ind-vs-aus-t20-series | ಇಂಡೋ – ಆಸೀಸ್ ಟಿ 20 ಸರಣಿ : ಪೂರ್ತಿ ಶೆಡ್ಯೂಲ್ ಇಲ್ಲಿದೆ
ಟಿ 20 ವಿಶ್ವಕಪ್ ಗೂ ಮುನ್ನಾ ಟೀಂ ಇಂಡಿಯಾ ಸ್ವದೇಶದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ 20 ಸರಣಿಯನ್ನು ಆಡಲಿದೆ. ಈ ಮೂರು ಮ್ಯಾಚ್ ಗಳ ಸಿರೀಸ್ ಗಾಗಿ ಆಸೀಸ್ ಆಟಗಾರರು ಗುರುವಾರ ಭಾರತಕ್ಕೆ ಬಂದಿದ್ದಾರೆ. ಐಸಿಸಿ ವಿಶ್ವಕಪ್ ಗೂ ಮುನ್ನಾ ಈ ಸರಣಿ ನಡೆಯುತ್ತಿರುವುದರಿಂದ ಉಭಯ ತಂಡಗಳಿಗೆ ಪ್ರತಿಷ್ಠೆಯಾಗಿದೆ.
ಡೇವಿಡ್ ವಾರ್ನರ್ ಅವರನ್ನು ಹೊರತುಪಡಿಸಿ ವಿಶ್ವಕಪ್ ಗೆ ಆಯ್ಕೆಯಾದ ಆಸೀಸ್ ಆಟಗಾರರು ಭಾರತದಲ್ಲಿ ರೋಹಿತ್ ಪಡೆಗೆ ಸವಾಲು ಹಾಕಲಿದ್ದಾರೆ. ಹಾಗಾದ್ರೆ ಇಂಡೋ ಆಸೀಸ್ ಆರಂಭ ಯಾವಾಗ ? ಸಂಪೂರ್ಣ ಶೆಡ್ಯೂಲ್ ಇಲ್ಲಿದೆ.

ಮೊದಲ ಟಿ 20 ಪಂದ್ಯ
ಸೆಪ್ಟೆಂಬರ್ 20 – ಮಂಗಳವಾರ – ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂ, ಮೊಹಲಿ
ದ್ವಿತೀಯ ಟಿ 20 ಪಂದ್ಯ
ಸೆಪ್ಟೆಂಬರ್ 23 ಶುಕ್ರವಾರ, ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ನಾಗ್ ಪುರ್
ಮೂರನೇ ಟಿ 20 ಪಂದ್ಯ
ಸೆಪ್ಟೆಂಬರ್ 25 ಆದಿವಾರ- ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಂ, ಹೈದರಾಬಾದ್
ಟೀಂ ಇಂಡಿಯಾದ ತಂಡ
ರೋಹಿತ್ ಶರ್ಮಾ ( ನಾಯಕ ), ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಮೊಹ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜನ್ ಪ್ರಿತ್ ಬುಮ್ರಾ.
ind-vs-aus-t20-series-full-schedule-squads