Ind vs Sa 2nd odi | ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ
ದಕ್ಷಿಣಾಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಸೋಲಿನೊಂದಿಗೆ ಆರಂಭಿಸಿದ್ದು ಗೊತ್ತೇ ಇದೆ.
ಮೊದಲ ಏಕದಿನದಲ್ಲಿ ಸೋಲುಂಡಿರುವ ಟೀಂ ಇಂಡಿಯಾ ಇದೀಗ ಎರಡನೇ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ.
ರಾಂಚಿ ವೇದಿಕೆಯಾಗಿ ಇಂದು ಭಾರತ – ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಪಂದ್ಯ ನಡೆಯಲಿದೆ.
ಇನ್ನು ಈ ಪಂದ್ಯದಲ್ಲಿ ಹೇಗಾದ್ರೂ ಮಾಡಿ ಗೆಲುವು ಸಾಧಿಸಲು ಉಭಯ ತಂಡಗಳು ಸಜ್ಜಾಗಿವೆ.
ಯಾಕೆಂದರೇ ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಗೆಲುವು ಸಾಧಿಸಿದರೇ ಸರಣಿ ಕೈವಶವಾಗಲಿದೆ.
ಆ ಮೂಲಕ ಟೀ 20 ಸರಣಿಯಲ್ಲಾದ ಸೋಲಿನ ಸೇಡು ತೀರಿಸಿಕೊಳ್ಳಲಿದೆ.

ಇತ್ತ ಭಾರತಕ್ಕೆ ಸರಣಿಯನ್ನು ಜೀವಂತವಾಗಿ ಇರಿಸಿಕೊಳ್ಳಲು ಮಹತ್ವದ ಪಂದ್ಯವಾಗಿದೆ.
ಇಂದಿನ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಸಮ ಬಲ ಸಾಧಿಸಬೇಕು ಎಂಬ ಪ್ಲಾನ್ ನಲ್ಲಿ ಯಂಗ್ ಇಂಡಿಯಾ ಇದೆ.
ಹೀಗಾಗಿ ಭಾರತ ತಂಡದಲ್ಲಿ ಕೆಲವು ಬದಲಾವಣೆಗಳು ಆಗುವ ಸಾಧ್ಯತೆಗಳಿವೆ.
ಮುಖ್ಯವಾಗಿ ಭಾರತ ಬ್ಯಾಟಿಂಗ್ ವಿಭಾಗದಲ್ಲಿ ಕೆಲವೊಂದು ಬದಲಾವಣೆಗಳನ್ನು ನಿರೀಕ್ಷೆ ಮಾಡಲಾಗಿದೆ.
ರುತುರಾಜ್ ಗಾಯಕ್ವಾಡ್ ಬದಲಿಗೆ ರಜಿತ್ ಪಟಿದಾರ್ ತಂಡ ಸೇರುವ ಸಾಧ್ಯತೆಗಳಿವೆ.
ಭಾರತ ಸಂಭಾವ್ಯ ತಂಡ
ಶಿಖರ್ ಧವನ್, ಶುಭ್ ಮನ್ ಗಿಲ್, ರಜತ್ ಪಟಿದಾರ್, ಶ್ರೇಯಸ್ ಅಯ್ಯರ್, ಇಶಾನ್ ಕಿಶಾನ್, ಸಂಜು ಸ್ಯಾಮ್ ಸನ್, ಶರ್ದೂಲ್ ಠಾಕೂರ್, ಕುಲ್ ದೀಪ್ ಯಾದವ್, ರವಿ ಬಿಷ್ಣೋಯಿ, ಮೊಹ್ಮದ್ ಶಮಿ, ಅವೇಶ್ ಖಾನ್