ನೀಲಿನಾ, ಹಳದಿನಾ…?ಫಸ್ಟ್ ಮ್ಯಾಚ್ ಗೆಲ್ಲೋದು ಇವರೇನಾ..?

1 min read

ಐಪಿಎಲ್​​ 2ನೇ ಇನ್ನಿಂಗ್ಸ್​​ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಯುಎಇ ಆವೃತ್ತಿಯ ಮೊದಲ ಪಂದ್ಯ ದುಬೈ ಇಂಟರ್​​ ನ್ಯಾಷನಲ್​​ ಸ್ಟೇಡಿಯಂನಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್​​ ಮುಂಬೈ ಮತ್ತು ಮಾಜಿ ಚಾಂಪಿಯನ್​ ಚೆನ್ನೈ ಸೂಪರ್​​ ಕಿಂಗ್ಸ್​​​ ನಡುವೆ ಮೊದಲ ಮ್ಯಾಚ್​​ ನಡೆಯಲಿದೆ. ಹೀಗಾಗಿ ಗೆಲ್ಲೋದು ನೀಲಿನಾ, ಹಳದಿನಾ ಅನ್ನೋ ಕುತೂಹಲ ಹೆಚ್ಚಿದೆ.

ಎರಡೂ ತಂಡಗಳಿಗೂ ಇದು 8ನೇ ಪಂದ್ಯ. ಅಂಕಪಟ್ಟಿಯಲ್ಲಿ ಯೆಲ್ಲೋ ಬ್ರಿಗೇಡ್​​ 10 ಅಂಕ ಸಂಪಾದಿಸಿ ಉತ್ತಮ ರನ್​​ ರೇಟ್​​ನೊಂದಿಗೆ 2ನೇ ಸ್ಥಾನದಲ್ಲಿದೆ. ಬ್ಲೂ ಬಾಯ್ಸ್​​​ ಮುಂಬೈ ಇಂಡಿಯನ್ಸ್​​​ 7 ಪಂದ್ಯಗಳಿಂದ 8 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಚೆನ್ನೈ ಈ ಪಂದ್ಯ ಗೆದ್ದರೆ 12 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ಜಿಗಿಯಲಿದೆ. ಮುಂಬೈ ಈ ಪಂದ್ಯ ಗೆದ್ದರೆ 10 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಏರಲಿದೆ.

ಟೀಮ್​ ಕಾಂಬಿನೇಷನ್​​​ ಕಡೆ ಗಮನ ಕೊಟ್ರೆ ನೀಲಿನಾ, ಹಳದಿನಾ ಅನ್ನೋ ಮಟ್ಟಕ್ಕಿದೆ. ಚೆನ್ನೈ ರುತುರಾಜ್​​ ಗಾಯಕ್ವಾಡ್​​​​ ಮತ್ತು ಮೊಯಿನ್​​ ಆಲಿ ಜೊತೆ ಆರಂಭ ಮಾಡುವ ಸಾಧ್ಯತೆ ಇದೆ. ಫಾಫ್​​ ಫಿಟ್​​ ಆಗಿದ್ದರೆ ಮೊಯಿನ್​​​ ಕೆಳಕ್ರಮಾಂಕದಲ್ಲಿ ಆಡಬಹುದು. ಸುರೇಶ್​​ ರೈನಾ ಮತ್ತು ಅಂಬಟಿ ರಾಯುಡು ಟಾಪ್​​ ಆರ್ಡರ್​​ನ ರಾಕೆಟ್​​ ಗಳು. ಕ್ಯಾಪ್ಟನ್​​ ಎಂ.ಎಸ್​.ಧೋನಿ ಮತ್ತು ರವೀಂದ್ರ ಜಡೇಜಾ ಸಿಕ್ಸರ್​​ ಹಬ್ಬಕ್ಕೆ ಚಾಲನೆ ನೀಡುವ ತಯಾರಿಯಲ್ಲಿದ್ದಾರೆ. ಡ್ವೈನ್​​ ಬ್ರಾವೋ ಕೆರಿಬಿಯನ್​ ಪ್ರೀಮಿಯರ್​ ಲೀಗ್​​ ನಲ್ಲಿ ತೋರಿದ ಪ್ರದರ್ಶನವನ್ನು ಇಲ್ಲೂ ಮುಂದುವರೆಸಿದ್ರೂ ಚೆನ್ನೈ ಆರಾಮವಾಗಿರಬಹುದು. ಸ್ಯಾಮ್​ ಕರ್ರನ್​​ ಎಲ್ಲಿಬೇಕೋ ಅಲ್ಲಿ ಬ್ಯಾಟಿಂಗ್​ ಮಾಡಬಹುದು. ಶಾರ್ದೂಲ್​​ ಠಾಕೂರ್​ ಮತ್ತು ದೀಪಕ್​​ ಚಹರ್​ ಕೂಡ ಸಿಕ್ಸರ್,​​ ಬೌಂಡರಿ ಸಿಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಲುಂಗಿ ಎನ್​ ಗಿಡಿ ಒಬ್ರೇ ಬ್ಯಾಟಿಂಗ್​​ ನಲ್ಲಿ ಹೆಸರು ಮಾಡಿಲ್ಲ. ಚೆನ್ನೈ ಬೌಲಿಂಗ್​ ಕಾಂಬಿನೇಷನ್​ ಕೂಡ ಸಖರ್​ ಇದೆ. ಲುಂಗಿ, ಶಾರ್ದೂಲ್​​ ದೀಪಕ್​​ ಮತ್ತು ಸ್ಯಾಮ್​ ಕರ್ರನ್​​ ವೇಗದ ಸಾರಥಿಗಳು. ಡ್ವೈನ್​​ ಬ್ರಾವೋ ಸ್ಲೋವರ್​​ ಮ್ಯಾಜಿಕ್​​ ದುಬೈನಲ್ಲಿ ತುಂಬಾ ಪ್ರಮುಖವಾಗಿರುತ್ತದೆ. ಜಡೇಜಾ ಮತ್ತು ಮೊಯಿನ್​​ ಆಲಿಯ ಸ್ಪಿನ್​ ಮ್ಯಾಜಿಕ್​​ ಬಗ್ಗೆಯೂ ಸಖತ್​ ನಂಬಿಕೆ ಇದೆ.

ಮುಂಬೈ ಇಂಡಿಯನ್ಸ್​​ ಕೂಡ ಸಾಮಾನ್ಯ ತಂಡವಲ್ಲ. ರೋಹಿತ್​​, ಕ್ವಿಂಟಾನ್​​ ಡಿ ಕಾಕ್​​, ಇಶಾನ್​ ಕಿಶಾನ್​​, ಸೂರ್ಯ ಕುಮಾರ್​​ ಯಾದವ್​  ಮತ್ತು ಸೌರಭ್​ ತಿವಾರಿ ಬ್ಯಾಟಿಂಗ್​ ಟ್ರಂಪ್​ ಕಾರ್ಡ್​ ಗಳು. ಕೈರಾನ್​ ಪೊಲ್ಲಾರ್ಡ್​, ಹಾರ್ಧಿಕ್​ ಪಾಂಡ್ಯ ಮತ್ತು ಕ್ರುನಾಲ್​ ಪಾಂಡ್ಯ ಬೌಂಡರಿ, ಸಿಕ್ಸರ್​​ ಗಳಿಗೆ ಫೇಮಸ್​​. ಇವರ ಜೊತೆಗೆ ಜೇಮ್ಸ್​ ನಿಶಾಮ್​​​​ ಬಲವೂ ಇದೆ.ರಾಹಲ್​ ಚಹರ್​, ಜಸ್ಪ್ರೀತ್​ ಬುಮ್ರಾ ಮತ್ತು ಟ್ರೆಂಟ್​ ಬೋಲ್ಡ್​​ ಎಲ್ಲಾ ಪಿಚ್​​​ ಗಳಲ್ಲೂ ಬ್ಯಾಟ್ಸ್​​ ಮನ್​​ಗಳಿಗೆ ಸವಾಲೊಡ್ಡುವುದು ಖಚಿತ.

ದುಬೈ ಇಂಟರ್​ ನ್ಯಾಷನಲ್​ ಸ್ಟೇಡಿಯಂ ಪಿಚ್​​​ ಸ್ಪಿನ್​​ ಫ್ರೆಂಡ್ಲಿ ಆಗಿದ್ದರೂ ಮೊದಲ ಪಂದ್ಯವಾಗಿರುವುದರಿಂದ ದೊಡ್ಡ ತಿರುವು ಸಿಗುವುದು ಸಂಶಯ. ಹೀಗಾಗಿ ಬೌಲಿಂಗ್​​ ವೇರಿಯೇಷನ್​​ ಹೊಂದಿರುವ ಬೌಲರ್​​ ಗಳು ಟ್ರಂಪ್​​ ಕಾರ್ಡ್​ ಆಗುವ ಸಾಧ್ಯತೆ ಹೆಚ್ಚಿದೆ. ಒಟ್ಟಿನಲ್ಲಿ ಐಪಿಎಲ್​​​​​​​​ ಧಮಾಕಾ ಆರಂಭವಾಗುತ್ತಿರುವುದು ಕ್ರಿಕೆಟ್​ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd