ಟೀಂ ಇಂಡಿಯಾದ ಸ್ಟಾರ್ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್, ಐಸಿಸಿ ಏಕದಿನ ವಿಶ್ವಕಪ್ನ ನ್ಯೂಜಿ಼ಲೆಂಡ್ ವಿರುದ್ಧದ ಪಂದ್ಯಕ್ಕೆ ಭರ್ಜರಿ ತಯಾರಿ ಮಾಡಿಕೊಂಡು ಸಜ್ಜಾಗಿದ್ದಾರೆ.
ತಮ್ಮ ಚೊಚ್ಚಲ ಏಕದಿನ ವಿಶ್ವಕಪ್ ಆಡುತ್ತಿರುವ ಟೀಂ ಇಂಡಿಯಾದ ʼಯುವರಾಜʼ ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಕೈತಪ್ಪಿದರು, ನಂತರ ನಡೆದ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ಧದ ಪಂದ್ಯಗಳಲ್ಲಿ ಅದ್ಭುತ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿದ್ದಾರೆ. ಅಲ್ಲದೇ ಪ್ರಸಕ್ತ ವರ್ಷದಲ್ಲಿ ಸರ್ವಶ್ರೇಷ್ಠ ಫಾರ್ಮ್ ಹೊಂದಿರುವ ಶುಭ್ಮನ್ ಗಿಲ್, ಇದೀಗ ತಮ್ಮ ವೃತ್ತಿ ಬದುಕಿನ ಮತ್ತೊಂದು ಮಹತ್ವದ ಮೈಲುಗಲ್ಲಿನತ್ತ ದಾಪುಗಾಲಿಟ್ಟಿದ್ದಾರೆ.
ಟೂರ್ನಿಯ ಆರಂಭದಲ್ಲೇ ಡೆಂಘೀ ಜ್ವರಕ್ಕೆ ತುತ್ತಾಗಿದ್ದ ಶುಭ್ಮನ್ ಗಿಲ್, ನಂತರದಲ್ಲಿ ಸಂಪೂರ್ಣ ಚೇತರಿಕೆ ಕಂಡಿದ್ದಾರೆ. ಪುಣೆಯಲ್ಲಿ ನಡೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ತಮ್ಮ ನೈಜ ಬ್ಯಾಟಿಂಗ್ ಪ್ರದರ್ಶನ ನೀಡಿದ ಯುವ ಬ್ಯಾಟರ್, ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದರು. ಇದೇ ಆತ್ಮವಿಶ್ವಾಸದೊಂದಿಗೆ ಇದೀಗ ಧರ್ಮಶಾಲಾಕ್ಕೆ ಕಾಲಿಟ್ಟಿರುವ ಗಿಲ್, ಕಿವೀಸ್ ವಿರುದ್ಧವೂ ಮಿಂಚುವ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೇ ಈ ಪಂದ್ಯದ ಮೂಲಕ ಸೌತ್ ಆಫ್ರಿಕಾದ ಮಾಜಿ ಆಟಗಾರ ಹಶೀಮ್ ಆಮ್ಲಾ ಅವರ ಹೆಸರಿನಲ್ಲಿರುವ ಮಹತ್ವದ ಮೈಲುಗಲ್ಲನ್ನ ಹಿಂದಿಕ್ಕುವ ನಿರೀಕ್ಷೆ ಹೊಂದಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಅದ್ಭುತ ಫಾರ್ಮ್ ಹೊಂದಿರುವ ಶುಭ್ಮನ್ ಗಿಲ್, ವೇಗವಾಗಿ 2000 ರನ್ಗಳನ್ನ ಪೂರೈಸುವ ಸನಿಹದಲ್ಲಿದ್ದು, ಇದಕ್ಕಾಗಿ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಕೇವಲ 14 ರನ್ಗಳ ಅಗತ್ಯವಿದೆ. ಸೌತ್ ಆಫ್ರಿಕಾದ ಹಶೀಮ್ ಆಮ್ಲಾ, 40 ಇನ್ನಿಂಗ್ಸ್ಗಳಲ್ಲಿ ಈ ದಾಖಲೆ ಬರೆದು ಮಿಂಚಿದ್ದರೆ. ಶುಭ್ಮನ್ ಗಿಲ್ ಅವರಿಗೆ 38 ಇನ್ನಿಂಗ್ಸ್ಗಳಲ್ಲೇ 2000 ರನ್ಗಳ ಗಡಿದಾಟುವ ಅವಕಾಶ ಲಭಿಸಿದೆ. ಈ ಸಾಲಿನಲ್ಲಿ ದಿಗ್ಗಜ ಕ್ರಿಕೆಟಗರಾದ ವಿರಾಟ್ ಕೊಹ್ಲಿ, ಬಾಬರ್ ಆಜ಼ಂ ಅವರುಗಳನ್ನ ಹಿಂದಿಕ್ಕಿದ್ದಾರೆ.
IND v NZ, Team India, New Zealand, Shubman Gill, World Cup