ಟೀಂ ಇಂಡಿಯಾದ ಬ್ಯಾಟಿಂಗ್ ಅಸ್ತ್ರವಾಗಿರುವ ಯುವ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್, ಶತಕದ ಸಂಭ್ರಮವಿಲ್ಲದೆ ತಮ್ಮ ಚೊಚ್ಚಲ ಏಕದಿನ ವಿಶ್ವಕಪ್ ಅಭಿಯಾನ ಮುಗಿಸಿದ್ದಾರೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶುಭ್ಮನ್ ಗಿಲ್(4) ಅವರಿಂದ ದೊಡ್ಡ ಇನ್ನಿಂಗ್ಸ್ ಬರುವ ನಿರೀಕ್ಷೆ ಹೊಂದಲಾಗಿತ್ತು. ಆದರೆ ನಾಯಕ ರೋಹಿತ್ ಶರ್ಮ(47) ಅವರ ಸ್ಪೋಟಕ ಬ್ಯಾಟಿಂಗ್ ನಡುವೆಯೂ ರನ್‌ಗಳಿಸುವ ಆತುರಕ್ಕೆ ಸಿಲುಕಿದ ಗಿಲ್, 4.2ನೇ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಅವರ ಬೌಲಿಂಗ್‌ನಲ್ಲಿ ಆಡಮ್ ಜ್ಹಂಪ ಅವರಿಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸುವ ಮೂಲಕ ತಮ್ಮ ಮೇಲಿನ ನಿರೀಕ್ಷೆ ಹುಸಿಗೊಳಿಸಿ ಪೆವಿಲಿಯನ್‌ಗೆ ಹಿಂದಿರುಗಿದರು.
ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಆರಂಭಕ್ಕೂ ಮುನ್ನವೇ ಶುಭ್ಮನ್ ಗಿಲ್ ಅವರ ಬ್ಯಾಟಿಂಗ್ ಪ್ರದರ್ಶನದ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಲಾಗಿತ್ತು. ಆದರೆ ಟೂರ್ನಿಯ ಆರಂಭದ ಹೊಸ್ತಿಲಲ್ಲಿ ಡೆಂಘೀ ಜ್ವರಕ್ಕೆ ತುತ್ತಾದ ಪರಿಣಾಮ ಆರಂಭಿಕ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ಆದರೆ ನಂತರದಲ್ಲಿ ಪ್ಲೇಯಿಂಗ್ ಇಲವೆನ್‌ನಲ್ಲಿ ಆಡುವ ಅವಕಾಶ ಪಡೆದ ಗಿಲ್, ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದರು.
ಟೂರ್ನಿಯಲ್ಲಿ ಫೈನಲ್, ಸೆಮಿಫೈನಲ್ ಸೇರಿದಂತೆ ಲೀಗ್ ಹಂತದಲ್ಲಿ ಆಡಿರುವ ಒಟ್ಟು 9 ಪಂದ್ಯಗಳಿಂದ 354 ರನ್‌ಗಳಿಸುವ ಮೂಲಕ ತಮ್ಮ ಚೊಚ್ಚಲ ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ಜರ್ನಿ ಮುಗಿಸಿರುವ ಶುಭ್ಮನ್ ಗಿಲ್, 43.75ರ ಸರಾಸರಿಯಲ್ಲಿ 4 ಅರ್ಧಶತಕಗಳನ್ನ ಬಾರಿಸಿದ್ದಾರೆ. ಆದರೆ ಈ ಅರ್ಧಶತಕವನ್ನ ಶತಕವಾಗಿ ಪರಿವರ್ತಿಸಲು ಶುಭ್ಮನ್ ಗಿಲ್ ಅವರಿಗೆ ಸಾಧ್ಯವಾಗದೆ ಇರುವುದು ಭಾರೀ ನಿರಾಸೆ ಮೂಡಿಸಿದೆ.
ಶುಭ್ಮನ್ ಗಿಲ್ ಪ್ರದರ್ಶನ-2023ರ ವಿಶ್ವಕಪ್‌ನಲ್ಲಿ
ಪಂದ್ಯಗಳು – 9
ರನ್‌ಗಳು – 354
ಸರಾಸರಿ – 43.75
50/100 – 4/0
ಗರಿಷ್ಠ ಸ್ಕೋರ್ – 92 v ಶ್ರೀಲಂಕಾ
IND v AUS, Team India, Australia, Shubman Gill, World Cup Final