ಬಲಿಷ್ಠ ಮುಂಬೈಗೆ ಹೈದರಾಬಾದ್ ಸವಾಲ್ : Dream11 Team Prediction

1 min read
mi

ಬಲಿಷ್ಠ ಮುಂಬೈಗೆ ಹೈದರಾಬಾದ್ ಸವಾಲ್ : Dream11 Team Prediction

ಕೊರೊನಾ ವಕ್ರದೃಷ್ಠಿ ಐಪಿಎಲ್ ಮೇಲೆ ಬೀರಿದ್ದು, ಈಗಾಗಲೇ ಎರಡು ಮ್ಯಾಚ್ ಗಳು ಮುಂದೂಡಿಕೆಯಾಗಿವೆ. ಇದರ ಮಧ್ಯೆ ಇವತ್ತು ಬಲಿಷ್ಠ ಮುಂಬೈ ಇಂಡಿಯಲ್ಸ್ ಮತ್ತು ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಗೆಲುವಿನ ಟ್ಯ್ರಾಕ್ ಗೆ ಮರಳಿರುವ ಮುಂಬೈಗೆ ಸೋತು ಸುಣ್ಣವಾಗಿರುವ ಹೈದರಾಬಾದ್ ತಂಡ ಸವಾಲ್ ಹಾಕಿದ್ದು, ಯಾರು ಗೆಲ್ಲಲಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ.

ಹೆಡ್ ಟು ಹೆಡ್

ಐಪಿಎಲ್ ನಲ್ಲಿ ಈ ಎರಡೂ ತಂಡಗಳು ಈವರೆಗೂ 17 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಮುಂಬೈ 9 ಬಾರಿ, ಹೈದರಾಬಾದ್ 8 ಬಾರಿ ಗೆದ್ದಿವೆ.

ಗ್ರೌಂಡ್ ರಿಪೋರ್ಟ್

ಇಂದಿನ ಪಂದ್ಯ ದೆಹಲಿಯಲ್ಲಿ ನಡೆಯಲಿದೆ. ಇದು ಬ್ಯಾಟಿಂಗ್ ಫ್ರೆಂಡ್ಲಿ ಪಿಚ್ ಆಗಿದ್ದು, ಚೇಸ್ ಮಾಡೋರಿಗೆ ಹೆಚ್ಚು ಅನುಕೂಲಕರವಾಗಿರುತ್ತೆ. ಇಲ್ಲಿ ಟಾಸ್ ಗೆದ್ದವರು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ.

ಬಲಾಬಲಾಗಳೇನು

ಎಸ್ ಆರ್ ಹೆಚ್ : ಬ್ಯಾಟಿಂಗ್, ಬೌಲಿಂಗ್ ಎರಡಲ್ಲೂ ತಂಡಕ್ಕೆ ಸಮಸ್ಯೆಗಳಿವೆ. ಮುಖ್ಯವಾಗಿ ಮಿಡಲ್ ಆರ್ಡರ್ ನಲ್ಲಿ ಯಾರು ತಂಡಕ್ಕೆ ನೆರವಾಗದೇ ಇರೋದು. ಕೊನೆಯ ಐದು ಓವರ್ ಗಳಲ್ಲಿ ಮಿಂಚುವ ಆಟಗಾರನ ಕೊರತೆ ತಂಡಕ್ಕೆ ಕಾಡುತ್ತಿದೆ. ಪ್ರಮುಖವಾಗಿ ಈ ಬಾರಿ ಎಸ್ ಆರ್ ಹೆಚ್ ಗೆ ಬೌಲಿಂಗ್ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಬೌಲಿಂಗ್ ನಲ್ಲಿ ಯಾರೂ ಒಳ್ಳೆ ಟಚ್ ನಲ್ಲಿ ಕಾಣದೇ ಇರೊದು ತಂಡಕ್ಕೆ ಸೆಟ್ ಬ್ಯಾಕ್ ಆಗುತ್ತಿದೆ.

mi

ಮುಂಬೈ ತಂಡದ ವಿಚಾರಕ್ಕೆ ಬಂದ್ರೆ ಬ್ಯಾಟಿಂಗ್ ಓಕೆ ಓಕೆ ಆಗಿದೆ. ತಂಡದ ಪ್ರಮುಖ ಬ್ಯಾಟ್ಸ್ ಮೆನ್ ಗಳು ಪಾರ್ಮ್ ನಲ್ಲಿಲ್ಲ. ಆದ್ರೂ ಒಬ್ಬರ ಬಿಗ್ ಇನ್ನಿಂಗ್ಸ್ ಮೇಲೆ ತಂಡ ಅವಲಂಬನೆ ಆಗಿದೆ.ಇನ್ನು ಬೌಲಿಂಗ್ ವಿಚಾರಕ್ಕೆ ಬಂದ್ರೆ ಬೂಮ್ರಾ ದುಬಾರಿ ಆಗುತ್ತಿರುವುದು ತಂಡದ ತಲೆನೋವಿಗೆ ಕಾರಣವಾಗಿದೆ. ಉಳಿದಂತೆ ರಾಹುಲ್ ಚಹಾರ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಒಟ್ಟಿನಲ್ಲಿ ಮುಂಬೈ ಈ ಹಿಂದಿನಷ್ಟು ಬಲಿಷ್ಠವಾಗಿ ಕಾಣುತ್ತಿಲ್ಲ.

ಸಂಭವ್ಯ ತಂಡಗಳು ಹೀಗರಬಹುದು

ಎಸ್ ಆರ್ ಹೆಚ್ :
ಜಾನಿ ಬೆನ್ ಸ್ಟೋ, ಮನೀಶ್ ಪಾಂಡೆ, ವಿಲಿಯನ್ಸನ್, ಕೇಧಾರ್ ಜಾಧವ್, ವಿಜಯ್ ಶಂಖರ್, ಜೇಸನ್ ಹೋಲ್ಡರ್, ಅಬ್ದುಲ್ ಸಮಾದ್, ರಶಿದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಕಲೀಲ್ ಅಹ್ಮದ್.

ಮುಂಬೈ ಇಂಡಿಯನ್ಸ್ :
ಡಿ ಕಾಕ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ಧಿಕ್ ಪಾಂಡ್ಯ, ಕಿರಾನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಜೆಮ್ಮಿ ನಿಶಾಮ್, ಟ್ರೆಂಟ್ ಬೋಲ್ಟ್, ರಾಹುಲ್ ಚಹಾರ್, ದವನ್ ಕುಲಕರ್ಣಿ, ಬೂಮ್ರಾ.

ಫ್ಯಾಂಟಿಸಿ ಪಿಕ್ಸ್

ವಿಕೆಟ್ ಕೀಪರ್ : ನಾಜಿ ಬೈರ್ ಸ್ಟೋ( ನಾಯಕ) , ಡಿಕಾಕ್
ಬ್ಯಾಟ್ಸ್ ಮೆನ್ : ರೋಹಿತ್ ಶಮಾ, ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್, ವಿಲಿಯಮ್ಸನ್,
ಆಲ್ ರೌಂಡರ್ : ಕಿರಾನ್ ಪೋಲಾರ್ಡ್, ಕೃನಾನ್ ಪಾಂಡ್ಯ
ಬೌಲರ್ಸ್ : ಸಂದೀಪ್ ಶರ್ಮಾ ( ಉಪನಾಯಕ) , ರಶೀದ್ ಖಾನ್, ರಾಹುಲ್ ಚಹಾರ್.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd