ಐಪಿಎಲ್ 2021- 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ – ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ

1 min read
rohit sharma rishab pant ipl 2021 saakshatv

ಐಪಿಎಲ್ 2021- 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ – ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ

mumbai indians vs delhi capitals saakshatv14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 13ನೇ ಪಂದ್ಯ ಏಪ್ರಿಲ್ 20ರಂದು ಚೆನ್ನೈನಲ್ಲಿ ನಡೆಯಲಿದೆ. ಈ ಹೋರಾಟದಲ್ಲಿ ಐಪಿಎಲ್ ನ ಬಲಿಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಮೇಲ್ನೋಟಕ್ಕೆ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಿಂತ ಒಂದು ಹೆಜ್ಜೆ ಮುಂದಿದೆ. ಅಂಕಿ ಅಂಶಗಳ ಪ್ರಕಾರ ಮುಂಬೈ ಇಂಡಿಯನ್ಸ್ 16 ಬಾರಿ ಗೆದ್ರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ 12 ಬಾರಿ ಮುಂಬೈ ವಿರುದ್ಧ ಗೆಲುವಿನ ನಗೆ ಬೀರಿದೆ. ಕಳೆದ ಐಪಿಎಲ್ ಫೈನಲ್ ನಲ್ಲೂ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಈಗಾಗಲೇ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಒಂದು ಪಂದ್ಯವನ್ನು ಸೋತಿದೆ. ರನ್ ಧಾರಣೆಯ ಆಧಾರದಲ್ಲಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಲ್ಲಿದೆ.
ಇನ್ನು ಮುಂಬೈ ಇಂಡಿಯನ್ಸ್ ಕೂಡ ಅಷ್ಟೇ. ಉದ್ಘಾಟನಾ ಪಂದ್ಯದಲ್ಲಿ ಸೋತಿರುವ ಮುಂಬೈ ತಂಡ ನಂತರದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದೆ. ರನ್ ಧಾರಣೆಯ ಆಧಾರದಲ್ಲಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಇನ್ನು ಉಭಯ ತಂಡಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಅನ್ಸುತ್ತೆ. ವಿನ್ನಿಂಗ್ ಕಾಂಬಿನೇಷನ್ ನನ್ನು ಮುಂದುವರಿಸಿಕೊಂಡು ಹೋಗುವ ಸಾಧ್ಯತೆಗಳು ಹೆಚ್ಚು.
mumbai indians ipl 2021 saakshatvಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶಿಖರ್ ಧವನ್, ಪೃಥ್ವಿಶಾ, ನಾಯಕ ರಿಷಬ್ ಪಂತ್ ಪ್ರಮುಖ ಆಧಾರ ಸ್ತಂಭಗಳು. ಸ್ಟೀವನ್ ಸ್ಮಿತ್ ಫಾರ್ಮ್ ಕಂಡುಕೊಳ್ಳಬೇಕಿದೆ. ಇನ್ನು ಮಾರ್ಕಸ್ ಸ್ಟೋನಿಸ್, ಲಲಿತ್ ಯಾದವ್ ಆಲ್ ರೌಂಡ್ ಪ್ರದರ್ಶನ ನೀಡುತ್ತಿದ್ದಾರೆ. ಹಾಗೇ ಬೌಲಿಂಗ್ ನಲ್ಲಿ ಕಾಗಿಸೊ ರಬಾಡ, ಕ್ರಿಸ್ ವೋಕ್ಸ್ ಮತ್ತು ಅವೇಶ್ ಖಾನ್ ವೇಗದ ದಾಳಿಯ ಉಸ್ತುವಾರಿಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ. ಅಮಿತ್ ಮಿಶ್ರಾ ಮತ್ತು ಆರ್. ಅಶ್ವಿನ್ ಅವರ ಅನುಭವ ತಂಡಕ್ಕೆ ಪ್ಲಸ್ ಆಗಲಿದೆ.
ಇನ್ನು ಮುಂಬೈ ತಂಡದಿಂದ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಪ್ರದರ್ಶನ ಬಂದಿಲ್ಲ. ರೋಹಿತ್, ಕ್ವಿಂಟನ್ ಡಿ ಕಾಕ್, ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶಾನ್ ಸ್ಥಿರ ಪ್ರದರ್ಶನ ನೀಡುತ್ತಿಲ್ಲ.ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿಲ್ಲ. ಕೃನಾಲ್ ಪಾಂಡ್ಯ ಮತ್ತು ಕಿರಾನ್ ಪೊಲಾರ್ಡ್ ಮತ್ತಷ್ಟು ಪರಿಣಾಮಕಾರಿಯಾದ್ರೆ ಡೆಲ್ಲಿ ತಂಡಕ್ಕೆ ಅಪಾಯ ತಪ್ಪಿದ್ದಲ್ಲ.
ಹಾಗೇ ಬೌಲಿಂಗ್ ನಲ್ಲಿ ಜಸ್ಪ್ರಿತ್ ಬೂಮ್ರಾ ಮತ್ತು ಟ್ರೆಂಟ್ ಬೌಲ್ಟ್, ಆಡಮ್ ಮಿಲ್ನೆ, ರಾಹುಲ್ ಚಾಹರ್ ಅದ್ಭುತ ಲಯದಲ್ಲಿದ್ದಾರೆ.
ಒಟ್ಟಿನಲ್ಲಿ ಬಲಿಷ್ಠ ತಂಡಗಳ ಮುಖಾಮುಖಿಯಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

rishab pant rohit sharma ipl 2021 saakshatvಮುಂಬೈ ಸಂಭವನೀಯ ತಂಡ
ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್, ಹಾರ್ದಿಕ್ ಪಾಂಡ್ಯ, ಕಿರಾನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ರಾಹುಲ್ ಚಾಹರ್, ಆಡಮ್ ಮಿಲ್ನೆ, ಜಸ್ಪ್ರಿತ್ ಬೂಮ್ರಾ, ಟ್ರೆಂಟ್ ಬೌಲ್ಟ್

ಡೆಲ್ಲಿ ಕ್ಯಾಪಿಟಲ್ಸ್ ಸಂಭವನೀಯ ತಂಡ
ರಿಷಬ್ ಪಂತ್ (ನಾಯಕ), ಶಿಖರ್ ಧವನ್, ಪೃಥ್ವಿ ಶಾ, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೋನಿಸ್, ಲಲಿತ್ ಯಾದವ್, ಕ್ರಿಸ್ ವೋಕ್ಸ್, ಆರ್. ಅಶ್ವಿನ್, ಕಾಗಿಸೋ ರಬಾಡ, ಆವೇಶ್ ಖಾನ್, ಅಮಿತ್ ಮಿಶ್ರಾ. \\

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd