ADVERTISEMENT
Monday, August 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

IND v AUS: ಫೈನಲ್‌ನಲ್ಲಿ ಭಾರತಕ್ಕೆ ಪ್ರಶಸ್ತಿ ಗೆಲ್ಲುವ ಜೊತೆಗೆ ಹಲವು ದಾಖಲೆ ಮುರಿಯುವ ಅವಕಾಶ

C Dinesh by C Dinesh
November 19, 2023
in Sports, ಕ್ರಿಕೆಟ್, ಕ್ರಿಕೆಟ್ ವಿಶ್ವಕಪ್ 2023
Team India

Team India

Share on FacebookShare on TwitterShare on WhatsappShare on Telegram

ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ ಪಂದ್ಯಕ್ಕಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿದ್ದು, ಉಭಯ ತಂಡಗಳ ನಡುವಿನ ಹೈವೋಲ್ಟೇಜ್‌ ಪಂದ್ಯವನ್ನ ಕಣ್ತುಂಬಿಕೊಳ್ಳಲು ಕೋಟ್ಯಾಂತರ ಕ್ರಿಕೆಟ್‌ ಅಭಿಮಾನಿಗಳು ಕಾಯುತ್ತಿದ್ದಾರೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನ ಮಣಿಸಿ ಮೂರನೇ ಬಾರಿಗೆ ವಿಶ್ವಕಪ್‌ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿರುವ ಟೀಂ ಇಂಡಿಯಾ, ಫೈನಲ್‌ ಪಂದ್ಯದಲ್ಲಿ ಹಲವು ದಾಖಲೆಗಳನ್ನ ಮುರಿಯುವ ಜೊತೆಗೆ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುವ ಅವಕಾಶ ಹೊಂದಿದೆ.

– ಏಕದಿನ ವಿಶ್ವಕಪ್‌ನಲ್ಲಿ ಈಗಾಗಲೇ 1983 ಮತ್ತು 2011ರಲ್ಲಿ ಪ್ರಶಸ್ತಿ ಗೆದ್ದುಬೀಗಿರುವ ಭಾರತ, ಮತ್ತೊಂದು ಟ್ರೋಫಿ ಗೆದ್ದರೆ ಶ್ರೀಲಂಕಾವನ್ನು ಸೋಲಿಸಿದ ನಂತರ ಕ್ರಿಕೆಟ್‌ ಇತಿಹಾಸದಲ್ಲಿ ತವರಿನಲ್ಲಿ ಎರಡನೇ ಬಾರಿಗೆ ವಿಶ್ವಕಪ್ ಪ್ರಶಸ್ತಿ ಗೆದ್ದ ತಂಡವಾಗಲಿದೆ.

Virat Kohli

– ಪ್ರಸಕ್ತ ವಿಶ್ವಕಪ್‌ನಲ್ಲಿ ಅದ್ಭುತ ಬ್ಯಾಟಿಂಗ್‌ ಫಾರ್ಮ್‌ ಹೊಂದಿರುವ ವಿರಾಟ್‌ ಕೊಹ್ಲಿ(711 ರನ್‌) ಇಂದಿನ ಪಂದ್ಯದಲ್ಲಿ ಮತ್ತೊಂದು ಭರ್ಜರಿ ಇನ್ನಿಂಗ್ಸ್‌ ಪ್ರದರ್ಶಿಸಿದರೆ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ ಮುರಿಯುವ ಅವಕಾಶ ಹೊಂದಿದ್ದಾರೆ.

Related posts

hardik-pandya-tirupati-balaji-darshan-news

Teamindia – ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದ ಹಾರ್ದಿಕ್ ಪಾಂಡ್ಯ..! ಬಾಲಾಜಿಗೆ ಮುಡಿಕೊಟ್ಟಿರುವುದು ಯಾಕೆ ಪಾಂಡ್ಯಾ..?

August 2, 2026
jaismine-lamboria-life-story-commonwealth-games-gold

cwg-2026- ಆಸ್ಪತ್ರೆಯಿಂದ ಕಾಮನ್‌ವೆಲ್ತ್ ಚಿನ್ನದವರೆಗೆ..! ಬಾಕ್ಸಿಂಗ್ ರಾಣಿಯ ಹೋರಾಟದ ಯಶೋಗಾಥೆ..!

August 2, 2026

– ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರಸಕ್ತ ಏಕದಿನ ವಿಶ್ವಕಪ್‌ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಟೂರ್ನಿಯಲ್ಲಿ ಈಗಾಗಲೇ 550 ರನ್‌ಗಳಿಸಿದ್ದು, ಇಂದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದೇ ಆದಲ್ಲಿ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ತಮ್ಮದೇ ವೈಯಕ್ತಿಕ ದಾಖಲೆಯನ್ನು ಮುರಿಯಬಹುದು.

Mohammed Shami

– ಪ್ರಸಕ್ತ ಟೂರ್ನಿಯಲ್ಲಿ ಆಕ್ರಮಣಕಾರಿ ಬೌಲಿಂಗ್‌ ದಾಳಿ ನಡೆಸುವ ಮೂಲಕ ಟೀಂ ಇಂಡಿಯಾ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುವ ವೇಗದ ಬೌಲರ್‌ ಮೊಹಮ್ಮದ್ ಶಮಿ, ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು 54 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇಂದಿನ ಫೈನಲ್‌ನಲ್ಲಿ ಆಸೀಸ್‌ ವಿರುದ್ಧ ಮೂರು ವಿಕೆಟ್‌ ಪಡೆದೆರ ಪಾಕಿಸ್ತಾನದ ಶ್ರೇಷ್ಠ ಬೌಲರ್‌ ವಾಸಿಂ ಅಕ್ರಮ್ (55 ವಿಕೆಟ್‌), ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ(56 ವಿಕೆಟ್‌) ಅವರುಗಳನ್ನ ಹಿಂದಿಕ್ಕಿ ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್‌ಗಳನ್ನ ಪಡೆದ ನಾಲ್ಕನೇ ಬೌಲರ್‌ ಎನಿಸಲಿದ್ದಾರೆ.
Shreyas Iyer

– ಕಳೆದ ಎರಡು ಪಂದ್ಯಗಳಲ್ಲಿ ಶತಕ ಸಿಡಿಸುವ ಮೂಲಕ ಮಿಂಚಿರುವ ಶ್ರೇಯಸ್ ಅಯ್ಯರ್ ಫೈನಲ್‌ನಲ್ಲಿ 24 ರನ್‌ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಂತರದಲ್ಲಿ ಒಂದೇ ವಿಶ್ವಕಪ್‌ ಆವೃತ್ತಿಯಲ್ಲಿ ಹೆಚ್ಚು ರನ್‌ಗಳಿಸಿದ(550ಕ್ಕೂ ಹೆಚ್ಚು ರನ್‌ಗಳು) ಭಾರತದ ನಾಲ್ಕನೇ ಬ್ಯಾಟರ್ ಆಗಲಿದ್ದಾರೆ.

IND v AUS, Team India, Australia, Virat Kohli, World Cup Final

Tags: AustraliaIND v AUSteam indiavirat kohliWorld Cup final
ShareTweetSendShare
Join us on:

Related Posts

hardik-pandya-tirupati-balaji-darshan-news

Teamindia – ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದ ಹಾರ್ದಿಕ್ ಪಾಂಡ್ಯ..! ಬಾಲಾಜಿಗೆ ಮುಡಿಕೊಟ್ಟಿರುವುದು ಯಾಕೆ ಪಾಂಡ್ಯಾ..?

by admin
August 2, 2026
0

ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ತಮ್ಮ ಗೆಳತಿ ಮಹೀಕಾ ಶರ್ಮಾ ಜೊತೆ ಹಾರ್ದಿಕ್ ಪಾಂಡ್ಯ ತಿರುಮಲ ವೆಂಕಟೇಶ್ವರನಿಗೆ...

jaismine-lamboria-life-story-commonwealth-games-gold

cwg-2026- ಆಸ್ಪತ್ರೆಯಿಂದ ಕಾಮನ್‌ವೆಲ್ತ್ ಚಿನ್ನದವರೆಗೆ..! ಬಾಕ್ಸಿಂಗ್ ರಾಣಿಯ ಹೋರಾಟದ ಯಶೋಗಾಥೆ..!

by admin
August 2, 2026
0

ಸುಮಾರು ಒಂದುವರೆ ತಿಂಗಳ ಹಿಂದೆ. ಆಕೆ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದಳು. ಗ್ಲೌಸ್ ಧರಿಸಿ ಅಭ್ಯಾಸ ನಡೆಸಬೇಕಿದ್ದ ಕೈಗಳಿಗೆ ಚಿಕಿತ್ಸೆಯ ಸೂಜಿಗಳು ಚುಚ್ಚಿಕೊಂಡಿದ್ದವು. ಹಲವು ದಿನಗಳ ಕಾಲ...

neeraj-chopra-javelin-success-story-kannada Focus Keyword

cwg2026- ಬೆಳ್ಳಿ ಗೆದ್ರೂ ನೀ ಬಂಗಾರನೇ..! ಈಟಿ ಎಸೆದು ದಾಖಲೆ ಬರೆಯುವ ರಾಜ.. ಹೃದಯ ಗೆಲ್ಲುವ ಚಾಂಪಿಯನ್..!

by admin
August 1, 2026
0

800 ಗ್ರಾಂ ತೂಕ.. ಎಂಟು ಅಡಿ 10 ಇಂಚಿನ ಜಾವೆಲಿನ್. ಫಿನ್ನಿಷ್ ಗ್ರಿಪ್‍ನ ಟೆಕ್ನಿಕ್. ಶಕ್ತಿಯ ಜೊತೆಗೆ ಯುಕ್ತಿಯ ಅಪೂರ್ವ ಸಂಗಮ. ಬಿಲ್ಲು ಬಾಣದಂತೆ ಬಾಗುವ ದೇಹ..!...

glasgow-commonwealth-games-2026-closing-ceremony-ahmedabad-2030-gujarat-culture

CWG-2026: ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್ ಸಮಾರೋಪದಲ್ಲಿ ಗುಜರಾತ್‍ನ ಸಾಂಸ್ಕøತಿಕ ವೈಭವ ಅನಾವರಣ..!

by admin
August 1, 2026
0

2026ರ ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್‍ನ ಸಮಾರೋಪ ಸಮಾರಂಭದಲ್ಲಿ ಭಾರತದ ಸಂಸ್ಕøತಿ ಅನಾವರಣಗೊಳ್ಳಲಿದೆ. 2030ರ ಶತಮಾನೋತ್ಸವ ಕಾಮನ್‍ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಭಾರತದ ಅಹಮದಾಬಾದ್ ನಗರ ವಹಿಸಲಿದೆ. ಸಮಾರೋಪ ಸಮಾರಂಭದಲ್ಲಿ...

tenginakayi-deepa-aradhane-puja-vidhana-kannada

Astro- ಮನೆಯಲ್ಲಿನ ಪ್ರತಿ ಹಣಕಾಸು,ಆರೋಗ್ಯ,ಕಲಹ ಸಮಸ್ಯೆ ಕಳೆದು ದೈವಬಲ ಹೆಚ್ಚಿಸಲು ತೆಂಗಿನಕಾಯಿ ದೀಪಾರಾಧನೆ ಮಾಡಿ.. ಬದಲಾವಣೆ ನೋಡಿ..!

by admin
August 1, 2026
0

ತೆಂಗಿನಕಾಯಿ ದೀಪಾರಾಧನೆ ಹೇಗೆ ಮಾಡಬೇಕು..? ಧಾರ್ಮಿಕ ಮಹತ್ವ ಮತ್ತು ಪೂಜೆ ವಿಧಾನ ನಾವು ನಿತ್ಯವು ದೇವರ ಮುಂದೆ ದೀಪವನ್ನು ಬೆಳಗುತ್ತೆವೆ.ಅದೇ ತರಹ ವಿಶೇಷವಾಗಿ ನಮ್ಮ ಕೋರಿಕೆಗಳು, ಕಷ್ಟಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram