊತೆಯಾದ ಸ್ಟೀವ್‌ ಸ್ಮಿತ್‌(52) ಹಾಗೂ ಜೋಶ್‌ ಇಂಗ್ಲಿಸ್‌(110) ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿ ತಂಡಕ್ಕೆ ಆಸರೆಯಾದರು. ಭಾರತದ ಬೌಲರ್‌ಗಳ ಮೇಲೆ ಹಿಡಿತ ಸಾಧಿಸಿದ ಈ ಜೋಡಿ 130 ರನ್‌ಗಳ ಅದ್ಭುತ ಜೊತೆಯಾಟವಾಡಿದರು. ಪ್ರಮುಖವಾಗಿ ಜೋಶ್‌ ಇಂಗ್ಲಿಸ್‌, ಕೇವಲ 50 ಬಾಲ್‌ಗಳಲ್ಲಿ 11 ಬೌಂಡರಿ, 8 ಸಿಕ್ಸರ್‌ ನೆರವಿನಿಂದ 110 ರನ್‌ಗಳಿಸಿ ಅಬ್ಬರದ ಶತಕ ಬಾರಿಸಿದರು. ಈ ಇಬ್ಬರು ಔಟಾದ ಬಳಿಕ ಬಂದ ಸ್ಟಾಯ್ನಿಸ್‌(7*) ಹಾಗೂ ಡೇವಿಡ್‌(19*) ತಂಡದ ಮೊತ್ತವನ್ನ 208ಕ್ಕೆ ಏರಿಸಿದರು. ಭಾರತದ ಪರ ಪ್ರಸಿದ್ಧ ಕೃಷ್ಣ ಹಾಗೂ ಬಿಷ್ಣೋಯಿ ತಲಾ 1 ವಿಕೆಟ್‌ ಪಡೆದರು.

Related posts

jaismine-lamboria-life-story-commonwealth-games-gold

cwg-2026- ಆಸ್ಪತ್ರೆಯಿಂದ ಕಾಮನ್‌ವೆಲ್ತ್ ಚಿನ್ನದವರೆಗೆ..! ಬಾಕ್ಸಿಂಗ್ ರಾಣಿಯ ಹೋರಾಟದ ಯಶೋಗಾಥೆ..!

August 2, 2026
neeraj-chopra-javelin-success-story-kannada Focus Keyword

cwg2026- ಬೆಳ್ಳಿ ಗೆದ್ರೂ ನೀ ಬಂಗಾರನೇ..! ಈಟಿ ಎಸೆದು ದಾಖಲೆ ಬರೆಯುವ ರಾಜ.. ಹೃದಯ ಗೆಲ್ಲುವ ಚಾಂಪಿಯನ್..!

