ಭಾರತದಲ್ಲಿ ಹೂಡಿಕೆಗೆ ಚೀನಾದ ಯಾವ ಕಂಪನಿಗಳಿಗೂ ಒಪ್ಪಿಗೆ ಸೂಚಿಸಿಲ್ಲ..!

1 min read

ನವದೆಹಲಿ: ಗಡಿಯಲ್ಲಿನ ಉದ್ವಿಗ್ನತೆ ಕಡಿಮೆಯಾಗುತ್ತಿದ್ದಂತೆಯೇ ಚೀನಾದಿಂದ ಹೂಡಿಕೆ ಪ್ರಸ್ತಾಪಗಳು ಹರಿದುಬರುತ್ತಿವೆ ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡ್ತಿದ್ದು, ಇಂತಹ ಊಹಾಪೋಹಗಳಿಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಭಾರತದಲ್ಲಿ ಹೂಡಿಕೆ ಮಾಡಲು ಯಾವುದೇ ಚೀನೀ ಕಂಪೆನಿಗಳಿಗೆ ಅನುಮತಿ ನೀಡಿಲ್ಲ. ಇದುವರೆಗೂ ಅಂತಹ ಯಾವ ಪ್ರಸ್ತಾವಗಳಿಗೂ ಒಪ್ಪಿಗೆ ನೀಡಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಹಾಂಕಾಂಗ್ ಮೂಲದ ಮೂರು ಕಂಪೆನಿಗಳ ಪ್ರಸ್ತಾಪವನ್ನು ಮಾತ್ರ ಜನವರಿ 22ರಂದು ನಡೆದ ಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಮೂರು ಪ್ರಸ್ತಾಪಗಳು ಸಿಟಿಜನ್ ವಾಚಸ್, ನಿಪ್ಪಾನ್ ಪೈಂಟ್ಸ್ ಮತ್ತು ನೆಟ್‌ಪ್ಲೇಗಳಿಂದ ಬಂದಿತ್ತು. ಮೂರರಲ್ಲಿ ಎರಡು ಜಪಾನಿ ಕಂಪೆನಿಗಳು ಮತ್ತು ಒಂದು ಎನ್‌ಆರ್‌ಐಗೆ ಸೇರಿದ್ದವಾಗಿವೆ ಎಂದು ಮೂಲಗಳು ಹೇಳಿವೆ.

ಪೊಗರು ಪ್ರಚಾರ ಮಾಡದೇ ಅಸಡ್ಡೆ ತೋರಿದ ರಶ್ಮಿಕಾ ವಿರುದ್ಧ ಕನ್ನಡಿಗರ ಆಕ್ರೋಶ..!

ಕಳೆದ ವರ್ಷದ ಜೂನ್ ತಿಂಗಳಲ್ಲಿ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನೀ ಸೈನಿಕರು ನಡುವೆ ನಡೆದ ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾದ ಬಳಿಕ ಸರ್ಕಾರವು ವಿದೇಶಿ ನೇರ ಹೂಡಿಕೆ ನೀತಿಯಲ್ಲಿ ಬದಲಾವಣೆ ಮಾಡಿತ್ತು. ಇದರ ಅಂಗವಾಗಿ ಚೀನಾ ವಿರುದ್ಧ ಆರ್ಥಿಕವಾಗಿ ಸಮರ ಸಾರಿದ್ದ ಕೇಂದ್ರ ಸರ್ಕಾರ ಟಿಕ್ ಟಾಕ್ ಸೀರಿದಂತೆ 150ಕ್ಕೂ ಹೆಚ್ಚು ಚೀನೀಯ ಆಪ್ ಗಳನ್ನ ಬಾರತದಲ್ಲಿ ಬಂದ್ ಮಾಡಿತ್ತು.

`ಸಿದ್ಧ’ವಾಯ್ತು ಮಾಸ್ಟರ್ ಪ್ಲಾನ್ : ಒಟ್ಟಾಗಿ ಪಕ್ಷ ಕಟ್ಟಲು ಮುಂದಾದ ಹುಲಿಯಾ-ಹೆಬ್ಬುಲಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd