ADVERTISEMENT
Sunday, July 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

IND v NZ: ಕಿವೀಸ್‌ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆ ಹೊಂದಿರುವ ಕೊಹ್ಲಿ, ಗಿಲ್‌

C Dinesh by C Dinesh
October 21, 2023
in Sports
Gill and Virat

Gill and Virat

Share on FacebookShare on TwitterShare on WhatsappShare on Telegram

ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಜಯದ ಅಲೆಯಲ್ಲಿ ತೇಲುತ್ತಿರುವ ಟೀಂ ಇಂಡಿಯಾ, ಅ.22ರಂದು ನಡೆಯುವ ಮತ್ತೊಂದು ಹೈವೋಲ್ಟೇಜ್‌ ಕದನದಲ್ಲಿ ನ್ಯೂಜಿ಼ಲೆಂಡ್‌ನ ತಂಡದ ಚಾಲೆಂಜ್‌ ಎದುರಿಸಲು ಸಜ್ಜಾಗಿದೆ.

ಉಭಯ ತಂಡಗಳ ನಡುವಿನ ಜಿದ್ದಾಜಿದ್ದಿನ ಕಾದಾಟಕ್ಕೆ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಸ್ಟೇಡಿಯಂನಲ್ಲಿ ವೇದಿಕೆ ಸಜ್ಜಾಗಿದೆ. ಈ ನಡುವೆ ಕಿವೀಸ್‌ ವಿರುದ್ಧ ಹಣಾಹಣಿಗೆ ಟೀಂ ಇಂಡಿಯಾದ ಸ್ಟಾರ್‌ ಬ್ಯಾಟರ್‌ಗಳಾದ ವಿರಾಟ್‌ ಕೊಹ್ಲಿ ಹಾಗೂ ಶುಭ್ಮನ್‌ ಗಿಲ್‌ ಭರ್ಜರಿ ತಯಾರಿ ಮಾಡಿಕೊಂಡಿದ್ದು, ಈ ಇಬ್ಬರು ಬ್ಯಾಟರ್‌ಗಳು ನ್ಯೂಜಿ಼ಲೆಂಡ್‌ನ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದು, ನಾಳೆ ನಡೆಯುವ ಪಂದ್ಯದಲ್ಲಿ ಇದೇ ಪ್ರದರ್ಶನ ನೀಡುವ ತವಕದಲ್ಲಿದ್ದಾರೆ.

Virat Kohli

Related posts

jandu-kumar-commonwealth-games-para-powerlifting-success

ಎದೆತುಂಬಿ ಹೇಳಿರುವೆ…ಪ್ರೀತಿಯಿಂದ ಬರೆದಿರುವೆ… ಮನವಿಟ್ಟು ಓದಿ… ಇದು ನನ್ನ ಅಂತರಾಳದ ಮಾತು..!

July 26, 2026
devshayani-ekadashi-hari-shayani-significance

Astro- ಇಂದು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ ಎಂದು ಗೋತ್ತೇ..?

July 25, 2026

ಕಿಂಗ್‌ ಕೊಹ್ಲಿ ಪ್ರಾಬಲ್ಯ:
ಟೀಂ ಇಂಡಿಯಾದ ʼರನ್‌ ಮಷಿನ್‌ʼ ಎಂದೇ ಖ್ಯಾತಿ ಪಡೆದಿರುವ ವಿರಾಟ್‌ ಕೊಹ್ಲಿ, ನ್ಯೂಜಿ಼ಲೆಂಡ್‌ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಕಿಂಗ್‌ ಕೊಹ್ಲಿಯ ನೆಚ್ಚಿನ ಎದುರಾಳಿ ತಂಡವಾಗಿರುವ ಕಿವೀಸ್‌ ವಿರುದ್ಧ ಈವರೆಗೂ ಏಕದಿನ ಕ್ರಿಕೆಟ್‌ನಲ್ಲಿ 1433 ರನ್‌ಗಳಿಸಿದ್ದು, 55.11ರ ಸರಾಸರಿ ಹಾಗೂ 95.40ರ ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ. ಚೇಸ್‌ ಮಾಸ್ಟರ್‌ನ ಈ ಇನ್ನಿಂಗ್ಸ್‌ನಲ್ಲಿ ಐದು ಭರ್ಜರಿ ಶತಕಗಳು ಹಾಗೂ ಎಂಟು ಅರ್ಧಶತಕ ಒಳಗೊಂಡಿದೆ. ಕಿವೀಸ್‌ ವಿರುದ್ಧ ಅಜೇಯ 154 ರನ್‌ಗಳಿಸಿರುವುದು ಕೊಹ್ಲಿ ಅವರ ಗರಿಷ್ಠ ಸ್ಕೋರ್‌ ಆಗಿದೆ. ಈ ಎಲ್ಲಾ ಅಂಕಿ-ಅಂಶಗಳ ಮೂಲಕ ನ್ಯೂಜಿ಼ಲೆಂಡ್‌ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿರುವ ಕೊಹ್ಲಿ, ಮತ್ತೊಂದು ಅವಿಸ್ಮರಣೀಯ ಇನ್ನಿಂಗ್ಸ್‌ ಆಡಲು ಸಜ್ಜಾಗಿದ್ದಾರೆ.

Shubman-Gill

ಶುಭ್ಮನ್‌ ಅದ್ಭುತ ದಾಖಲೆ:
ಟೀಂ ಇಂಡಿಯಾದ ʼಯುವರಾಜʼ ಎನಿಸಿಕೊಂಡಿರುವ ಯುವ ಆರಂಭಿಕ ಬ್ಯಾಟರ್‌ ಶುಭ್ಮನ್‌ ಗಿಲ್‌, ನ್ಯೂಜಿ಼ಲೆಂಡ್‌ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಕಿವೀಸ್‌ ವಿರುದ್ಧ ಈವರೆಗೂ ಆಡಿರುವ 8 ಪಂದ್ಯಗಳಲ್ಲಿ 80.67ರ ಅತ್ಯುತ್ತಮ ಸರಾಸರಿಯೊಂದಿಗೆ 484 ರನ್‌ ಕಲೆಹಾಕಿದ್ದಾರೆ. ಇದೇ ವರ್ಷದಲ್ಲಿ ಬ್ಲ್ಯಾಕ್ಸ್‌ ಕ್ಯಾಪ್ಸ್‌ ವಿರುದ್ಧ ಭರ್ಜರಿ 208 ರನ್‌ಗಳ ದ್ವಿಶತಕ ಬಾರಿಸಿ ಅಬ್ಬರಿಸಿದ್ದರು. ಇದಲ್ಲದೇ ನ್ಯೂಜಿ಼ಲೆಂಡ್‌ ವಿರುದ್ಧ 2 ಶತಕ ಹಾಗೂ 1 ಅರ್ಧಶತಕ ಬಾರಿಸಿದ್ದಾರೆ. ಇದೀಗ ಪ್ರಸಕ್ತ ವಿಶ್ವಕಪ್‌ನಲ್ಲಿ ಆರಂಭಿಕ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು, ಬಾಂಗ್ಲಾದೇಶ ವಿರುದ್ಧ ನಡೆದ ಕಳೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದರು. ಹೀಗಾಗಿ ಉತ್ತಮ ಫಾರ್ಮ್‌ ಕಂಡುಕೊಂಡಿರುವ ಗಿಲ್‌, ಕಿವೀಸ್‌ ವಿರುದ್ಧ ತಮ್ಮ ಹಿಡಿತ ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ.

IND v NZ, Team India, New Zealand, Virat Kohli, Shubman Gill

Tags: IND v NZNew ZealandShubman Gillteam indiavirat kohli
ShareTweetSendShare
Join us on:

Related Posts

jandu-kumar-commonwealth-games-para-powerlifting-success

ಎದೆತುಂಬಿ ಹೇಳಿರುವೆ…ಪ್ರೀತಿಯಿಂದ ಬರೆದಿರುವೆ… ಮನವಿಟ್ಟು ಓದಿ… ಇದು ನನ್ನ ಅಂತರಾಳದ ಮಾತು..!

by admin
July 26, 2026
0

ಎದೆತುಂಬಿ ಹೇಳಿರುವೆ...ಪ್ರೀತಿಯಿಂದ ಬರೆದಿರುವೆ... ಮನವಿಟ್ಟು ಓದಿ... ಇದು ನನ್ನ ಅಂತರಾಳದ ಮಾತು..! ಬಹುಶಃ ಅಂದು ನನಗೆ ನಾಲ್ಕೈದು ವರ್ಷ. ಎಲ್ಲ ಮಕ್ಕಳಂತೆ ಓಡಾಡಿಕೊಂಡು ನಾನು ಆಟವಾಡುತ್ತಿದ್ದೆ. ಆದ್ರೆ...