August 1, 2026

Surya and Kishan

ಸೂರ್ಯ-ಕಿಶನ್‌ ಆರ್ಭಟ:
ಆಸೀಸ್‌ ನೀಡಿದ 209 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಭಾರತ ಇನ್ನಿಂಗ್ಸ್‌ ಆರಂಭದಲ್ಲೇ ಋತುರಾಜ್‌(0) ಹಾಗೂ ಜೈಸ್ವಾಲ್‌(21) ಅವರುಗಳ ವಿಕೆಟ್‌ ಕಳೆದುಕೊಂಡು ಆಘಾತ ಕಂಡಿತು. ಆದರೆ 3ನೇ ವಿಕೆಟ್‌ಗೆ ಜೊತೆಯಾದ ಇಶಾನ್‌ ಕಿಶನ್‌(58 ರನ್‌, 39 ಬಾಲ್‌, 2 ಬೌಂಡರಿ, 5 ಸಿಕ್ಸ್)‌ ಹಾಗೂ ಸೂರ್ಯಕುಮಾರ್‌(80 ರನ್‌, 42 ಬಾಲ್‌, 9 ಬೌಂಡರಿ, 4 ಸಿಕ್ಸ್‌) ಬಿರುಸಿನ ಬ್ಯಾಟಿಂಗ್‌ ಪ್ರದರ್ಶಿಸಿದರು. ಈ ಇಬ್ಬರು 112 ರನ್‌ಗಳ ಜೊತೆಯಾಟದ ಮೂಲಕ ತಂಡದ ಗೆಲುವಿನ ಹಾದಿಯನ್ನ ಸುಗಮಗೊಳಿಸಿದರು. ಆದರೆ ನಂತರ ಬಂದ ತಿಲಕ್‌ ವರ್ಮ(12), ಅಕ್ಸರ್‌(2), ರವಿ ಬಿಷ್ಣೋಯಿ(0) ಅರ್ಶದೀಪ್‌(0) ಬಹುಬೇಗನೆ ಪೆವಿಲಿಯನ್‌ ಸೇರಿದರು. ಆದರೆ ಕೊನೆಯ ಎಸೆತದವರೆಗೂ ಕಣದಲ್ಲಿ ಉಳಿದ ರಿಂಕು ಸಿಂಗ್‌(22*) ತಂಡವನ್ನ ಗೆಲುವಿನ ದಡಸೇರಿಸುವಲ್ಲಿ ಯಶಸ್ವಿಯಾದರು. ಆಸೀಸ್‌ ಪರ ಸಾಂಘ 2 ವಿಕೆಟ್‌ ಪಡೆದರೆ. ಬೆಹ್ರನ್‌ಡ್ರಾಫ, ಶಾರ್ಟ್‌, ಅಬೋಟ್‌ ತಲಾ 1 ವಿಕೆಟ್‌ ಪಡೆದರು. ಭರ್ಜರಿ ಬ್ಯಾಟಿಂಗ್‌ನಿಂದ ತಂಡದ ಗೆಲುವಿಗೆ ಕಾರಣವಾದ ನಾಯಕ ಸೂರ್ಯಕುಮಾರ್‌ ಯಾದವ್‌, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಟಿ20 ಸರಣಿಯ 2ನೇ ಟಿ20 ಪಂದ್ಯ ನ.26ರಂದು ತಿರುವನಂತಪುರಂನಲ್ಲಿ ನಡೆಯಲಿದೆ.

IND v AUS, Team India, Australia, Suryakumar Yadav, T20I Series

Tags: AustraliaIND v AUSSuryakumar YadavT20I seriesteam india
ShareTweetSendShare
Join us on:

Related Posts

jaismine-lamboria-life-story-commonwealth-games-gold

cwg-2026- ಆಸ್ಪತ್ರೆಯಿಂದ ಕಾಮನ್‌ವೆಲ್ತ್ ಚಿನ್ನದವರೆಗೆ..! ಬಾಕ್ಸಿಂಗ್ ರಾಣಿಯ ಹೋರಾಟದ ಯಶೋಗಾಥೆ..!

by admin
August 2, 2026
0

ಸುಮಾರು ಒಂದುವರೆ ತಿಂಗಳ ಹಿಂದೆ. ಆಕೆ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದಳು. ಗ್ಲೌಸ್ ಧರಿಸಿ ಅಭ್ಯಾಸ ನಡೆಸಬೇಕಿದ್ದ ಕೈಗಳಿಗೆ ಚಿಕಿತ್ಸೆಯ ಸೂಜಿಗಳು ಚುಚ್ಚಿಕೊಂಡಿದ್ದವು. ಹಲವು ದಿನಗಳ ಕಾಲ...

neeraj-chopra-javelin-success-story-kannada Focus Keyword

cwg2026- ಬೆಳ್ಳಿ ಗೆದ್ರೂ ನೀ ಬಂಗಾರನೇ..! ಈಟಿ ಎಸೆದು ದಾಖಲೆ ಬರೆಯುವ ರಾಜ.. ಹೃದಯ ಗೆಲ್ಲುವ ಚಾಂಪಿಯನ್..!

