ಭಾರತ, ಪೋರ್ಚುಗಲ್, ಬ್ರಿಟನ್ ಪ್ರಯಾಣಿಕರ ಮೇಲಿನ ನಿರ್ಬಂಧ ತೆರವುಗೊಳಿಸಿದ ಜರ್ಮನಿ
ಜರ್ಮನಿ : ಕೊರೊನಾ ರೂಪಾಂತರ ಡೆಲ್ಟಾ ಪ್ಲಸ್ ಭೀತಿಯಿಂದಾಗಿ ವಿದೇಶಿ ಪ್ರಯಾಣಿಕರ ಮೇಲೆ ಜರ್ಮನಿ ನಿರ್ಬಂಧ ವಿಧಿಸಿತ್ತು.. ಇದೀಗ ಬ್ರಿಟನ್, ಭಾರತ ಮತ್ತು ಇತರ ಮೂರು ದೇಶಗಳ ಪ್ರಯಾಣಿಕರ ಮೇಲಿನ ನಿಷೇಧವನ್ನು ರದ್ದುಪಡಿಸಿದೆ..
ಡೆಲ್ಟಾ ರೂಪಾಂತರ ತಳಿ ಸೋಂಕು ಹೊಂದಿರುವ ದೇಶಗಳೆಂದು ಪಟ್ಟಿ ಮಾಡಲಾಗಿರುವ ಭಾರತ, ನೇಪಾಳ, ರಷ್ಯಾ, ಪೋರ್ಚುಗಲ್ ಮತ್ತು ಬ್ರಿಟನ್ ಅನ್ನು ಬುಧವಾರದಿಂದ ಹೆಚ್ಚಿನ ಪ್ರಕರಣಗಳ ದೇಶ ಎಂದು ಮರು ವಿಂಗಡಣೆ ಮಾಡಲಾಗಿದೆ ಎಂದು ರಾಬರ್ಟ್ ಕೋಚ್ ಇನ್ಸ್ ಟಿಟ್ಯೂಟ್ ತಿಳಿಸಿದೆ.
ಈ ಬದಲಾವಣೆಯ ಪರಿಣಾಮ ಜರ್ಮನ್ ನಿವಾಸಿಗಳಲ್ಲದ ಪ್ರಯಾಣಿಕರ ಪ್ರಯಾಣದ ಮೇಲಿನ ನಿಷೇಧವನ್ನು ತೆಗೆದು ಹಾಕಿದಂತಾಗಿದ್ದು, ಕ್ವಾರಂಟೈನ್ ಮತ್ತು ಪರೀಕ್ಷೆಯ ನಿಯಮಕ್ಕೆ ಬದ್ಧರಾಗುವವರು ಜರ್ಮನಿಯನ್ನು ಸುಲಭವಾಗಿ ಪ್ರವೇಶಿಸಬಹುದಾಗಿದೆ ಎಂದು ವಿವರಿಸಿದೆ.
ಬ್ಲಾಕ್ ಫಂಗಸ್ ಬಳಿಕ ದೀರ್ಘ ಕಾಲದ ಕೊರೊನಾ ರೋಗಿಗಳಲ್ಲಿ ಮತ್ತೊಂದು ಮಾರಕ ಕಾಯಿಲೆ ಪತ್ತೆ..!
ಶೇ.65 ಆಸನ ಸಾಮರ್ಥ್ಯದೊಂದಿಗೆ ದೇಶೀಯ ವಿಮಾನಯಾನ ಅವಕಾಶ
ಭಾರತದಲ್ಲಿ ಲಭ್ಯವಾಗಲಿದೆ ಮಾಡರ್ನಾ ಲಸಿಕೆ – ಹೊಸ ಡೆಲ್ಟಾ ರೂಪಾಂತರಕ್ಕೆ ಇದು ಎಷ್ಟು ಪರಿಣಾಮಕಾರಿ?