ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಅಪರೂಪದ ದಾಖಲೆ

1 min read
IND vs SA Test Seventh Five Wicket Haul For Bumrah saaksha tv

ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಅಪರೂಪದ ದಾಖಲೆ

ಟೀಂ ಇಂಡಿಯಾ ವೇಗಿ ಜಸ್ ಪ್ರೀತ್ ಬುಮ್ರಾ ಟೆಸ್ಟ್ ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ.

ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಬುಮ್ರಾ ಐದು ವಿಕೆಟ್ ಗಳನ್ನು ಪಡೆದು ಮಿಂಚಿದ್ರು.

ಇದರೊಂದಿಗೆ ಕೇಪ್ ಟೌನ್‌ನಲ್ಲಿ ಐದು ವಿಕೆಟ್ ಪಡೆದ ಟೀಂ ಇಂಡಿಯಾದ ಮೂರನೇ ಬೌಲರ್ ಎನಿಸಿಕೊಂಡರು.

ಇದಕ್ಕೂ ಮುನ್ನ ಹರ್ಭಜನ್ ಸಿಂಗ್ 2010-11ರಲ್ಲಿ ಏಳು ವಿಕೆಟ್ ಕಬಳಿಸಿದ್ದರು. ಇದೇ ಪಂದ್ಯದಲ್ಲಿ ಶ್ರೀಶಾಂತ್ ಎರಡನೇ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಕಬಳಿಸಿದ್ದರು.

ಸದ್ಯ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ  ಬುಮ್ರಾ 42 ರನ್ ನೀಡಿ ಐದು ವಿಕೆಟ್ ಪಡೆದರು.

IND vs SA Test Seventh Five Wicket Haul For Bumrah saaksha tv

ಹೀಗೆ ಟೆಸ್ಟ್ ನ ಇನ್ನಿಂಗ್ಸ್ ಒಂದರಲ್ಲಿ ಬುಮ್ರಾ  ಐದು ವಿಕೆಟ್‌ಗಳನ್ನು ಕಬಳಿಸಿದ್ದು ಏಳನೇ ಬಾರಿ.

27 ಟೆಸ್ಟ್‌ಗಳಲ್ಲಿ ಏಳು ಬಾರಿ ಐದು ವಿಕೆಟ್ ಪಡೆದಿರುವ ಬುಮ್ರಾ ಕಪಿಲ್ ದೇವ್ ಇರ್ಫಾನ್ ಪಠಾಣ್ ಸಾಲಿಗೆ ಸೇರಿದ್ದಾರೆ.

ಇನ್ನು ಪಂದ್ಯದ ವಿಚಾರಕ್ಕೆ ಬಂದರೇ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 223 ರನ್ ಗಳಿಗೆ ಆಲೌಟ್ ಆಯಿತು.

ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 210 ರನ್ ಗಳಿಗೆ ಸರ್ವಪತನ ಕಂಡಿತು.

ಸದ್ಯ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು 70 ರನ್ ಗಳ ಮುನ್ನಡೆ ಸಾಧಿಸಿದೆ. ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಕ್ರೀಸ್ ನಲ್ಲಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd