ಐಪಿಎಲ್ ಸೆಕೆಂಡ್ ಇನ್ನಿಂಗ್ಸ್​​ಗೆ ಫುಲ್ ಪ್ರಿಪರೇಷನ್, ಆರ್​ಸಿಬಿ ಪ್ಲೇ ಆಫ್ ದಾರಿ ಹೇಗೆ..? ಆಟ ಆರಂಭಕ್ಕೂ ಮುನ್ನವೇ ಸನ್ ರೈಸರ್ಸ್ ಔಟ್..?

1 min read

ಇಂಡಿಯನ್​​ ಪ್ರೀಮಿಯರ್​​ ಲೀಗ್​​ನ 14ನೇ ಆವೃತ್ತಿಯ 2ನೇ ಇನ್ನಿಂಗ್ಸ್​​​​ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೂಪರ್​​ ಸಂಡೇಯ ಸೂಪರ್​​ ಮ್ಯಾಚ್​​ ಮೂಲಕ ಸೆಕೆಂಡ್​ ಇನ್ನಿಂಗ್ಸ್​​ ಆರಂಭವಾಗಲಿದೆ. ಹಾಲಿ ಚಾಂಪಿಯನ್​​ ಮುಂಬೈ ಇಂಡಿಯನ್ಸ್​​ ಮತ್ತು ಮಾಜಿ ಚಾಂಪಿಯನ್​​​ ಚೆನ್ನೈ ಸೂಪರ್​​ ಕಿಂಗ್ಸ್​​ ದುಬೈ  ಮೈದಾನದಲ್ಲಿ ಕಣಕ್ಕಿಳಿಯುವ ಮೂಲಕ ಆಟಕ್ಕೆ ರಿ ಸ್ಟಾರ್ಟ್​ ಸಿಗಲಿದೆ. 2ನೇ ಇನ್ನಿಂಗ್ಸ್​ ನ ಆರಂಭಕ್ಕೆ ಮುನ್ನವೇ ಪ್ಲೇ ಆಫ್​​​ ಲೆಕ್ಕಾಚಾರ ಜೋರಾಗಿದೆ.

ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​​ ಮುಂದಿದೆ. 8 ಪಂದ್ಯಗಳನ್ನು ಆಡಿ  12 ಅಂಕ ಸಂಪಾದಿಸಿದೆ. ಚೆನ್ನೈ ಸೂಪರ್​​ ಕಿಂಗ್ಸ್​​, ರಾಯಲ್​​ ಚಾಲೆಂಜರ್ಸ್​ ಬೆಂಗಳೂರು   ತಲಾ 7 ಪಂದ್ಯಗಳನ್ನು ಆಡಿ 10 ಅಂಕಗಳನ್ನು ಪಡೆದುಕೊಂಡಿವೆ.  ರನ್​​ರೇಟ್​​ನಲ್ಲಿ ಚೆನ್ನೈ ಸಾಕಷ್ಟು ಮುಂದಿದೆ. ಮುಂಬೈ ಇಂಡಿಯನ್ಸ್​​ 8 ಅಂಕ ಪಡೆದುಕೊಂಡಿದೆ. ​ರಾಜಸ್ಥಾನ್​ ರಾಯಲ್ಸ್​​, ಪಂಜಾಬ್​​ ಕಿಂಗ್ಸ್​​​ 6 ಅಂಕ ಪಡೆದುಕೊಂಡಿದ್ದರೂ ರನ್​​ ರೇಟ್​ ವ್ಯತ್ಯಾಸ ಇದೆ. ಪಂಜಾಬ್​​ ಒಂದು ಪಂದ್ಯ ಹೆಚ್ಚೇ ಆಡಿದೆ. ಕೊಲ್ಕತ್ತಾ ನೈಟ್​​ ರೈಡರ್ಸ್​  ಮತ್ತು ಸನ್​​ ರೈಸರ್ಸ್​ ಹೈದ್ರಾಬಾದ್​​​​​ ಕೊನೆಯ ಎರಡು ಸ್ಥಾನ ಪಡೆದುಕೊಂಡಿವೆ.

ಪಾಯಿಂಟ್ ಟೇಬಲ್​ನಲ್ಲಿ ಟಾಪ್​ನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇನ್ನು ಆರು ಪಂದ್ಯಗಳು ಬಾಕಿ ಉಳಿದಿವೆ. ಇದರಲ್ಲಿ ಎರಡು ಪಂದ್ಯ ಗೆದ್ದರೆ ಸುಲಭವಾಗಿ ಪ್ಲೇ ಆಫ್​ಗೆ ಲಗ್ಗೆಯಿಡಲಿದೆ. ಅಲ್ಲದೆ ನಂಬರ್ ಒನ್ ಸ್ಥಾನದಲ್ಲೇ ಭದ್ರವಾಗಿ ನೆಲೆಯೂರುವ ಅವಕಾಶವಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೂಡ ಏಳು ಪಂದ್ಯಗಳು ಬಾಕಿ ಉಳಿದಿವೆ. ಇದರಲ್ಲಿ ಕೇವಲ ಮೂರು ಪಂದ್ಯಗಳನ್ನು ಗೆದ್ದರೆ ಪ್ಲೇ ಆಫ್ ಪ್ರವೇಶಿಸಲಿದೆ. ಹೀಗಾದಲ್ಲಿ ಧೋನಿ ಪಡೆ ದಾಖಲೆಯ 11ನೇ ಬಾರಿ ಪ್ಲೇ ಆಫ್ ಪ್ರವೇಶಿಸಿದಂತೆ ಆಗುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ 7 ಪಂದ್ಯಗಳು ಬಾಕಿ ಇದೆ. ಇದರಲ್ಲಿ ಮೂರು ಪಂದ್ಯವನ್ನು ಗೆದ್ದರೆ ಸುಲಭವಾಗಿ ಪ್ಲೇ ಆಫ್ ಟಿಕೆಟ್ ದೊರೆಯುತ್ತದೆ. ಆದರೆ ಮೊದಲ ಮತ್ತು ಎರಡನೇ ಸ್ಥಾನಕ್ಕೆ ಈ ಮೂರು ತಂಡಗಳು ದೊಡ್ಡ ಪೈಪೋಟಿ ಮಾಡುತ್ತಿವೆ.

ಮುಂಬೈ ಇಂಡಿಯನ್ಸ್   ಪ್ಲೇ ಆಫ್ ಹಾದಿ ಸುಗಮವಾಗಿಲ್ಲ. ಬಾಕಿಯಿರುವ ಏಳು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲ್ಲಬೇಕಾದ ಒತ್ತಡದಲ್ಲಿದೆ. ಐಪಿಎಲ್ ಇತಿಹಾಸದಲ್ಲಿ ದಾಖಲೆಯ ಐದು ಬಾರಿ ಟ್ರೋಫಿ ಗೆದ್ದಿರುವ ಮುಂಬೈ ಈ ಬಾರಿ ಕಳಪೆ ಆರಂಭ ಪಡೆದುಕೊಂಡಿತ್ತು. ನಂತರ ಕಮ್​ಬ್ಯಾಕ್ ಮಾಡಿತ್ತು. ಆದರೆ, ಎರಡನೇ ಚರಣದಲ್ಲಿ ಯಾವರೀತಿ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ರಾಜಸ್ಥಾನ್ ರಾಯಲ್ಸ್ ಕೂಡ ಬಾಕಿಉಳಿದಿರುವ ಏಳು ಪಂದ್ಯಗಳಲ್ಲಿ 4 ಪಂದ್ಯ ಗೆದ್ದರೆ ಮಾತ್ರ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ. ಪಂಜಾಬ್ ಕಿಂಗ್ಸ್​ಗೆ ಉಳಿದಿರುವ 6 ಪಂದ್ಯಗಳಲ್ಲಿ ಐದು ಪಂದ್ಯ ಗೆಲ್ಲಬೇಕು. ಅಂತೆಯೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆಡಲಿರುವ ಏಳು ಪಂದ್ಯಗಳಲ್ಲಿ ಐದು ಪಂದ್ಯವನ್ನು ಗೆದ್ದರೆ ಮಾತ್ರ ಪ್ಲೇ ಆಫ್ ಟಿಕೆಟ್ ದೊರೆಯಲಿದೆ. ಇತ್ತ ಸನ್​ರೈಸರ್ಸ್ ಹೈದರಾಬಾದ್ ಸ್ಥಿತಿ ತೂಗುಯ್ಯಾಲೆಯಲ್ಲಿದೆ. ಬಾಕಿ ಉಳಿದಿರುವ ಏಳು ಪಂದ್ಯಗಳಲ್ಲಿ ಆರರಲ್ಲಿ ಗೆದ್ದರೆ ಮಾತ್ರ ಹೈದರಾಬಾದ್ ತಂಡ ಪ್ಲೇ ಆಫ್​ಗೆ ಪ್ರವೇಶಿಸುವ ಅವಕಾಶವಿದೆ.

ಆಟ ಆರಂಭಕ್ಕೆ ಮುನ್ನೇ ಲೆಕ್ಕಾಚಾರದ ಮೊರೆ ಹೋಗಿರುವ ತಂಡಗಳು ಯುಎಇಲ್ಲಿ ಅದ್ಭುತ ಆರಂಭವನ್ನು ನಿರೀಕ್ಷೆ ಮಾಡುತ್ತಿವೆ. ಸನ್​​ ಸೈರರ್ಸ್​ ಹೈದ್ರಾಬಾದ್​​ ಅಂತೂ ಒಂದು ಪಂದ್ಯ ಸೋತರೂ ಟೂರ್ನಿಯಿಂದ ಹೊರ ಹೋದಂತೆಯೇ. ಒಟ್ಟಿನಲ್ಲಿ  IPL ಅಂದ್ರೆ ರೋಚಕತೆ ಅನ್ನುವುದನ್ನು ಮತ್ತೆ ಮತ್ತೆ ಬಿಂಬಿಸಲು ಯುಎಇ ಸಜ್ಜಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd