‘ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ವಿವಾದ ಪ್ರಸ್ತಾಪಿಸುವುದು ಪಾಕ್ ನ ಕರ್ತವ್ಯ’ – ಯುಎನ್ ಸಾಮಾನ್ಯ ಸಭೆಯ ಅಧ್ಯಕ್ಷರಿಗೆ ತಿರುಗೇಟು ಕೊಟ್ಟ ಭಾರತ..!
ವಿಶ್ವಸಸಂಸ್ಥೆಯಲ್ಲಿ ಕಾಶ್ಮೀರದ ವಿವಾದ ಪ್ರಸ್ತಾಪಿಸುವುದು ಪಾಕ್ ನ ಕರ್ತವ್ಯ ಎಂದು ಯುಎನ್ ಪ್ರತಿಪಾದಿಸಿದ ಸಾಮಾನ್ಯ ಸಭೆಯ ಅಧ್ಯಕ್ಷ ವೋಲ್ಕನ್ ಬೊಜ್ಕಿರ್ ಗೆ ಭಾರತವು ತಕ್ಕ ಉತ್ತರವನ್ನೇ ನೀಡಿದೆ. ಇಂತಹ ದಾರಿ ತಪ್ಪಿಸುವ, ಪೂರ್ವಾಗ್ರಹ ಪೀಡಿತ ಹೇಳಿಕೆಗಳು ನಿಮ್ಮ ಹುದ್ದೆಗೆ ಅಪಚಾರ ಮಾಡಿದಂತೆ ಎಂದು ತಿರುಗೇಟು ನೀಡಿದೆ.
ಹೌದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಜೊತೆಗೆ ಗುರುವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬೊಜ್ಕಿರ್ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಬಲವಾಗಿ ಪ್ರಸ್ತಾಪಿಸುವುದು ಪಾಕಿಸ್ತಾನದ ಕರ್ತವ್ಯ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿರುವ ಭಾರತೀಯ ವಿದೇಶಾಂಗ ಸಚಿವಾಲಯವು, ಬೊಜ್ಕಿರ್ ಹೇಳಿಕೆಯು ಸ್ವೀಕಾರಾರ್ಹವಲ್ಲ. ಭಾರತದ ಕೇಂದ್ರಾಡಳಿತ ಪ್ರದೇಶವನ್ನು ಉಲ್ಲೇಖಿಸುವುದು ಅನಗತ್ಯ ಎಂದು ಹೇಳಿದೆ.
ಕೊರೊನಾ ಹರಡಿದ್ದು ವುಹಾನ್ ಲ್ಯಾಬ್ ನಿಂದ… ತನಿಖೆಗೆ ಸೂಚಿಸಿದ ಅಮೆರಿಕಾ..ಕೆಂಡಕಾರಿದ ‘ಛೀ’ನಾ..!
ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷರು ತಪ್ಪು ದಾರಿಗೆಳೆಯುವ ಮತ್ತು ಪೂರ್ವಾಗ್ರಹಪೀಡಿತ ಮನಸ್ಥಿತಿಯ ಹೇಳಿಕೆಗಳು ಅವರು ಹೊಂದಿರುವ ಹುದ್ದೆಗೆ ಅಪಚಾರ ಮಾಡಿದಂತಾಗಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯ ವರ್ತನೆ ನಿಜಕ್ಕೂ ವಿಷಾದನೀಯ ಮತ್ತು ಜಾಗತಿಕ ವೇದಿಕೆಯಲ್ಲಿ ಅವರ ನಿಲುವನ್ನು ಖಂಡಿತವಾಗಿಯೂ ಕಿರಿದಾಗಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿಕೆ ನೀಡಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.