ದರ್ಶನ್ ಹಲ್ಲೆ ಪ್ರಕರಣ : ಸಂದೇಶ್ ಆಡಿಯೋ ಕುರಿತು ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ…!
ಇತ್ತೀಚೆಗಷ್ಟೇ ನಿರ್ಮಾಪಕ ಉಮಾಪತಿ ಹಾಗೂ ದರ್ಶನ್ ಇಬ್ಬರೂ 25 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸುದ್ದಿಯಾಗಿದ್ದರು.. ಇದರ ಬೆನ್ನಲ್ಲೇ ದರ್ಶನ್ ಸಂದೇಶ್ ಹೋಟೆಲ್ ನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರೋದಾಗಿ ಇಂದ್ರಜಿತ್ ಆರೋಪ ಮಾಡಿದ್ದು, ದರ್ಶನ್ ಈ ವಿಚಾರವಾಗಿ ಸಾಕಷ್ಟು ಸುದ್ದಿಯಲಿದ್ದಾರೆ.. ಈ ನಡುವೆ ಹೋಟೆಲ್ ಸಂದೇಶ್ ಪ್ರಿನ್ಸ್ ಮಾಲೀಕ ಮಾತನಾಡಿದ್ದಾರೆ ಎನ್ನುವ ವಿಡಿಯೋವೊಂದು ಹರಿದಾಡ್ತಿದೆ..
ದರ್ಶನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ನಿರ್ದೇಶಕ , ನಿರ್ಮಾಪಕ ಇಂದ್ರಜಿತ್ ಹಿಂದೆ ಯಾರೋ ಇದ್ದಾರೆ. ದುರುದ್ದೇಶದಿಂದ ಇಂತಹ ಕೇಸ್ ಹಾಕಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಆಡಿಯೋದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹೆಸರು ಸಹ ಚರ್ಚೆಯಾಗಿದೆ. ನಟ ದರ್ಶನ್ ಹಾಗೂ ಸ್ನೇಹಿತರು ಸೇರಿ ಉಮಾಪತಿ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎನ್ನುವ ವಿಷಯವನ್ನು ಆಡಿಯೋದಲ್ಲಿ ಚರ್ಚಿಸಲಾಗಿದೆ ಎನ್ನಲಾಗ್ತಿದೆ.
ಇದೀಗ ಖುದ್ದು ಉಮಾಪತಿ ಅವರೇ ಈ ಆಡಿಯೋ ಕ್ಲಿಪ್ ಬಗ್ಗೆ ನಿರ್ಮಾಪಕ ಉಮಾಪತಿ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಗ್ಗೆ ಉಮಾಪತಿ ಪ್ರತಿಕ್ರಿಯೆ ನೀಡಿದ್ದು, ಇಂದ್ರಜಿತ್ ಅವರನ್ನು ನಾನು ಭೇಟಿ ಮಾಡಿಲ್ಲ. ಅವರ ಹಿಂದೆಯೂ ನಾನಿಲ್ಲ. ನನ್ನ ವಿಚಾರದಲ್ಲಿ ನಾನೊಬ್ಬನೇ ಹೋರಾಟ ಮಾಡ್ತಿದ್ದೇನೆ ಎಂದಿದ್ದಾರೆ. ಅಲ್ಲದೇ ಬ್ಲಾಕ್ ಮೇಲ್ ಮಾಡಿಸಿಕೊಳ್ಳುವಂತಹ ಕೆಲಸ ನಾನು ಏನು ಮಾಡಿಲ್ಲ. ನನ್ನ ಮೇಲೆ ಆರೋಪ ಮಾಡಿರುವವರೆಲ್ಲಾ ಸಾಚಾಗಳಾ, ನನ್ನ ದರ್ಶನ್ ಸರ್ ವಿಚಾರ ನಾವು ನೋಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ನನ್ನ ಮತ್ತು ದರ್ಶನ್ ಸರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರು ಮೈಸೂರಿಗೆ ಹೋಗುವ ಮುಂಚೆ ನನ್ನ ಬಳಿ ಮಾತನಾಡಿದರು. ಪ್ರೆಸ್ ಮೀಟ್ ಮಾಡುವ ಮೊದಲು ಸಹ ನನ್ನ ಜೊತೆ ಮಾತನಾಡಿದರು. ನಾವಿಬ್ಬರು ಚೆನ್ನಾಗಿದ್ದೇವೆ. ನಾವು ದೂರ ಆಗುವ ಮಾತಿಲ್ಲ. ಮತ್ತೊಬ್ಬರ ವಿಚಾರಕ್ಕೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ.
ಇನ್ನೂ ವಂಚನೆ ಕೇಸ್ ಬಗ್ಗೆ ಮಾತನಾಡಿದ ಉಮಾಪತಿ ಅವರು ವಿಷಯ ಅರುಣಾಕುಮಾರಿ ಸುತ್ತಾ ಇದೆ. ಇದರಲ್ಲಿ ನನ್ನ ಹೆಸರು ಬಂದಿದೆ. ಅದಕ್ಕೆ ಮಾತ್ರ ನನ್ನ ಹೋರಾಟ. ಬೇರೆ ಯಾವುದೇ ವಿಷಯಗಳಿಗೆ ನಾನು ಜವಾಬ್ದಾರನಲ್ಲ. ಈ ಸಂಬಂಧ ವಕೀಲರನ್ನು ಭೇಟಿ ಮಾಡಿದ್ದೇನೆ. ಅವರು ಮುಂದುವರಿಸುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.