ಭಾರತದಲ್ಲಿ 67 ಲಕ್ಷ ದಾಟಿದ ಕೋವಿಡ್-19 ಸೋಂಕಿತರ ಸಂಖ್ಯೆ ( India COVID19 )
ಹೊಸದಿಲ್ಲಿ, ಅಕ್ಟೋಬರ್08: ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಒಂದು ದಿನದಲ್ಲಿ 72,049 ಹೊಸ ಪ್ರಕರಣಗಳೊಂದಿಗೆ 67.57 ಲಕ್ಷಕ್ಕೆ ಏರಿದೆ. ( India COVID19 )
ದೇಶದಲ್ಲಿ ಇಲ್ಲಿಯವರೆಗೆ 57,44,693 ಜನರು ಚೇತರಿಸಿಕೊಂಡಿದ್ದಾರೆ.
ರಾಷ್ಟ್ರೀಯ ಚೇತರಿಕೆ ಪ್ರಮಾಣವು ಬುಧವಾರ ಶೇ 85.02 ಕ್ಕೆ ಏರಿಕೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಒಟ್ಟು ಕೊರೋನವೈರಸ್ ಪ್ರಕರಣಗಳು 67,57,131 ಕ್ಕೆ ಏರಿದರೆ, ಸಾವಿನ ಸಂಖ್ಯೆ 1,04,555 ಕ್ಕೆ ಏರಿದೆ.
ದೇಶದಲ್ಲಿ 907883 ಕೊರೋನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳಿವೆ. ಇದು ಒಟ್ಟು ಕ್ಯಾಸೆಲೋಡ್‌ನ ಶೇಕಡಾ 13.44 ರಷ್ಟಿದೆ ಎಂದು ಡೇಟಾ ತಿಳಿಸಿದೆ.
ಭಾರತದೊಂದಿಗಿನ ಕಾರ್ಯತಂತ್ರ ಸಂಬಂಧಗಳಿಗೆ ಜಪಾನ್ ಪ್ರಾಮುಖ್ಯತೆ – ಮೊಟೆಗಿ
ಐಸಿಎಂಆರ್ ಪ್ರಕಾರ, ಅಕ್ಟೋಬರ್ 6 ರವರೆಗೆ ಒಟ್ಟು 8,22,71,654 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 11,99,857 ಮಾದರಿಗಳನ್ನು ಮಂಗಳವಾರ ಪರೀಕ್ಷಿಸಲಾಗಿದೆ.
ಭಾರತದ ಕೋವಿಡ್-19 ಸಂಖ್ಯೆಯು ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ದಾಟಿದೆ ಮತ್ತು ಸೆಪ್ಟೆಂಬರ್ 15 ರಂದು 50 ಲಕ್ಷ ದಾಟಿದೆ.
ಭಾರತದಲ್ಲಿ ಕೋವಿಡ್-19 ಪ್ರಕರಣಗಳು 21 ದಿನಗಳಲ್ಲಿ 10 ಲಕ್ಷದಿಂದ 20 ಲಕ್ಷಕ್ಕೆ ಜಿಗಿತ ಕಂಡಿದೆ.
ನಂತರ 30 ಲಕ್ಷ ದಾಟಲು 16 ದಿನಗಳನ್ನು ತೆಗೆದುಕೊಂಡಿದ್ದರೆ, 40 ಲಕ್ಷ ದಾಟಲು 13 ದಿನಗಳು, 50 ಲಕ್ಷ ದಾಟಲು 11 ದಿನಗಳು ಮತ್ತು 60 ಲಕ್ಷವನ್ನು 12 ದಿನಗಳಲ್ಲಿ ದಾಟಿದೆ.
ದೇಶದಲ್ಲಿ ಕೋವಿಡ್-19 ಪ್ರಕರಣಗಳು ಒಂದು ಲಕ್ಷ ತಲುಪಲು 110 ದಿನಗಳನ್ನು ತೆಗೆದುಕೊಂಡರೆ, 10 ಲಕ್ಷ ದಾಟಲು 59 ದಿನಗಳನ್ನು ತೆಗೆದುಕೊಂಡಿವೆ.
ಎಂ.ರಾಜೇಶ್ವರ ರಾವ್ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)ನ ಹೊಸ ಉಪ ಗವರ್ನರ್
ಇಲ್ಲಿಯವರೆಗೆ ಒಟ್ಟು 1,04,555 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
ಈ ಪೈಕಿ, ಮಹಾರಾಷ್ಟ್ರದಲ್ಲಿ ಗರಿಷ್ಠ 38,717, ತಮಿಳುನಾಡಿನಲ್ಲಿ 9,917, ಕರ್ನಾಟಕದಲ್ಲಿ 9,461, ಉತ್ತರಪ್ರದೇಶದಲ್ಲಿ 6,153, ಆಂಧ್ರಪ್ರದೇಶದಲ್ಲಿ 6,052, ದೆಹಲಿಯಲ್ಲಿ 5,581, ಪಶ್ಚಿಮ ಬಂಗಾಳದಲ್ಲಿ 5,318, ಗುಜರಾತ್ ನಲ್ಲಿ 3,673 ಮಂದಿ ಬಲಿಯಾಗಿದ್ದಾರೆ.
ಕೋವಿಡ್ -19 ಗೆ ಮಧ್ಯಪ್ರದೇಶದಲ್ಲಿ 2488, ರಾಜಸ್ಥಾನದಲ್ಲಿ 1,574, ಹರಿಯಾಣದಲ್ಲಿ 1509, ಜಮ್ಮು ಮತ್ತು ಕಾಶ್ಮೀರದಲ್ಲಿ 1268, ತೆಲಂಗಾಣದಲ್ಲಿ 1189, ಛತ್ತೀಸ್‌ಗಡದಲ್ಲಿ 1104, ಒಡಿಶಾದಲ್ಲಿ 940, ಬಿಹಾರದಲ್ಲಿ 925, ಕೇರಳದಲ್ಲಿ 884, ಜನರು ಸಾವನ್ನಪ್ಪಿದ್ದಾರೆ.
ಜಾರ್ಖಂಡ್ನಲ್ಲಿ 757, ಮತ್ತು ಉತ್ತರಾಖಂಡದಲ್ಲಿ 677, ಪುದುಚೇರಿಯಲ್ಲಿ 546 ಸಾವುಗಳು ಸಂಭವಿಸಿವೆ.
ಗೋವಾ 468, ತ್ರಿಪುರ 301, ಚಂಡೀಗಢ 180, ಹಿಮಾಚಲ ಪ್ರದೇಶ 229, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 54, ಮಣಿಪುರ 78, ಲಡಾಖ್ 61 ಮಂದಿ ಸಾವನ್ನಪ್ಪಿದ್ದಾರೆ.
ಫಿನ್ಲ್ಯಾಂಡ್ ನಲ್ಲಿ ಒಂದು ದಿನದ ಪ್ರಧಾನಿಯಾಗಿ ಸಂಭ್ರಮಿಸಿದ 16 ರ ಬಾಲೆ
ಮೇಘಾಲಯ 60, ಅರುಣಾಚಲ ಪ್ರದೇಶ 20, ಸಿಕ್ಕಿಂ 49, ನಾಗಾಲ್ಯಾಂಡ್ 17 ಮಂದಿ ಮೃತಪಟ್ಟಿದ್ದಾರೆ.
ನಮ್ಮ ಅಂಕಿಅಂಶಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯೊಂದಿಗೆ ಹೊಂದಾಣಿಕೆ ಮಾಡಲಾಗುತ್ತಿದೆ ಎಂದು ಸಚಿವಾಲಯವು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.