devshayani-ekadashi-hari-shayani-significance

Astro- ಇಂದು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ ಎಂದು ಗೋತ್ತೇ..?

by admin
July 25, 2026
0

ಇಂದು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ ಎಂದು ಗೋತ್ತೇ..? ಸಮಚರಣ ಸರೋಜಂ ಸಾಂದ್ರನೀಲಾಂಮುದಾಭಂ ಜಘನ ನಿಹಿತಪಾಣಿಂ ಮಂಡನಂ ಮಂಡನಾನಾಂ || ತರುಣ ತುಳಸೀಮಾಲಾಕಂಧರಂ ಕಂಜನೇತ್ರಂ...

sindhushree-ganesh-pole-vault-national-record-karnataka-sports

Sindhushree- ಬಡತನದಲ್ಲಿ ಅರಳಿದ ಪ್ರತಿಭೆ….! ಬಾಣದಂತೆ ಚಿಮ್ಮುವ ಈ ತರುಣಿ ಯಾರು..?

by admin
July 25, 2026
0

ಈಕೆಯ ಸಾಧನೆಗೆ ಸರ್ವಸ್ವವನ್ನು ತ್ಯಾಗ ಮಾಡಿದ್ದು ಅಪ್ಪ ಎಂಬ ಸಾಹುಕಾರ. ಪ್ರತಿದಿನ ಮಗಳ ತರಬೇತಿಗೆ ಒಂಚೂರು ತೊಂದರೆಯಾಗದಂತೆ ನೋಡಿಕೊಂಡಿದ್ದ ಕಾವಲುಗಾರ. ಯಾರು ಏನೇ ಅಂದ್ರೂ, ಮಗಳ ಪ್ರತಿಭೆ,...

The King of Branding: How David Beckham Built an Empire Beyond Football!

David Beckham – ಮೈದಾನದ ಸ್ಟೈಲೀಶ್ ಪ್ಲೇಯರ್. ಜಾಗತಿಕ ಮಾರುಕಟ್ಟೆಯ ಟ್ರೆಂಡ್ ಸೆಟ್ಟರ್. ಬ್ರ್ಯಾಂಡಿಂಗ್ ಲೋಕದ ಕಿಂಗ್‍ಮೇಕರ್..!

by admin
July 23, 2026
0

 ಮೈದಾನದ ಸ್ಟೈಲೀಶ್ ಪ್ಲೇಯರ್. ಜಾಗತಿಕ ಮಾರುಕಟ್ಟೆಯ ಟ್ರೆಂಡ್ ಸೆಟ್ಟರ್. ಬ್ರ್ಯಾಂಡಿಂಗ್ ಲೋಕದ ಕಿಂಗ್‍ಮೇಕರ್..!  ಆತ ಫುಟ್‍ಬಾಲ್ ಮೈದಾನದಲ್ಲಿ ಕಾಮನಬಿಲ್ಲಿನಂತೆ ಚಿತ್ತಾರ ಬಿಡಿಸುತ್ತಿದ್ದ ಕಲೆಗಾರ. ಕಾಲಿನ ಸ್ಪರ್ಶದಿಂದಲೇ ಚೆಂಡನ್ನು...

ranjith bajaj menerva fc

Football – ಇಂಡಿಯಾ ಫಿಫಾ ವಿಶ್ವಕಪ್‍ನಲ್ಲಿ ಯಾಕೆ ಆಡುತ್ತಿಲ್ಲ.. ಕ್ರಿಕೆಟ್ ಧರ್ಮವಾಗಿರುವ ಭಾರತದಲ್ಲಿ ಫುಟ್‍ಬಾಲ್ ಕ್ರೀಡೆ ಧರ್ಮವಾಗಿ ಬೆಳೆಯಲು ಸಾಧ್ಯನಾ..?

by admin
July 22, 2026
0

ಇಂಡಿಯಾ ಫಿಫಾ ವಿಶ್ವಕಪ್‍ನಲ್ಲಿ ಯಾಕೆ ಆಡುತ್ತಿಲ್ಲ...? ಹೀಗೆ ಕೇಳುವುದು ತುಂಬಾ ಸುಲಭ. ಆದ್ರೆ ನಮ್ಮ ದೇಶದ ಫುಟ್‍ಬಾಲ್ ವ್ಯವಸ್ಥೆಯನ್ನು ಸರಿ ಮಾಡೋದು ಯಾರು..? ಭಾರತದಲ್ಲಿ ಕ್ರಿಕೆಟ್ ಆಟವೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram