ಬೆಂಗಳೂರಿನಲ್ಲಿ ಐಸಿಸ್ ಉಗ್ರರ ಚಟುವಟಿಕೆಗಳು ನಡೆಯುತ್ತಿವೆ ಎಂಬ ಗುಪ್ತಚರ ಇಲಾಖೆ ಸೂಚನೆ ಮೇರೆಗೆ ಬಲೆ ಬೀಸಿದ್ದ ಎನ್ ಐಎ ಅಧಿಕಾರಿಗಳು ಓರ್ವನನ್ನು ಬಂಧಿಸಿದ್ದಾರೆ. ಫಝಿ ಅಲಿಯಾಸ್ ಫಝೀಲ್ ಉರ್ ರೆಹಮಾನ್ ಬಂಧಿತ ವ್ಯಕ್ತಿಯಾಗಿದ್ದು, ಬೆಂಗಳೂರಿನ ಟ್ಯಾನಿಂಗ್ ರಸ್ತೆಯಲ್ಲಿ ಬಂಧಿಸಲಾಗಿದೆ. ಭಾರತದ ಹಲವೆಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಬೆಂಗಳೂರಿನಲ್ಲಿ ಪ್ಲಾನ್ ನಡೆಯುತ್ತಿದೆ ಎಂಬ ಮಾಹಿತಿಯನ್ನು ಈ ಹಿಂದೆಯೇ ಗುಪ್ತಚರ ಇಲಾಖೆ ನೀಡಿತ್ತು. ಇದರ ಜಾಡು ಹಿಡಿದು ಹೊರಟ ಎನ್.ಐ.ಎ ಅಧಿಕಾರಿಗಳು ಹಲವೆಡೆ ಕಾರ್ಯಾಚರಣೆ ನಡೆಸಿ ಬೆಂಗಳೂರಿನಲ್ಲಿ ಒಬ್ಬನನ್ನು ಬಂಧಿಸಿದ್ದಾರೆ. ಮತ್ತಷ್ಟು ಜನ ಬೆಂಗಳೂರಿನಲ್ಲೇ ಇದ್ದು, ಶಂಕಿತನಿಂದ ಮತ್ತಷ್ಟು ಮಾಹಿತಿಯನ್ನು ಪಡೆಯಲು ಅಧಿಕಾರಿಗಳು ಗುಪ್ತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಕುಮಾರಸ್ವಾಮಿ ಮೊದಲು ತಮ್ಮ ರಾಜೀನಾಮೆಯ ಅಸಲಿ ಕಥೆ ಬಿಚ್ಚಿಡಲಿ: ನಿಮ್ಮ ಕುಟುಂಬ ನೈಸ್ ನಲ್ಲಿ ಎಷ್ಟು ಭೂಮಿ ಕಬಳಿಸಿದೆ? ಸೋಮಶೇಖರ್ ವಾಗ್ದಾಳಿ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ರಾಜೀನಾಮೆ ಮತ್ತು ಸ್ಟಿಂಗ್ ಆಪರೇಷನ್ ಗಳ ಮಹಾ ಸಮರ ಶುರುವಾಗಿದೆ. ಸಿದ್ದರಾಮಯ್ಯ ಅವರನ್ನು ಸ್ಟಿಂಗ್ ಆಪರೇಷನ್ ಮೂಲಕ ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿದೆ...








