ಮತ್ತೆ ಐಪಿಎಲ್ ಮೆಗಾ ಹರಾಜು ಮುಂದಕ್ಕೆ..?
IPL 15ನೇ ಆವೃತ್ತಿಗೆ ಪ್ರಿಪರೇಷನ್ಗಳು ಜೋರಾಗುತ್ತಿವೆ. ಹಿಂದಿನ 8 ಫ್ರಾಂಚೈಸಿಗಳ ಜೊತೆ ಹೊಸ ಎರಡು ಫ್ರಾಂಚೈಸಿಗಳ ಸೇರ್ಪಡೆ ಟೂರ್ನಿಯನ್ನು ಇನ್ನಷ್ಟು ರೋಚಕವಾಗಿಸಿದೆ. ಈ ವರ್ಷದ ಐಪಿಎಲ್ ಆರಂಭಕ್ಕೆ ಮುನ್ನ ಆಟಗಾರರ ಮೆಗಹಾ ಹರಾಜು ಕೂಡ ನಡೆಯಲಿರುವುದು ರೋಚಕತೆಯನ್ನು ಹೆಚ್ಚಿಸಿದೆ. ಆಟಗಾರರ ಹರಾಜು ಪ್ರಕ್ರಿಯೆಗೂ ಮುನ್ನ ಹಳೆದ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ಉಳಿಸಿಕೊಂಡಿವೆ. ಹೊಸ ಫ್ರಾಂಚೈಸಿಗಳಿಗೆ ಹರಾಜು ಲಿಸ್ಟ್ ನಲ್ಲಿರುವ ಆಟಗಾರರ ಪೈಕಿ ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಲಾಗಿದೆ.
ಆಟಗಾರರ ಮೆಗಾ ಹರಾಜು ಪ್ರಕ್ರಿಯೆಗೆ ನಿಗದಿ ಮಾಡಿದ್ದ ದಿನಾಂಕವನ್ನು ಬಿಸಿಸಿಐ ಮುಂದೂಡಿದೆ ಎಂದು ಹೇಳಲಾಗುತ್ತಿದೆ. ಈಗಿನ ಮಾಹಿತಿ ಪ್ರಕಾರ ಮೆಗಾ ಆಕ್ಷನ್ ಜನವರಿ ಎರಡನೇ ವಾರದಲ್ಲಿ ಜರುಗಲಿದೆ. ಐಪಿಎಲ್ 2022 ಟೂರ್ನಿಯಲ್ಲಿ ಅಹ್ಮದಾಬಾದ್ ಮತ್ತು ಲಖನೌ ಫ್ರಾಂಚೈಸಿಗಳು ಹೊಸ ತಂಡಗಳಾಗಿ ಕಣಕ್ಕಿಳಿಯಲಿದ್ದು, ಈ ತಂಡಗಳಿಗೆ ಡಿಸೆಂಬರ್ 25ರವರೆಗೆ ಹರಾಜಿಗೆ ಬಿಡುಗಡೆ ಆಗಿರುವ ಆಟಗಾರರಲ್ಲಿ ಗರಿಷ್ಠ ಮೂವರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಅವಕಾಶವಿದೆ. ಹೀಗಾಗಿ ಮುಂದಿನ ಜನವರಿ ಎರಡನೇ ವಾರದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.
ಯುವ ಬ್ಯಾಟರ್ ಗಳ ಅಬ್ಬರ – ಶಿಖರ್ ಧವನ್ ಸ್ಥಾನಕ್ಕೆ ಕುತ್ತು…
ಹೊಸ ಫ್ರಾಂಚೈಸಿಗಳಿಗೆ ಒಟ್ಟು 34 ಕೋಟಿ ರೂಪಾಯಿಗಳಲ್ಲಿ ಮೂವರು ಆಟಗಾರರನ್ನು ಖರೀದಿ ಮಾಡಲು ಅವಕಾಶವಿದೆ. ಮೊದಲ ಆಟಗಾರನಿಗೆ 15 ಕೋಟಿ ರೂ., 2ನೇ ಆಟಗಾರನಿಗೆ 11 ಕೋಟಿ ರೂ. ಹಾಗೂ 3ನೇ ಆಟಗಾರನಿಗೆ 8 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಈ ಮೂಲಕ ಈಗಾಗಲೇ ಹಳೆಯ ಫ್ರಾಂಚೈಸಿಗಳು ರಿಲೀಸ್ ಮಾಡಿರುವ ಇಬ್ಬರು ಭಾರತೀಯ ಆಟಗಾರರು ಪ್ಲಸ್ ಒಬ್ಬ ವಿದೇಶಿ ಆಟಗಾರನನ್ನು ನೂತನ ತಂಡಕ್ಕೆ ಆಯ್ಕೆ ಮಾಡಿಕೊಳ್ಳಬಹುದು. ಒಟ್ಟಿನಲ್ಲಿ ಐಪಿಎಲ್ ಟೂರ್ನಿಗೂ ಮುನ್ನ ಮೆಗಾ ಹರಾಜು ಸಾಕಷ್ಟು ಕುತೂಹಲ ಕೆರಳಿಸಿದೆ.