INDvsBNG : ಏಕದಿನ ಸರಗೆ ಬಾಂಗ್ಲಾ ತಂಡ ಪ್ರಕಟ
ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಗೆ ಬಾಂಗ್ಲಾ ಕ್ರಿಕೆಟ್ ಮಂಡಳಿ (ಬಿಸಿಬಿ) 16 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ.
ಅನುಭವಿ ಆಟಗಾರ ಶಕೀಬ್ ಅಲ್ ಹಸನ್ ತಂಡಕ್ಕೆ ಮರಳಿದ್ದಾರೆ.
ಈ ಹಿಂದೆ ವೈಯಕ್ತಿಕ ಕಾರಣಗಳಿಂದಾಗಿ ಶಕೀಬ್ ಅಲ್ ಹಸನ್ ಜಿಂಬಾಬ್ವೆ ಪ್ರವಾಸಕ್ಕೆ ತೆರೆಳಿರಲಿಲ್ಲ.
ಭಾರತ ವಿರುದ್ಧದ ಏಕದಿನ ಸರಣಿಗೆ ಮೊಸೆಡೆಕ್ ಹೊಸೇನ್, ಶೋರಿಫುಲ್ ಇಸ್ಲಾಮ್, ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಮ್ ಅವರುಗಳನ್ನು ಕೈಬಿಡಲಾಗಿದೆ.
ಡಿ.4,7 ಮತ್ತು 10 ರಂದು ಏಕದಿನ ಸರಣಿ ನಡೆಯಲಿದೆ.
ಬಾಂಗ್ಲಾದೇಶ ತಂಡ: ತಮೀಮ್ ಇಕ್ಬಾಲ್(ನಾಯಕ), ಲಿಟನ್ ದಾಸ್, ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಷ್ಫೀಕುರ್ ರಹೀಮ್, ಆಫಿï ಹೊಸೇನ್, ಯಸೀರ್ ಅಲಿ ಚೌ`Àರಿ, ಮೆಹಿದಿ ಹಸನ್, ಮುಸ್ತಾಫಿಜುರ್ ರಹಮಾನ್, ತಸ್ಕಿನ್ ಅಹಮದ್, ಹಸನ್ ಮಹಮುದ, ಎಬೊಡತ್ ಹೊಸೇನ್, ನಾಸೂಮ್ ಅಹ್ಮದ್, ಮಹ್ಮಮದ್ಹುಲ್ಲಾ, ನಜ್ಮುನ್ ಹೊಸೇನ್, ನೂರುಲ್ ಹಸನ್.