by admin
August 1, 2026
0

800 ಗ್ರಾಂ ತೂಕ.. ಎಂಟು ಅಡಿ 10 ಇಂಚಿನ ಜಾವೆಲಿನ್. ಫಿನ್ನಿಷ್ ಗ್ರಿಪ್‍ನ ಟೆಕ್ನಿಕ್. ಶಕ್ತಿಯ ಜೊತೆಗೆ ಯುಕ್ತಿಯ ಅಪೂರ್ವ ಸಂಗಮ. ಬಿಲ್ಲು ಬಾಣದಂತೆ ಬಾಗುವ ದೇಹ..!...

glasgow-commonwealth-games-2026-closing-ceremony-ahmedabad-2030-gujarat-culture

CWG-2026: ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್ ಸಮಾರೋಪದಲ್ಲಿ ಗುಜರಾತ್‍ನ ಸಾಂಸ್ಕøತಿಕ ವೈಭವ ಅನಾವರಣ..!

by admin
August 1, 2026
0

2026ರ ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್‍ನ ಸಮಾರೋಪ ಸಮಾರಂಭದಲ್ಲಿ ಭಾರತದ ಸಂಸ್ಕøತಿ ಅನಾವರಣಗೊಳ್ಳಲಿದೆ. 2030ರ ಶತಮಾನೋತ್ಸವ ಕಾಮನ್‍ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಭಾರತದ ಅಹಮದಾಬಾದ್ ನಗರ ವಹಿಸಲಿದೆ. ಸಮಾರೋಪ ಸಮಾರಂಭದಲ್ಲಿ...

tenginakayi-deepa-aradhane-puja-vidhana-kannada

Astro- ಮನೆಯಲ್ಲಿನ ಪ್ರತಿ ಹಣಕಾಸು,ಆರೋಗ್ಯ,ಕಲಹ ಸಮಸ್ಯೆ ಕಳೆದು ದೈವಬಲ ಹೆಚ್ಚಿಸಲು ತೆಂಗಿನಕಾಯಿ ದೀಪಾರಾಧನೆ ಮಾಡಿ.. ಬದಲಾವಣೆ ನೋಡಿ..!

by admin
August 1, 2026
0

ತೆಂಗಿನಕಾಯಿ ದೀಪಾರಾಧನೆ ಹೇಗೆ ಮಾಡಬೇಕು..? ಧಾರ್ಮಿಕ ಮಹತ್ವ ಮತ್ತು ಪೂಜೆ ವಿಧಾನ ನಾವು ನಿತ್ಯವು ದೇವರ ಮುಂದೆ ದೀಪವನ್ನು ಬೆಳಗುತ್ತೆವೆ.ಅದೇ ತರಹ ವಿಶೇಷವಾಗಿ ನಮ್ಮ ಕೋರಿಕೆಗಳು, ಕಷ್ಟಗಳು...

asmita-dey-judo-gold-commonwealth-games-2026-inspiring-story

cwg-2026-ಅಪ್ಪ – ಅಮ್ಮನ ತ್ಯಾಗಕ್ಕೆ ಮಗಳ ಚಿನ್ನದ ಉಡುಗೊರೆ..! ಇದು ತ್ರಿಪುರಾದ ಅಸ್ಮಿತಾ ಡೇಯ ಸುವರ್ಣಗಾಥೆ..!

by admin
August 1, 2026
0

ಕೆಲವು ವರ್ಷಗಳ ಹಿಂದೆ..! ಅದು ತ್ರಿಪುರಾದ ಬೆಲೋನಿಯಾ ಪ್ರದೇಶದ ಒಂದು ಸಣ್ಣ ಗ್ರಾಮ. ಅಲ್ಲೊಂದು ಮಣ್ಣಿನ ಗೋಡೆಯ ಮನೆಯಲ್ಲಿ ಬಡ ಕುಟುಂಬದ ವಾಸ. ದಿನದ ದುಡಿಮೆಯಲ್ಲೇ ಜೀವನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram