ಭಾರತದ ವಾಯುಪ್ರದೇಶದ ಮೂಲಕ ಸಂಚರಿಸುತ್ತಿದ್ದ ಇರಾನ್ ವಿಮಾನಕ್ಕೆ ಬಾಂಬ್ ಸ್ಫೋಟದ ಬೆದರಿಕೆ ಹಾಕಲಾಗಿದೆ. ವಿಮಾನ ಇರಾನಿಂದ ಚೀನಾಗೆ ತೆರಳುತ್ತಿತ್ತು.
ಇರಾನಿನ ವಿಮಾನವು ದೆಹಲಿ ಮತ್ತು ಜೈಪುರದಲ್ಲಿ ಇಳಿಯಲು ಅನುಮತಿ ಕೋರಿತಾದರೂ ಭಾರತ ಸರ್ಕಾರ ಅವಕಾಶ ನೀಡಲಿಲ್ಲ.
ಇರಾನ್ ರಾಜಧಾನಿ ಟೆಹ್ರಾನ್‌ನಿಂದ ಬರುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆಯ ಕುರಿತು ಬೆಳಿಗ್ಗೆ 9:20 ಕ್ಕೆ ಕರೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ವೇಳೆ ಭಾರತೀಯ ವಾಯುಪ್ರದೇಶದಲ್ಲಿದ್ದ ಕಾರಣ ಏರ್ ಟ್ರಾಫಿಕ್ ಕಂಟ್ರೋಲ್ ಇರಾನ್ – ಚೀನಾ ವಿಮಾನದೊಂದಿಗೆ ಮಾಹಿತಿ ಹಂಚಿಕೊಂಡಿದೆ.
ವಿಮಾನದಲ್ಲಿ ಬಾಂಬ್ ಬಗ್ಗೆ ಮಾಹಿತಿ ಪಡೆದ ನಂತರ ವಾಯುಪಡೆಯ ಸುಖೋಯ್ ಫೈಟರ್ ಜೆಟ್‌ಗಳನ್ನ ನಿಯೋಜಿಸಿ ನಿಗಾ ಇಡಲಾಗಿತ್ತು. ಈ ಯುದ್ಧ ವಿಮಾನಗಳು ಪಂಜಾಬ್ ಮತ್ತು ಜೋಧ್‌ಪುರ ವಾಯುನೆಲೆಗಳಿಂದ ಟೇಕಾಫ್ ಆಗಿವೆ. ಜೆಟ್ ಗಳ ವಿಮಾನವನ್ನ ಬೆಂಗಾವಲು ಮಾಡಿ ಭಾರತದ ಗಡಿಯ ಹೊರಗೆ ಬಿಟ್ಟವು. ಇರಾನ್ ವಿಮಾನ ಭಾರತದ ವಾಯುಪ್ರದೇಶದ ಮೂಲಕ ಮ್ಯಾನ್ಮಾರ್ ಮತ್ತು ನಂತರ ಚೀನಾದ ಕಡೆಗೆ ಸಾಗಿದೆ.
ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ ಫ್ಲೈಟ್‌ರಾಡಾರ್ ಪ್ರಕಾರ, ಈ ವಿಮಾನವು (IRM081) ಇರಾನ್‌ನ ಟೆಹ್ರಾನ್‌ನಿಂದ ಚೀನಾದ ಗುವಾಂಗ್‌ಝೌಗೆ ಹೋಗುತ್ತಿದೆ. ಈ ವಿಮಾನವು ಮಹಾನ್ ಏರ್‌ಗೆ ಸೇರಿದೆ.
Iran flight: Indian Airspace; Bomb Threat China bound Iranian Plane | India China Iran