ಇಂಗ್ಲೆಂಡ್ ಡೈರಿ – ಕೆ.ಎಲ್. ರಾಹುಲ್ ಜೊತೆಯಲ್ಲಿದ್ದಾರಾ ಆತಿಯಾ ಶೆಟ್ಟಿ.. ?

1 min read
k.l. rahul athiya shetty saakshatv

ಇಂಗ್ಲೆಂಡ್ ಡೈರಿ – ಕೆ.ಎಲ್. ರಾಹುಲ್ ಜೊತೆಯಲ್ಲಿದ್ದಾರಾ ಆತಿಯಾ ಶೆಟ್ಟಿ.. ?

k.l. rahul athiya shetty saakshatvಕೆ.ಎಲ್. ರಾಹುಲ್ ಮತ್ತು ಆತಿಯಾ ಶೆಟ್ಟಿ ನಡುವಿನ ಪ್ರೀತಿ ಈಗ ಗುಟ್ಟಾಗಿ ಏನು ಉಳಿದಿಲ್ಲ. ಬಾಲಿವುಡ್ ನಟ ಸುನೀಲ್ ಶೆಟ್ಟಿಯವರ ಪುತ್ರಿ ಆತಿಯಾ ಶೆಟ್ಟಿ ಅವರು ಕೆ.ಎಲ್. ರಾಹುಲ್ ಜೊತೆ ಸುತ್ತಾಡುತ್ತಿರುವುದು ಹಳೆಯ ಸುದ್ದಿ.

ಇದೀಗ ಕೆ.ಎಲ್. ರಾಹುಲ್ ಅವರು ಇಂಗ್ಲೆಂಡ್ ನಲ್ಲಿದ್ದಾರೆ. ಜೂನ್ 18ರಿಂದ ಇಂಗ್ಲೆಂಡ್ ನ ಸೌತಾಂಪ್ಟನ್ ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ.
ಇನ್ನೊಂದೆಡೆ ಟೀಮ್ ಇಂಡಿಯಾ ಆಟಗಾರರ ಕುಟುಂಬದ ಸದಸ್ಯರು ಕೂಡ ಇಂಗ್ಲೆಂಡ್ ನಲ್ಲಿದ್ದಾರೆ. ಅದರ ಜೊತೆಗೆ ಕೆ.ಎಲ್. ರಾಹುಲ್ ಅವರ ಪ್ರೆಯಸಿ /ಸ್ನೇಹಿತೆ ಆತಿಯಾ ಶೆಟ್ಟಿ ಕೂಡ ಇಂಗ್ಲೆಂಡ್ ನಲ್ಲಿದ್ದಾರೆ ಅನ್ನೋ ಅನುಮಾನಗಳು ವ್ಯಕ್ತವಾಗಿವೆ.
ಅಂದ ಹಾಗೇ ಈ ಅನುಮಾನಕ್ಕೆ ಕಾರಣವಾಗಿದ್ದು ಆತಿಯಾ ಶೆಟ್ಟಿ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಹಾಕಿಕೊಂಡಿರುವ ಫೋಟೋ. ಈ ಫೋಟೋವನ್ನು ನೋಡಿದಾಗ ಅಭಿಮಾನಿಗಳು ಆತಿಯಾ ಶೆಟ್ಟಿ ಇಂಗ್ಲೆಂಡ್ ನಲ್ಲಿ ಕೆ.ಎಲ್. ರಾಹುಲ್ ಜೊತೆಗಿದ್ದಾರೆ ಎಂದು ಕಮೆಂಟ್ ಗಳನ್ನು ಹಾಕಿದ್ದಾರೆ. ಕಪ್ಪು ಬಿಳಿಪಿನ ಫೋಟೋ ಹಾಕೊಂಡಿದ್ದಾರೆ. ಆದ್ರೆ ಅಭಿಮಾನಿಗಳ ಅನುಮಾನಕ್ಕೆ ಕಾರಣವಾಗಿದ್ದು ಮತ್ತೊಂದು ಫೋಟೋ. ಕಳೆದ ಭಾನುವಾರ ಕೆ.ಎಲ್. ರಾಹುಲ್ ಕೂಡ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಫೋಟೋ ಹಂಚಿಕೊಂಡಿದ್ದರು.
k.l. rahul athiya shetty saakshatvಕೆ.ಎಲ್. ರಾಹುಲ್ ಮತ್ತು ಆತಿಯಾ ಶೆಟ್ಟಿ ಹಾಕೊಂಡಿರುವ ಎರಡು ಫೋಟೋಗಳು ಒಂದೇ ಜಾಗದಲ್ಲಿ ತೆಗೆದಂತಿದೆ.
ಒಟ್ಟಿನಲ್ಲಿ ಕೆ.ಎಲ್. ರಾಹುಲ್ ಮತ್ತು ಆತಿಯಾ ಶೆಟ್ಟಿ ಈಗ ಲವ್ ಬಡ್ರ್ಸ್‍ಗಳಾಗಿದ್ದಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಹಾಗಂತ ಇದರಲ್ಲಿ ಏನು ಅಚ್ಚರಿಪಡುವಂತಹುದ್ದು ಇಲ್ಲ. ಯಾಕಂದ್ರೆ ಕ್ರಿಕೆಟ್ ಮತ್ತು ಬಾಲಿವುಡ್ ನಡುವಿನ ಸಂಬಂಧ ಇಂದು ನಿನ್ನೆಯದಲ್ಲ. ಮನ್ಸೂರ್ ಆಲಿ ಖಾನ್ ಪಟೌಡಿಯಿಂದ ಹಿಡಿದು ಹಲವಾರು ಚಿತ್ರನಟಿಯರು ಕ್ರಿಕೆಟಿಗರನ್ನು ಮದುವೆಯಾಗಿದ್ದಾರೆ. ವಿರಾಟ್ ಕೊಹ್ಲಿ, ಹರ್ಭಜನ್ ಸಿಂಗ್, ಮನೀಶ್ ಪಾಂಡೆ ಮೊದಲಾದವರ ಸಾಲಿಗೆ ಮುಂದಿನ ದಿನಗಳಲ್ಲಿ ಕೆ.ಎಲ್. ರಾಹುಲ್ ಕೂಡ ಸೇರ್ಪಡೆಯಾಗಬಹುದು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd