ಐಪಿಎಲ್ 2021- ಡೆಲ್ಲಿ ಅಬ್ಬರಕ್ಕೆ ತಲೆಬಾಗಿದ ಪಂಜಾಬ್ ಕಿಂಗ್ಸ್

1 min read
shikhar dhawan saakshatv delhi capitals ipl 2021

ಐಪಿಎಲ್ 2021- ಡೆಲ್ಲಿ ಅಬ್ಬರಕ್ಕೆ ತಲೆಬಾಗಿದ ಪಂಜಾಬ್ ಕಿಂಗ್ಸ್

shikhar dhawan saakshatv delhi capitals ipl 202114ನೇ ಆವೃತ್ತಿಯ ಐಪಿಎಲ್ ಟೂರ್ನಿಯ 29ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಏಳು ವಿಕೆಟ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಪರಾಭವಗೊಳಿಸಿದೆ.
ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿರುವ ಎಂಟು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದುಕೊಂಡು ಅಗ್ರ ಸ್ಥಾನದಲ್ಲಿದೆ.
ಅಹಮದಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 167 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 17.4 ಓವರ್ ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು.
ಆರಂಭಿಕ ಪೃಥ್ವಿ ಶಾ ಅವರು 22 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ 39 ರನ್ ಸಿಡಿಸಿದ್ರು. ಇನ್ನೊಂದೆಡೆ ಶಿಖರ್ ಧವನ್ ಪಂಜಾಬ್ ಕಿಂಗ್ಸ್ ತಂಡಕ್ಕೆ ದುಃಸ್ವಪ್ನವಾಗಿ ಕಾಡಿದ್ರು. ಈ ನಡುವೆ ಸ್ಟೀವನ್ ಸ್ಮಿತ್ 24 ರನ್ ಗಳಿಸಿದ್ರೆ, ನಾಯಕ ರಿಷಬ್ ಪಂತ್ 14 ರನ್ ದಾಖಲಿಸಿದ್ರು.
ಅಂತಿಮವಾಗಿ ಶಿಖರ್ ಧವನ್ ಅಜೇಯ 69 ರನ್ ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಧವನ್, 47 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್ ಗಳನ್ನು ಸಿಡಿಸಿದ್ರು. ಶಿಮ್ರೋನ್ ಹೆಟ್ಮೇರ್ ಅಜೇಯ 16 ರನ್ ಗಳಿಸಿದ್ರು.
mayank agarwal punjabkings ipl 2021 saakshatvಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಆರು ವಿಕೆಟ್ ಕಳೆದುಕೊಂಡು 166 ರನ್ ಗಳಿಸಿತ್ತು.
ಕೆ.ಎಲ್. ರಾಹುಲ್ ಅವರ ಅನುಪಸ್ಥಿತಿಯಲ್ಲಿ ಮಯಾಂಕ್ ಅಗರ್ ವಾಲ್ ಪಂಜಾಬ್ ಕಿಂಗ್ಸ್ ತಂಡದ ಸಾರಥಿಯಾಗಿದ್ದರು. ನಾಯಕನ ಆಟವನ್ನಾಡಿದ್ದ ಮಯಾಂಕ್ ಅಗರ್‍ವಾಲ್ ಅಜೇಯ 99 ರನ್ ದಾಖಲಿಸಿ ಒಂದು ರನ್ ನಿಂದ ಶತಕ ವಂಚಿತರಾದ್ರು.
ಇನ್ನುಳಿದಂತೆ ಪಂಜಾಬ್ ಕಿಂಗ್ಸ್ ಬ್ಯಾಟ್ಸ್ ಮೆನ್ ಗಳು ಹೆಚ್ಚು ಸಮಯ ಕ್ರೀಸ್ ನಲ್ಲೂ ನಿಲ್ಲಲಿಲ್ಲ. ಹೆಚ್ಚು ರನ್ ಕೂಡ ದಾಖಲಿಸಲಿಲ್ಲ. ಆರಂಭಿಕ ಪ್ರಭಾಸಿಮ್ರಾನ್ ಸಿಂಗ್ 12 ರನ್, ಕ್ರೀಸ್ ಗೇಲ್ 13 ರನ್ ಗೆ ಸೀಮಿತವಾದ್ರೆ, ಡೇವಿಡ್ ಮಲಾನ್ 26 ರನ್, ದೀಪಕ್ ಹೂಡ 1, ಶಾರೂಕ್ ಖಾನ್ 4 ರನ್, ಕ್ರೀಸ್ ಜೋರ್ಡಾನ್ 2ರನ್ ಹಾಗೂ ಹಪ್ರೀತ್ ಬ್ರಾರ್ ಅಜೇಯ 4 ರನ್ ಗಳಿಸಿದ್ರು.
ಈ ನಡುವೆ ಮಯಾಂಕ್ ಅಗರ್ ವಾಲ್ 58 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳನ್ನು ದಾಖಲಿಸಿದ್ದರು.
ಶತಕ ವಂಚಿತ ಹಾಗೂ ಅಜೇಯ 99 ರನ್ ದಾಖಲಿಸಿದ್ದ ಮಯಾಂಕ್ ಅಗರ್ ವಾಲ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd