ಛೆಟ್ರಿ ಅಬ್ಬರ.. ಫೈನಲ್ ಗೆ ಭಾರತ

1 min read
SAFF Championships saaksha tv

ಛೆಟ್ರಿ ಅಬ್ಬರ.. ಫೈನಲ್ ಗೆ ಭಾರತ

ಮಹತ್ವದ ಪಂದ್ಯದಲ್ಲಿ ಸುನಿಲ್ ಛೆಟ್ರಿ ಎರಡನೇ ಅವಧಿಯಲ್ಲಿ ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಭಾರತ ಮಾಲೆಯಲ್ಲಿ ನಡೆದ SAFF ಚಾಂಪಿಯನ್ ಶಿಫ್ ಫುಟ್ಬಾಲ್ ಟೂರ್ನಿಯ ಫೈನಲ್ ಗೆ ಪ್ರವೇಶ ಪಡೆದಿದೆ.

ಗುರುವಾರ ನಡೆದ ಪಂದ್ಯದಲ್ಲಿ ಭಾರತ 3-1ರಿಂದ ಆತಿಥೇಯ ಮಾಲ್ಡೀವ್ಸ್ ತಂಡವನ್ನು ಮಣಿಸಿತು.

ಭಾರತದ ಪರ ಮನ್ವೀರ್ ಸಿಂಗ್ (33ನೇ ನಿಮಿಷ) ಹಾಗೂ ಸುನಿಲ್ ಛೆಟ್ರಿ (62, 71ನೇ ನಿಮಿಷ) ಗೋಲು ಬಾರಿಸಿ ಜಯದಲ್ಲಿ ಮಿಂಚಿದರು.

ಮಾಲ್ಡೀವ್ಸ್ ಮೊದಲಾವಧಿಯ ಕೊನೆಯ ಕ್ಷಣದಲ್ಲಿ ಗೋಲು ದಾಖಲಿಸಿತು.

ಭಾರತ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಜಯ, ಎರಡು ಡ್ರಾ ಸಾಧಿಸಿದ್ದು, 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ನೇಪಾಳ ಇಷ್ಟೇ ಪಂದ್ಯಗಳಿಂದ ಏಳು ಅಂಕ ಸಂಪಾದಿಸಿದ್ದು ಎರಡನೇ ಸ್ಥಾನದಲ್ಲಿದೆ.

SAFF Championships saaksha tv

ಶನಿವಾರ ಅಕ್ಟೋಬರ್ 16 ರಂದು ನಡೆಯಲಿರುವ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಭಾರತ ನೇಪಾಳ ತಂಡವನ್ನು ಎದುರಿಸಲಿದೆ.

ಈ ಟೂರ್ನಿಯಲ್ಲಿ ಭಾರತ ಏಳು ಬಾರಿ ಚಾಂಪಿಯನ್ ಎನ್ನುವುದು ವಿಶೇಷ.

ಆರಂಭದಿಂದಲೂ ಭಾರತ ಸೊಗಸಾದ ಆಟದ ಪ್ರದರ್ಶನ ನೀಡಿತು.

ಅಲ್ಲದೆ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಸಮಯೋಚಿತ ಆಟವಾಡಿ ಎಲ್ಲರ ಗಮನ ಸೆಳೆಯಿತು.

ಮೊದಲಾವಧಿಯ 33ನೇ ನಿಮಿಷದಲ್ಲಿ ಮನ್ವೀರ್ ಸಿಂಗ್ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದು ಕೊಟ್ಟರು.

ಈ ಅವಧಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತು. ಆದರೆ ಕೊನೆಯ ಕ್ಷಣದಲ್ಲಿ ಮಾಲ್ಡೀವ್ಸ್ ಆಟಗಾರ ಗೋಲು ಬಾರಿಸಿ ಅಂತರವನ್ನು ಸಮನಾಗಿಸಿದರು.

ಎರಡನೇ ಅವಧಿಯಲ್ಲಿ ಭಾರತ ಅಬ್ಬರದ ಆಟದ ಪ್ರದರ್ಶನ ನೀಡಿತು.

ಈ ಅವಧಿಯಲ್ಲಿ ಸ್ಟಾರ್ ಸ್ಟ್ರೈಕರ್ ಛೆಟ್ರಿ 62 ಹಾಗೂ 71ನೇ ನಿಮಿಷದಲ್ಲಿ ಗೋಲು ಸಿಡಿಸಿ ಅಂತರವನ್ನು ಹಿಗ್ಗಿಸುವಲ್ಲಿ ನೆರವಾದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd