ದೇಶದ ಅತೀದೊಡ್ಡ ಸಾರ್ವಜನಿಕ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಎಸ್ಬಿಐ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರವನ್ನು 3%ರಷ್ಟು ಇಳಿಕೆ ಮಾಡಿದೆ.
ಅಲ್ಲದೆ ಉಳಿತಾಯ ಖಾತೆಗಳಲ್ಲಿ ಕನಿಷ್ಟ ದರ (ಮಿನಿಮಮ್ ಬ್ಯಾಲೆನ್ಸ್)ವನ್ನು ಹೊಂದಿರಬೇಕು ಎಂಬ ನಿಯಮವನ್ನು ತೆಗೆದುಹಾಕಿದೆ. ಆದುದರಿಂದ ಇನ್ನು ಮುಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯನ್ನು ಹೊಂದಿರುವ ಗ್ರಾಹಕರು ಮಿನಿಮಮ್ ಬ್ಯಾಲೆನ್ಸ್ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ, ಹಾಗೆ ಅದಕ್ಕೆ ತಪ್ಪಿದಲ್ಲಿ ಬ್ಯಾಂಕಿಗೆ ದಂಡವನ್ನೂ ತೆರಬೇಕಾಗಿಲ್ಲ. ಬ್ಯಾಂಕಿನ ಈ ನಿರ್ಧಾರವು ದೇಶಾದ್ಯಂತ ಇರುವ ಎಸ್.ಬಿ.ಐ.ನ 44.51 ಕೋಟಿ ಎಸ್.ಬಿ. ಖಾತೆದಾರರಿಗೆ ಅನುಕೂಲವಾಗಲಿದೆ.








